January 29, 2026
Screenshot-2023-02-04-172406.png

ಚಳ್ಳಕೆರೆ ಜ.20

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಕ್ರಮಗಳಿಗೆ ಕಡಿವಾಣ ಹಾಕಲು ಜಾರಿಗೆ ತಂದರೂ ಸಹ ಡಿಜಿಟಲ್ ಹಾಜರಾತಿಯಲ್ಲೂ ತಪ್ಪು ಮಾಡಿರುವುದು ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರಗಳು.


ಹೌದು ಜಿಲ್ಲೆಯ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರನ್ನು ದೂರದ ನಗರಗಳಿಗೆ ಕೂಲಿ ಕೆಲಸಕ್ಕೆ ವಲಸೆ ಹೋಗುವುದನ್ನು ತಡೆಯಲು ನರೇಗಾ ಯೋಜನೆಯಡಿಯಲ್ಲಿ ದುಡಿಯುವ ಕೈಗಳಿಗೆ ಸಮುದಾಯ ಕಾಮಗಾರಿಗಳಾದ ಕೆರೆ ಕಾಲುವೆ. ಗೋಕಟ್ಟೆ. ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಮೂಲಕ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಮುಂದಾಗಿದ್ದು ಕೆಲವು ಗ್ರಾಮಪಂಚಾಯಿಗಳಲ್ಲಿ ಕೂಲಿ ಕಾರ್ಮಿರ ಹೆಸರಿನಲ್ಲಿ ನರೇಗಾ ಕೂಲಿ ಹಾಜರಾತಿಯಲ್ಲಿರುವ ಕೂಲಿ ಕಾರ್ಮಿಕರ ಬದಲಾಗಿ ಬೇರೆಯವನ್ನು ಕರೆದುಕೊಂಡು ಹೋಗಿ ಗ್ರಾಮಪಂಚಾಯಿತಿ ಸದಸ್ಯರೊಂದಿಗೆ ಕೈಜೋಡಿಸಿ ಗ್ರಾಮಪಂಚಾಯಿತಿ ಕಾಯಕಮಿತ್ರ ಸಿಬ್ಬಂದಿ ಎನ್ ಎಂ ಎಂ ಎಸ್ ಹಾಜರಾತಿಯಲ್ಲಿ ಲೋಪವೆಸಗಿರುವುದು ಸರಕಾರ ಅಕ್ರಮಗಳಿಗೆ ಕಡಿವಾಣ ಹಾಕಲು ಚಾಪೆ ಕೆಳೆಗೆ ನುಸಳಿದರೆ ಇತ್ತ ಕಾಯಕ ಮಿತ್ರ ನರೇಗಾ ಸಿಬ್ಬಂದಿಗಳು ರಂಗೋಲೆ ಕೆಳಗೆ ನುಸಳಿರುವುದು ಜಿಲ್ಲಾ ನರೇಗಾ ಎಂಐಎಸ್ ಸಂಯೋಜಕರ ಲಾಗಿನ್ ನಲ್ಲಿ ಬಯಲಾಗಿದ್ದು ಕೆಲ ಗ್ರಾಮಪಂಚಾಯಿಗಳಲ್ಲಾಗಿರುವ ಲೋಪವಾಗಿರುವ ಕಾಮಗಾರಿಯ ಎನ್ ಎಂ ಎಂ ಎಸ್ ಹಾಜರಾತಿಯ ಪೋಟೋದೊಂದಿಗೆ ಪತ್ತೆ ಮಾಡಿ ಅಯಾ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಕಳಿಸಿರುವುದು ಬೆಳಕಿಗೆ ಬಂದಿದೆ.
ಸುತ್ತೋಲೆಯಲ್ಲೇನಿದೆ .


ಚಿತ್ರದುರ್ಗ ಜಿಲ್ಲೆಯಲ್ಲಿ
:04.01.2025 ರಿಂದ ದಿ:08.01.2025 ರವರೆಗೆ ಮಹಾತ್ಮಗಾಂಧಿ ನರೇಗಾ
ಯೋಜನೆಯಡಿ ಕಾಮಗಾರಿಗಳ ಅನುಷ್ಟಾನಗೊಳ್ಳುತ್ತಿರುವ ಕಾಮಗಾರಿಗಳ
ಎನ್.ಎಂ.ಎಂ.ಎಸ್ ಹಾಜರಾತಿಯ ಛಾಯಾ ಚಿತ್ರಗಳನ್ನು ಜಿಲ್ಲಾ ಮಟ್ಟದ ಲಾಗಿನ್‌ನಲ್ಲಿ ಕಂಡು ಬಂದಿರುವ ಅಂಶಗಳ ಕುರಿತು ಪರಿಶೀಲಿಸಿ ವರದಿಯನ್ನು ಸಲ್ಲಿಸುವ ಬಗ್ಗೆ. ಜಿಲ್ಲಾ ಎಂ ಐ ಎಸ್ ಸಂಯೋಜಕರು ನರೇಗ, ಜಿಲ್ಲಾ ಪಂಚಾಯತ್ ಚಿತ್ರದುರ್ಗ ಇವರ. ವರದಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು,
ಚಳ್ಳಕೆರೆ ಮತ್ತು ಚಿತ್ರದುರ್ಗ ತಾಲ್ಲೂಕಿನ ಗ್ರಾಮ ಪಂಚಾಯತಿಯಲ್ಲಿ ವ್ಯಾಪ್ತಿಯಲ್ಲಿ ಸಮುದಾಯ ಕಾಮಗಾರಿಗಳು ಚಾಲ್ತಿಯಲ್ಲಿದ್ದು ಸದರಿ
ಕಾಮಗಾರಿಗಳಿಗೆ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಎನ್ ಎಂ ಎಂ ಎಸ್ ಹಾಜರಾತಿ ಛಾಯಚಿತ್ರಗಳನ್ನು ತಪ್ಪಾಗಿ ಇಂಧೀಕರಿಸಿರುವ ಬಗ್ಗೆ ನರೇಗಾ ಯೋಜನೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಲಾಗಿನ್ ಗಳಲ್ಲಿ ಕಂಡುಬಂದಿರುತ್ತದೆ. ಅದರಂತೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ಹಾಜರಾತಿ ನೀಡಿರುವುದು ದಿ:04.01.2025 ರಿಂದ   ದಿ:08.01.2025 ರವರೆಗೆ ಛಾಯಚಿತ್ರಗಳಲ್ಲಿ ಲೋಪದೋಷಗಳು ಈ ಕೆಳಕಂಡಂತ ಕಂಡು
ಬಂದಿರುತ್ತವೆಂದು ಉಲ್ಲೇಖಿತ ವರದಿಯಲ್ಲಿ ಜಿಲ್ಲಾ ಎಂ ಎಂಎಸ್ ಸಂಯೋಜಕರು, ನರೇಗ, ಜಿಲ್ಲಾ ಪಂಚಾಯತ್ ಚಿತ್ರದುಗ
ತಿಳಿಸಿರುತ್ತಾರೆ.
*ಎನ್.ಎಂ.ಎಂ.ಎಸ್ ಹಾಜರಾತಿಯ
ಕೂಲಿಕಾರರ ಸಂಖ್ಯೆ ಸರಿಯಾಗಿ ಕಾಣದಂತೆ ಫೋಟೋ ತೆಗೆಯುತ್ತಿರುವುದು.

*ಕಾಮಗಾರಿ ಸ್ಥಳದಲ್ಲಿ ಹಿಂದಿನ ಯಾವುದೋ ಒಂದು ಪೋಟೋ ತೆಗೆಸಿ ಅದರ ಮೇಲೆ ಫೋಟೋ ತೆಗೆದಿರುವುದು ಕಂಡು ಬಂದಿರುತ್ತದೆ.
.* ಒಂದೇ ದಿನದಲ್ಲಿ ಹಲವು NMR ಗಳಲ್ಲಿ ಅದೇ ಕೂಲಿಕಾರದವನ್ನು ಬಳಸುತ್ತಿರುವುದು ಕಂಡು ಬಂದಿರುತ್ತದೆ.

