September 17, 2025
d19-tm2.jpg


ಹೊಸದುರ್ಗ: ಪಟ್ಟಣದಲ್ಲಿ 23ವಾರ್ಡ್ಗಳಲ್ಲೂ ಸಹಾ ಬೀದಿ ನಾಯಿಗಳು ಸಾರ್ವಜನಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಸಾರ್ವಜನಿಕ ವಲಯಗಳಲ್ಲಿ ಹಲವು ದೂರುಗಳು ಬಂದಿದ್ದು ಹಾಗೂ ತಾಲ್ಲೂಕು ಕೆ.ಡಿ.ಪಿ ಸಭೆಯಲ್ಲಿ ಶಾಸಕ ಬಿ.ಜಿ ಗೋವಿಂದಪ್ಪ ಅವರು ನೀಡಿದ್ದ ನಿರ್ದೇಶನದಂತೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಾರ್ವಜನಿಕರು, ಜನ ಪ್ರತಿನಿಧಿಗಳು ಹಾಗೂ ಪುರಸಭಾ ಸದಸ್ಯರು ಮನವಿ ಮಾಡಿದ್ದರು ಅದರಂತೆ ಪಟ್ಟಣದಲ್ಲಿ ಬೀದಿ ನಾಯಿಗಳನ್ನು ಹಿಡಿದು ನಿಯಂತ್ರಣ ಮಾಡುವ ಕೆಲಸಕ್ಕೆ ಇಲ್ಲಿನ ಪುರಸಭೆ ಮುಂದಾಗಿದೆ.
ಈ ಬಗ್ಗೆ ಮುಖ್ಯಾಧಿಕಾರಿ ತಿಮ್ಮರಾಜು.ಜಿ.ವಿ ಮಾತನಾಡಿ ಈಗಾಗಲೇ ಪ್ರತಿ 6ತಿಂಗಳಿಗೊಮ್ಮೆ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿರುವ ಪುರಸಭೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಂಟಿ ಸಂಯೋಗದೊಂದಿಗೆ ಕೆ.ಆರ್ ಪೇಟೆ ಮೂಲದ ನಾಗರಾಜ್ ಎಂಬುವವರಿಗೆ ದರ ಪಟ್ಟಿ ಆಧಾರಿಸಿ ಕಾರ್ಯದೇಶ ನೀಡಿಲಾಗಿದ್ದು ಸದರಿಯವರು ಬೀದಿ ನಾಯಿಗಳನ್ನು ಹಿಡಿದು ಆಂಟಿ ರ‍್ಯಾಬೀಸ್ ವ್ಯಾಕ್ಸಿನ್ ಹಾಕುವ ಮೂಲಕ ಬೀದಿ ನಾಯಿಗಳು ದಾಳಿ ಮಾಡುವುದನ್ನು ನಿಯಂತ್ರಿಸಲು ಮುಂದಾಗಿದ್ದಾರೆ ಎಂದರು.
ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಎಸ್ ಆನಂದ್ ಮಾತನಾಡಿ ಸಾಕು ನಾಯಿಗಳ ಮಾಲೀಕರು ತಮ್ಮ ತಮ್ಮ ನಾಯಿಗಳನ್ನು ಮನೆಯಲ್ಲಿ ಕಟ್ಟಿಕೊಳ್ಳತಕ್ಕದ್ದು ಹಾಗೂ ತಮ್ಮ ನಾಯಿಗಳು ಕಾಣೆಯಾದಲ್ಲಿ ಪುರಸಭೆ ಹೊಣೆಯಾಗಿರುವುದಿಲ್ಲ ಹಾಗೂ ಯಾವುದೇ ಪರಿಹಾರ ನೀಡಲು ಅವಕಾಶ ಇರುವುದಿಲ ಎಂದರು ನಾಯಿ ಮಾಲಿಕರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕರಾದ ಬಸವರಾಜ.ಎಂ, ಕಲ್ಪನ.ಟಿ ಪಶುವೈದ್ಯ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ|| ಕಿರಣ್ ಹಾಗೂ ಪುರಸಭಾ ಸದಸ್ಯರು ಜೊತೆಗೆ ಸಿಬ್ಬಂದಿಗಳಾದ ವಿಕಾಸ್.ಹೆಚ್, ಕುಮಾರ.ಟಿ ಮತ್ತು ಪೌರಾರ್ಮಿಕರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading