January 29, 2026
IMG-20250119-WA0194.jpg

ತಾಲೂಕು ಪಂಚಾಯಿತ್ ಕಚೇರಿಯಲ್ಲಿ ಸಿಬ್ಬಂದಿಕೊರತೆಯಿಂದ ಖಾಲಿ ಖಾಲಿ….
ಹೌದು ಇದು ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ವಿವಿಧ ಗ್ರಾಮಪಂಚಾಯತ್ ಕಚೇರಿಯಲ್ಲಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದ್ದು ನಿಯೋಜನೆ ರದ್ದು ಮಾಡಿ ಮೂಲಸ್ಥಾನದಲ್ಲಿ ಕರ್ತವ್ಯ ಮಾಡಿಕೊಳ್ಳುವಂತೆ ಆದೇಶ ಹೊರಡಿಸಿದ ಕಾರ ಕಚೇರಿಯಲ್ಲಿ ವಿವಿಧ ಪ್ರಭಾರ ಹುದ್ದೆ ಅಲಂಕರಿಸಿದ್ದ ಸಿಬ್ಬಂಬ ಗ್ರಾಮಪಂಚಾಯಿತಿ ಕಚೇರಿಗೆ ಕರ್ತವ್ಯಕ್ಕೆ ಮರಳುವುದರಿಂದ ಕಚೇರಿಯಲ್ಲಿ ಸಿಬ್ಬಂದಿಕೊರತೆಯಿಂದ ಸಾರ್ಚಜನಿಕರ ಕೆಲಸ ವಿಳಂಭವಾಗುವ ಸಾಧ್ಯತೆಯಾಗಲಿದೆ. ಯಾವುದೇ ಸರಕಾರಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕಾದರೆ ಸಿಬ್ಬಂದಿಯ ಕೊರತೆ ಕಾಣದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಆದರೆ ತಾಲೂಕಿನ ಬಹುತೇಕ ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದ್ದು, ಜನಸಾಮಾನ್ಯರು ಸರಕಾರದಿಂದ ಆಗಬೇಕಾದ ಕೆಲಸಗಳು ಸೂಕ್ತ ಸಮಯಕ್ಕೆ ಆಗದೆ ಸಂಬಂಧಪಟ್ಟ ಅಧಿಕಾರಿಗಳಿಗಾಗಿ ಸರಕಾರಿ ಕಚೇರಿಗಳ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ಚಳ್ಳಕೆರೆ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಂಜುರಾತಿ ಹುದ್ದೆ 24
ತಾಲೂಕು ಪಂಚಾಯತ್ ಕಚೇರಿಯಲ್ಲಿ ಖಾಲಿಯಿರುವ ಹುದ್ದೆಗಳು16.

;ಸಹಾಯಕ ಲೆಕ್ಕಾಧಿಕಾರಿ 1.ಸಹಾಯಕ ನಿರ್ದೇಶಕ ಗ್ರಾ ಉ1.ಕಿರಿಯ ಇಂಜಿನಿಯರ್ 1.ಶೀಘ್ರಲಿಪಿಗಾರ1.ಪ್ರಥಮ ದರ್ಜೆ ಸಹಾಯಕ ಆಡಳಿತ 1.ಪ್ರಥಮ ದರ್ಜೆ ಸಹಾಯಕ ಲೆಕ್ಕ ಶಾಖೆ1. ಬೆರಳಚ್ಚುಗಾರ1.ವಾಹನ ಚಾಲಕ 1.ಡಿ ದರ್ಜೆ1. ಮುಖ್ಯಾದ ಹುದ್ದೆಗಳೇ ಖಾಲಿ ;ಇದ್ದು ಇಡೀ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವೇತನ ಬಿಲ್ . ನೌಕರರ ಆರೋಗ್ಯ ಬಿಲ್ ಸೇರಿದಂತೆ ಬಿಲ್ ಮಾಡುವ ಲೆಕ್ಕಾಧಿಕಾರಿ .ಸಹಾಯಕ ಲೆಕ್ಕಾಧಿಕಾರಿ.ಶೀಘ್ರಲಿಪಿ.ಸಹಾಯಕ ನಿರ್ದೇಶಕ ಹುದ್ದೆಗಳನ್ನು ಗ್ರಾಮಪಂಚಾಯಿತಿ ಪಿಡಿಒ ಹಾಗೂ ಗ್ರಾಪಂ ಲೆಕ್ಕ ಸಹಾಯಕರು ನಿರ್ವಹಿಸುತ್ತಿದ್ದರು.
ನಿಯೋಜನೆ ರದ್ದು ಮಾಡಿ ಮೂಲಸ್ಥಾನದಲ್ಲಿ ಕರ್ತವ್ಯಕ್ಕೆ ಹಾಜರಿಯಾಗುವಂತೆ ನೋಟಿಸ್ ಜಾರಿ ಮಾಡಿರುವುದರಿಂದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಿಬ್ಬಂಬಕೊರತೆಯಾಗುವ ಜತೆಗೆ ಸಾರ್ವಜನಿಕರ ಕೆಲಸ ವಿಳಂಭವಾಗುವ ಸಾಧ್ಯೆತೆ ತಳ್ಳಿಹಾಕುವಂತಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ನೀರು. ಮೂಲಭೂತ ಸಮಸ್ಯೆಗಳ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯಲ್ಲಿ ಸಿಬ್ಬಂದಿಯ ಕೊರತೆ ಕಾಡುತ್ತಿದೆ.
ಈಗಲಾದರೂ ಸಕರಕಾರ ಚಳ್ಳಕೆರೆ ತಾಲೂಕು ಪಂಚಾಯತ್ ಕಚೇರಿಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವರೇ ಕಾದು ನೋಡ ಬೇಕಿದೆ….

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading