ಚಿತ್ರದುರ್ಗ ಡಿ.19:
ಪೋಲಿಯೋ ಹನಿ ಹಾಕಿಸೋಣ ಅಂಗವಿಕಲತೆ ತಪ್ಪಿಸೋಣ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಹೇಳಿದರು.
ಇಲ್ಲಿನ ಯೂನಿಟಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನಲ್ಲಿ ಗುರುವಾರ ಪೋಲಿಯೋ ಲಸಿಕೆ ಹಾಕುವ ತಂಡದ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.
ಡಿಸೆಂಬರ್ 21 ಪೋಲಿಯೋ ಭಾನುವಾರ ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆ ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರ ಜವಾಬ್ದಾರಿ ಆಗಿದ್ದು, ಬೂತ್ ದಿನದಂದು ಸಕಾಲಕ್ಕೆ ತಂಡದ ಸದಸ್ಯರು ಹಾಜರಾಗಿ ಮಕ್ಕಳನ್ನು ಕರೆತರುವ ಪೆÇೀಷಕರನ್ನು ಪೋಲಿಯೋ ಬೂತ್‍ನಲ್ಲಿ ಸ್ವಾಗತಿಸುವ ಮುಖಾಂತರ ವ್ಯಾಕ್ಸಿನ್ ಕ್ಯಾರಿಯರ್‍ನಿಂದ ಒಂದು ವಾಯಿಲ್ ಮಾತ್ರ ಹೊರತೆಗೆದು ಅದು ಮುಗಿಯುವವರೆಗೆ ಕ್ಯಾರಿಯರ್ ಒಳಗಡೆ ಹಾಕಬಾರದು. ಲಸಿಕಾ ಗುಣಮಟ್ಟ ಖಾತ್ರಿ ಪಡಿಸಿಕೊಂಡು ಎರಡು ಪೋಲಿಯೋ ಹನಿ ಮಕ್ಕಳಿಗೆ ಹಾಕಿ ಎಡಗೈ ಕಿರು ಬೆರಳಿಗೆ ಗುರುತು ಹಾಕುವುದು. ಡಿ.22 ರಿಂದ 24ರವರೆಗೆ ಮೂರು ದಿವಸ ನಿಗದಿಪಡಿಸಿದ ಮನೆ ಭೇಟಿ ಮಾಡಿ ಸಮುದಾಯದ ಸಹಭಾಗಿತ್ವದೊಂದಿಗೆ ಲಸಿಕೆ ಹಾಕದೆ ಉಳಿದ ಮಕ್ಕಳ ಗುರುತಿಸಿ ಪೋಲಿಯೋ ಲಸಿಕೆ ಹಾಕುವ ಬಗ್ಗೆ ಮಾಹಿತಿ ನೀಡಿದರು.
ಯೂನಿಟಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಪ್ರಾಂಶುಪಾಲ ಮೃತ್ಯುಂಜಯ ಮಠದ್ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ನಾವುಗಳು ಕೈಜೋಡಿಸುತ್ತೇವೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ರುದ್ರಮುನಿ ಅವರು ವರದಿ ನಮೂನೆಗಳ ಭರ್ತಿ ಮಾಡುವ ಕುರಿತು ಮಾಹಿತಿ ನೀಡುತ್ತಾ ಮನೆ ಭೇಟಿ ಮಾಡಲು ಬಂದ ಆರೋಗ್ಯ ಕಾರ್ಯಕರ್ತರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ತರಬೇತಿ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುಪ್ರೀತಾ, ನಿತಿನ್ ಹಾಗೂ ಬಿಎಸ್ಸಿ ನರ್ಸಿಂಗ್ ಮತ್ತು ಜಿಎನ್‍ಎಂ ವಿದ್ಯಾರ್ಥಿಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.