ಚಳ್ಳಕೆರೆ ನ.19 ಗ್ರಾಮೀಣ ಭಾಗದ ಜನರು ವಿವಿಧ ಸಾಲ ಸೌಲಭ್ಯ ಬೇಕಾದವರು ಬ್ಯಾಂಕಿಗೆ ಬೇಕಾದ ಅಗತ್ಯ ದಾಖಲೆ ನೀಡಿದರೆ ಅತ್ಯಂತ ಕಡಿಮೆ ಅವಧಿಯ ಸಾಲ ಮಂಜೂರು ಮಾಡುತ್ತೇವೆ’ ಎಂದು ಕೆನರಾ ಬ್ಯಾಂಕ್ ಕಿರಿಯ ವ್ಯವಸ್ಥಾಪಕ ಜಿ.ಅರವಿಂದಕುಮಾರ್ ಹೇಳಿದರು.
ತಾಲೂಕಿನ ನಾರಯಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಶೌಚಾಲಯ ನಿರ್ಮಣಕ್ಕಾಗಿ ಕೆನರಾ ಬ್ಯಾಂಕ್ ಸಂಸ್ಥಾಪಕ ದಿನಾಚರಣೆ ಅಂಗವಾಗಿ ಎರಡು ಲಕ್ಷ ರೂ ದೇಣಿಗೆ ನೀಡಿ ಮಾತನಾಡಿರು.







ದೇವರಮರಿಕುಂಟೆ ಕೆನರಾ ಬ್ಯಾಂಕಿನಲ್ಲಿ ವ್ಯಾಪ್ತಿಯಲ್ಲಿ ಬ್ಯಾಂಕಿಗೆ ಬರುವ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದೇವೆ. ಗೃಹಸಾಲ, ಶಿಕ್ಷಣ ಸಾಲ, ವಾಹನಗಳ ಮೇಲೆ, ಎಲೆಕ್ಟ್ರಿಕ್ ವಾಹನಗಳ ಮೇಲೆ, ಒಡವೆಗಳ ಮೇಲೆ, ವ್ಯಾಪಾರಾಭಿವೃದ್ದಿಗೆ ಓಡಿ ಸೌಲಭ್ಯ, ರೈತರಿಗೆ ಬೆಳೆಸಾಲ, ಜಮೀನು ಅಭಿವೃದ್ಧಿ ಸಾಲಗಳನ್ನು ನೀಡುತ್ತಿದ್ದೇವೆ’.
ಅಂಬಲ್ ಸುಬ್ಬರಾವ್ ಪೈ ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಎರಡು ಲಕ್ಷರೂ ದೇಣಿಗೆ ನೀಡುತ್ತಿದ್ದು ಕಟ್ಟಡ ನಿರ್ಮಾಣದ ಹಂತ ಹಂತವಾಗಿ ಹಣ ನೀಡಲಾಗುವುದು ನಿಗದಿತ ಅವದಿಯೊಳಗೆ ಗುಣ ಮಟ್ಟದ ಶೌಚಾಲಯ ನಿರ್ಮಿಸಿ ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಧು . ಎಸ್ ಡಿ ಎಂ ಸಿ ಡಿ ಅಧ್ಯಕ್ಷ ಅನಿಲ್ . ಸದಸ್ಯ ರವಿಕುಮಾರ್. ಪ್ರಹ್ಲಾದ್. ನಿವೃತ್ತ ಶಿಕ್ಷಕ ಗೋವಿಂದಪ್ಪ. ಸಂಪನ್ಮೂಲ ವ್ಯಕ್ತಿ ವಿಜಯಕುಮಾರಿ.ಮುಖ್ಯ ಶಿಕ್ಷಕ ಹೆಚ್. ಗಿರೀಶ್.ಸಹಶಿಕ್ಷಕಿ ವೀಣಾ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.