
ಹೊಸುದುರ್ಗ ನ.19: ಹೊಸದುರ್ಗ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಮಹೋತ್ಸ ಕಾರ್ಯಕ್ರಮದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಸಮಾಜ ಪರಿವರ್ತನೆಯಾಗುವುದು ವ್ಯಕ್ತಿಯಿಂದ ಅಲ್ಲಾ
ಶಕ್ತಿಗಳಿಂದ ಮಾತ್ರ ಸಾಧ್ಯ- ಜಿ.ವಿ.ತಿಮ್ಮರಾಜು
ಹೊಸದುರ್ಗ: ಸಮಾಜ ಯಾವೋಬ್ಬ ವ್ಯಕ್ತಿಯಿಂದ ಅಥವಾ ರಾಜಕಾರಣಿಗಳಿಂದ ಪರಿವರ್ತನೆಯಾಗುವುದು ಸಾದ್ಯವಿಲ್ಲಾ ಸಮಾಜ ಪರಿವರ್ತನೆಯಾಗುವುದು ಶಕ್ತಿಗಳಿಂದ ಮಾತ್ರ ಸಾದ್ಯ ಎಂದು ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ. ಅಭಿಪ್ರಾಯಿಸಿದರು
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಮಹೋತ್ಸ ಕಾರ್ಯಕ್ರಮದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಸುಮಾರು ೩೦೦ ಕೀರ್ತನೆಗಳನ್ನು ರಚಿಸಿ ಅವುಗಳನ್ನು ಜನ ಸಾಮಾನ್ಯರಿಗೆ ಹಾಡು ಆಡುಭಾಷೆಯಲ್ಲಿ ಮನಮುಟ್ಟುವಂತೆ ಹಾಡುತ್ತಾ ಸಮಾಜ ಪರಿವರ್ತನೆ ಮಾಡುವ ಕೆಲಸವನ್ನ ಕನಕದಾಸರು ಮಾಡಿದ್ದಾರೆ ಎಂದು ತಿಳಿಸಿದ ಅವರು ೮೦೦ ವರ್ಷಗಳ ಹಿಂದೆ ಬಸವಣ್ಣನವರೂ ಇದೇ ಕೆಲಸ ಮಾಡಿದ್ದಾರೆ ೫೦೦ ವರ್ಷಗಳ ಹಿಂದೆ ಕನಕದಾಸರು ಇದೇ ಕೆಲಸವನ್ನ ಮಾಡಿದ್ದಾರೆ ಎಂದರು.
ಸುಮಾರು ೮೫೦ ವರ್ಷಗಳ ಹಿಂದೆ ಬಸವಾದಿ ಶರಣರು ಜಾತಿ ವ್ಯವಸ್ದೆಯನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲಾ ಜಾತಿಯನ್ನೂ ಒಗ್ಗೂಡಿಸಿ ಕಾಯಕವೇ ಕೈಲಾಸ ಎಂಬ ವ್ಯಾಕ್ಯ ಹೇಳುವುದರ ಮೂಲಕ ಸಮಾಜವನ್ನ ತಿದ್ದುವ ಕೆಲಸ ಮಾಡಿದ್ದರು ಎಂದು ತಿಳಿಸಿದ ಅವರು ಸಮಾಜ ಕಲುಷಿತವಾದಾಗ ಅದನ್ನು ಸನ್ಮಾರ್ಗದ ಮೂಲಕ ಸರಿಪಡಿಸುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿಆನಂದ್, ಉಪಾಧ್ಯಕ್ಷೆ ಶ್ರೀಮತಿ ಗೀತಾಆಸಂಧಿ,ಹಿರಿಯ ಸದಸ್ಯರುಗಳಾದ ದೊಡ್ಡಯ್ಯ,ದಾಳಿಂಬೆಗಿರೀಶ್ ಸೇರಿದಂತೆ ಸರ್ವ ಸದಸ್ಯರುಗಳು ಪುರಸಭಾ ಸಿಬ್ಬಂಧಿ ವರ್ಗದವರು ಉಪಸ್ಧಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.