*ಒಂದೇ ದಿನದಲ್ಲಿ ಹಲವು ಕಾಮಗಾರಿಗಳಲ್ಲಿ ಅದೇ ತೂಲಿಕಾರರವನ್ನು ಬಳಸುತ್ತಿರುವುದು ಕಂಡು ಬಂದಿರುತ್ತದೆ
*NMMS ಹಾಜರಾತಿಯಲ್ಲಿ ಮಹಿಳಾ ಕೂಲಿಕಾರರಿದ್ದು ಅದರ ಫೋಟೋದಲ್ಲಿ ಯಾವುದೇ ಮಹಿಳಾ ಕೂಲಿಕಾರರು ಇಲ್ಲದಿರುವುದು ಕಂಡು
ಬಂದಿರುತ್ತದೆ.
*ಖಾಲಿ ಜಾಗದ ಪೋಟೋ ತೆಗೆದಿರುವುದು.
ಛಾಯಚಿತ್ರಗಳನ್ನು Blur ಆಗಿ ಫೋಟೊ ತೆಗೆಯುತ್ತಿರುವುದು,
*ಕಾಮಗಾರಿಗಳ ಛಾಯಚಿತ್ರಗಳನ್ನು Riverse ಆಗಿ Upload ಮಾಡುತ್ತಿರುವುದು ಕಂಡು ಬಂದಿರುತ್ತದೆ. ಎಂಬ ಅಂಶವನ್ನು ತಮ್ಮ ಅವಗಾಹನೆಗೆ

ಸಲ್ಲಿಸುತ್ತೇನೆ.
ಸಂಜೆ 6 ಗಂಟೆ ಮೇಲೆ ಹಾಜರಾತಿ ಫೋಟೊಗಳನ್ನು ಸರಹಿಡಿಯುತ್ತಿರುವುದು ಕಂಡು ಬಂದಿರುತ್ತದೆ. ಎಂಬ ಅಂಶವನ್ನು ಮುಂದಿನ ಕ್ರಮಕ್ಕಾಗಿ ತಮ್ಮ ಅವಗಾಹನೆಗೆ ಸಲ್ಲಿಸಿದ. ಕಾಮಗಾರಿಗಳ ಪಟ್ಟಿಯನ್ನು ಈ ಚಿತ್ರದೊಂದಿಗೆ ಲಗತ್ತಿಸಿದೆ.
ಆದ್ದರಿಂದ ಉಲ್ಲೇಖಿತ ಜಿಲ್ಲಾ ಎಂ ಐ ಎಸ್ ಸಂಯೋಜಕರು, ನರೇಗ, ಜಿಲ್ಲಾ ಪಂಚಾಯತ್ ಚಿತ್ರದುರ್ಗ ಇವರು ಸಲ್ಲಿಸಿರುವ ವರದಿಯನ್ವಯ ಕೂಡಲೇ ನಿಯಮಾನುಸಾರ ಪರಿಶೀಲನೆ ನಡೆಸಿ 03 ದಿನದೊಳಗಾಗಿ ಸ್ಪಷ್ಟ ವರದಿಯನ್ನು ಸಲ್ಲಿಸಲು ಸೂಚಿಸಿದ.
ತಪ್ಪಿದಲ್ಲಿ ಸದರಿ ವರದಿಯನ್ವಯ ನಿಮ್ಮ ವಿರುದ್ಧ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಕಡಕ್ ಸೂಚನೆ ನೀಡಲಾಗಿದೆ.
ತಪ್ಪಾಗಿ ಎನ್ ಎಂ ಎಂ ಎಸ್ ಪೋಟೊ ಸರೆಯಿಡುವ ಕಾಯಕ ಮಿತ್ರರಿಗೆ ಕಾನೂನು ಕ್ರಮ ಜರುಗಿಸಿದರೆ ಮತ್ತೆ ಇಂತಹ ತಪ್ಪುಗಳು ಮರುಕಳಿಸುವುದಿಲ್ಲ ಎಂಬ ಮಾತಗಳು ಕೇಳಿ ಬರುತ್ತವೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading