December 15, 2025
IMG-20241219-WA0277.jpg

ಚಿತ್ರದುರ್ಗ

ಖ್ಯಾತ ಲೇಖಕ ಹಾಗೂ ಸಾಹಿತಿಗಳಾದ ಸಂತೋಷ್ ಕುಮಾರ್ ಮೆಹೇಂದಳೆ ರವರ ಸಾರಥ್ಯದಲ್ಲಿ ಎರಡು ದಿನದ ರಾಜ್ಯಮಟ್ಟದ ಕಥಾಯಾನ ಕಾರ್ಯಗಾರ ಯಶಸ್ವಿ

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಹಾಗೂ ವಿಶ್ವಮಾನವ ಪದವಿ ಪೂರ್ವ ಕಾಲೇಜು ಸೀಬಾರ ಗುತ್ತಿನಾಡು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಥಾಯಾನ ಕಾರ್ಯಕ್ರಮದ ಉದ್ಘಾಟನೆ ಇಂದು ಜರುಗಿತು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಖ್ಯಾತ ವಕೀಲರು ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾದ ಬಿ.ಕೆ ರಹಮತ್ ಉಲ್ಲಾ ರವರು ಮಾತನಾಡಿ ಇಂತಹ ಕಾರ್ಯಗಾರಗಳು ಇಂದಿನ ಯುವ ಸಾಹಿತಿಗಳಿಗೆ ಅತ್ಯಂತ ಅವಶ್ಯಕ. ಹಲವು ಯುವ ಸಾಹಿತಿಗಳಿಗೆ ಬರೆಯುವ ಉತ್ಸಾಹ ಇರುತ್ತದೆ. ಆದರೆ ಹೇಗೆ ಬರೆಯಬೇಕು? ಬರಹಕ್ಕೆ ಯಾವ ವಸ್ತು ಆಯ್ಕೆ ಮಾಡಿಕೊಳ್ಳಬೇಕು? ಬರಹ ಶೈಲಿ ಹೇಗಿರಬೇಕೆಂಬುದರ ಅರಿವು ಇಲ್ಲದೆ ಒದ್ದಾಡುವ ಸ್ಥಿತಿಯಲ್ಲಿ ಇರುತ್ತಾರೆ. ಆದಕಾರಣ ಅನುಭವಿ ಹಾಗೂ ನುರಿತ ಸಾಹಿತಿಗಳಾದ ಸಂತೋಷ ಮೆಹಂದಳೆ ಅಂತಹ ವೈಚಾರಿಕ ಹಾಗೂ ವೈಜ್ಞಾನಿಕ ಬರಹಗಾರರಂತಹ ಸಂಪನ್ಮೂಲ ವ್ಯಕ್ತಿಗಳಿಂದ ಈ ಎರಡು ದಿನಗಳ ಕಾರ್ಯಾಗಾರವನ್ನು ಮುನ್ನಡೆಸುತ್ತಿರುವುದು ಅತ್ಯಂತ ಉಪಯುಕ್ತವಾದ ಕಾರ್ಯಗಾರವಾಗಿದೆ ಎಂದರು.

ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿದ ಶ್ರೀಮತಿ ದಯಾ ಪುತ್ತೂರ್ಕರ್ ರವರು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಇಂತಹ ಅನೇಕ ಸೃಜನಾತ್ಮಕ ಹಾಗೂ ಉಪಯುಕ್ತ ಕಾರ್ಯಕ್ರಮಗಳನ್ನು ಕಳೆದ 18 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಡಾ. ಎಸ್. ಎಚ್ ಶಫಿವುಲ್ಲಾ ರವರು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಇಂದು ಮತ್ತು ಮುಂದೆ ಎಲ್ಲಾ ದಿನಗಳಲ್ಲೂ ಕೂಡ ಇಂತಹ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಗಾರಗಳನ್ನು ಏರ್ಪಡಿಸುವ ಮೂಲಕ ನಮ್ಮ ವೇದಿಕೆ ಕನ್ನಡ ಸೇವೆಯನ್ನು ಸದಾ ಮಾಡುತ್ತಿರುತ್ತದೆ. ಈ ಮೂಲಕ ಕನ್ನಡ ನಾಡು ನುಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಅಳಿಲು ಸೇವೆಯನ್ನು ಮಾಡುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಇತಿಹಾಸ ಸಂಶೋಧಕ, ಡಾ.ಬಿ ರಾಜಶೇಖರಪ್ಪನವರು ಐತಿಹಾಸಿಕ ಸಂಶೋಧನೆ ಮತ್ತು ಬರಹವನ್ನು ಕುರಿತು ಉಪನ್ಯಾಸವನ್ನು ಮಂಡಿಸಿ ಸಂವಾದದಲ್ಲಿ ಶಿಬಿರಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ಸಾಹಿತಿಗಳು ಹಾಗೂ ಅಂಕಣಕಾರರಾದ ಸಂತೋಷ್ ಕುಮಾರ್ ಮೆಹಂದಾಳೆ ಅವರು ಕಥೆಯ ರಚನೆ, ವಸ್ತು, ಶೈಲಿ, ಪ್ರಕಾರಗಳನ್ನು ಕುರಿತು ವಿಚಾರವನ್ನು ಮಂಡಿಸುತ್ತಾ ಪ್ರಾಯೋಗಿಕವಾಗಿ ಸಂವಾದವನ್ನು ನಡೆಸುತ್ತ ಶಿಬಿರಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿವಾನಂದ್ ಬಂಡೆ ಮೇಗಳ ಹಳ್ಳಿ ರವರು ನಿರೂಪಿಸಿದರು, ಶೋಭಾ ಮಲ್ಲಿಕಾರ್ಜುನ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಕಾರ್ಯಕ್ರಮದಲ್ಲಿ ವಿಶ್ವಮಾನವ ಪದವಿಪೂರ್ವ ಕಾಲೇಜಿನ ರೂವಾರಿಗಳಾದ ಜಲೀಲ್ ಸಾಹೇಬ್ ಕಾರ್ಯದರ್ಶಿಗಳಾದ ನೀಲಕಂಠ ದೇವರು ಪ್ರಾಂಶುಪಾಲರಾದ ಸುಧಾ ಲೋಕೇಶ್ ಉಪನ್ಯಾಸಕ ತಿಪ್ಪೇಸ್ವಾಮಿ, ವಿದ್ಯಾರ್ಥಿಗಳ ಕಥಾ ಕಮ್ಮಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪೂಜಾ.ಕೆ, ದ್ವಿತೀಯ ಸ್ಥಾನ ವೈಷ್ಣವಿ.ಐ ತೃತೀಯ ಸ್ಥಾನ ಸಂಜನಾ.ಆರ್ ಪಡೆದು ವಿಶ್ವ ಮಾನವ ವಿದ್ಯಾ ಸಂಸ್ಥೆಗೆ ಕೀರ್ತಿ ತಂದರು.

ಈ ಕಾರ್ಯಕ್ರಮದಲ್ಲಿ ಶೋಭಾ ಮಲ್ಲಿಕಾರ್ಜುನ್, ಚಿತ್ರದುರ್ಗದ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಮೂರ್ತಿ.ಟಿ ಕೋಡಿಹಳ್ಳಿ, ಶಿವರುದ್ರಪ್ಪ ಪಂಡ್ರಹಳ್ಳಿ, ಪ್ರವೀಣ್ ಬೆಳಗೆರೆ ವಿನಾಯಕ,ಸುಮಾ ರಾಜಶೇಖರ್, ಶಾರದಾ.ಬಿ ಜೈರಾಂ, ಡಾ.ಗೌರಮ್ಮ, ಅನಿತಾ, ಉಷಾರಾಣಿ, ಸತೀಶ್ ಕುಮಾರ್, ಮಹಮ್ಮದ್ ಸಾದತ್, ನಿರ್ಮಲಾ ಮಂಜುನಾಥ್, ಶಾಂತಮ್ಮ ಕೆ. ಟಿ, ಬೆಳಕು ಪ್ರಿಯ, ಜಯದೇವ್ ಮೂರ್ತಿ, ವೇದಮೂರ್ತಿ, ಜಯಪ್ರಕಾಶ್, ಪ್ರವೀಣ್ ಬೆಳೆಗೆರೆ,ನವೀನ್ ಮಸ್ಕಲ್, ನವೀನ್ ಸಜ್ಜನ್, ಬಸವರಾಜ್ ಹರ್ತಿ,ಬಿ.ಕೆ.ಎಸ್ ಅಂಜುಮ್,
,ವೀರೇಶ್ ಪಿಲ್ಲಹಳ್ಳಿ, ಮೀರಾ ನಾಡಿಗ್, ತಿಪ್ಪೀರಮ್ಮ , ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಶಿಬಿರಾರ್ಥಿಗಳು ಆದ ನಳಿನಿ ಭೀಮಪ್ಪ,ಸಂಕಲ್ಪ, ಚೈತ್ರ,ವಿಜಯಲಕ್ಷ್ಮಿ ಲಿಂಗಸೂರ್,ಚಂದ್ರಿಕಾ,ಸುರೇಂದ್ರ ಸ್ವಾಮಿ, ಗಣೇಶ್ ಹೆಗ್ಗಡೆ, ಗೀತಾ ಜಗಳೂರು, ಕಿರಣ್ ಬಾಗಲ ಕೋಟೆ, ಮಂಜುನಾಥ್ ಮೊಬಗಲಿ, ಮುತ್ತುರಾಜ್, ಪಂಪನ ಗೌಡ, ಸಂತೋಷ್ ಕುಮಾರ್, ಸಂಪತ್ ಕುಮಾರ್, ತಿಪ್ಪೇಸ್ವಾಮಿ, ಶಿವಕುಮಾರ್ ವಾಲಿ, ವೆಂಕಟೇಶ್, ಕವಿತಾ, ಹಾಗೂ ವಿಶ್ವಮಾನವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪಾಲ್ಗೊಂಡಿದ್ದರು ಕಾರ್ಯಕ್ರಮವು ಎಲ್ಲರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading