ನಾಯಕನಹಟ್ಟಿ : ತಳುಕು ಹೋಬಳಿಯ ಕೆರೆಯಾಗಲಹಳ್ಳಿ
ಗ್ರಾಮದ ರಾಜ ನಾಯ್ಕ ಕಾಣೆಯಾಗಿರೋ ಬಗ್ಗೆ ದೂರು ದಾಖಲಿಸದ ಪೊಲೀಸರ ವಿರುದ್ಧ ಠಾಣೆ ಮುಂದೆ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳಿಂದ ತಳಕು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.











ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಹೋಬಳಿಯ ಜಂಬಯ್ಯನಹಟ್ಟಿ ಗ್ರಾಮದ ಲಾರಿ ಮಾಲೀಕ ಮತ್ತು ಡ್ರೈವರ್ ಕಮಲ ನಾಯ್ಕ ಇಬ್ಬರು ಸೇರಿ ತಳಕು ಹೋಬಳಿಯ ಕೆರೆಯಾಲಗಳಹಳ್ಳಿ ಗ್ರಾಮದ ರಾಜ ನಾಯ್ಕ 35 ವರ್ಷದ ಯುವಕನನ್ನು ಸುಮಾರು 20 ದಿನಗಳ ಹಿಂದೆ ಲಾರಿ ಕ್ಲೀನರ್ ಕೆಲಸಕ್ಕೆ ಎಂದು ಕರೆದುಕೊಂಡು ಹೋಗಿದ್ದು, ಆದರೆ ಈವರೆಗೂ ರಾಜ ನಾಯ್ಕ್ ಮನೆಗೆ ಬಾರದೇ ಇರುವುದರಿಂದ ಕುಟುಂಬಸ್ಥರು ಲಾರಿ ಮಾಲೀಕನನ್ನು ವಿಚಾರಿಸಿದರೆ ಅಸ್ಪಷ್ಟ, ಹಾರಿಕೆ, ಉಡಾಫೆ ಉತ್ತರ ನೀಡಿದ್ದರಿಂದ, ಲಾರಿ ಮಾಲೀಕ ಹಾಗೂ ಡ್ರೈವರ್ ವಿರುದ್ಧ ತಳಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ, ಲಾರಿ ಮಾಲಿಕ ಹಾಗು ಡ್ರೈವರ್ ವಿರುದ್ಧ ಯಾವುದೇ ರೀತಿ ಕ್ರಮ ಜರುಗಿಸದೆ ಇದ್ದಿದ್ದರಿಂದ ಹಾಗೂ ರಾಜ ನಾಯ್ಕ್ ನ ಸುಳಿವು ಇದುವರೆಗೂ ನೀಡದೆ ಪ್ರಕರಣ ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ತಳಕು ಪೋಲಿಸ್ ಕಾಣೆ ಮುಂಭಾಗ ಪ್ರತಿಭಟನೆಯ ಮೂಲಕ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಳಕು ಪೊಲೀಸ್ ವೃತ್ತ ನಿರೀಕ್ಷಕರಾದ ಹನುಮಂತಪ್ಪ ಎಸ್ ಶಿರೇಹಳ್ಳಿ ರವರ ಭರವಸೆ ಮೇರೆಗೆ ಪ್ರತಿಭಟನೆಯನ್ನು ವಾಪಸ್ ಪಡೆದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಚಳ್ಳಕೆರೆ ತಾಲೂಕು ಅಧ್ಯಕ್ಷ ಚಂದ್ರಶೇಖರ್ ನಾಯ್ಕ್, ದೇವರಹಳ್ಳಿ ಮೂಲೆ ಮನೆ ತಿಪ್ಪೇಸ್ವಾಮಿ, ಹೊನ್ನೂರು ಶ್ರೀನಿವಾಸ್, ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಕೆ ಮಂಜಣ್ಣ, ಚಳ್ಳಕೆರೆ ಯುವ ಘಟಕದ ಅಧ್ಯಕ್ಷ ಪ್ರಶಾಂತ್ ರೆಡ್ಡಿ, ಲಕ್ಷ್ಮೀಬಾಯಿ, ಸೀತಾಬಾಯಿ, ವಿನೋದಬಾಯಿ, ಸರೋಜಾ ಬಾಯಿ ಮುಂತಾದವರು ಹಾಜರಿದ್ದರು.
ಶೀಘ್ರವೇ ಆರೋಪಿಗಳನ್ನು ಬಂಧಿಸಿ ರಾಜ ನಾಯ್ಕ್ ನ ಪತ್ತೆ ಹಚ್ಚಿ, ಲಾರಿಯನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗುವುದು. ತಪ್ಪಿಸ್ಥತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಹನುಮಂತಪ್ಪ ಎಸ್ ಶಿರೇಹಳ್ಳಿ.
ಪೊಲೀಸ್ ವೃತ್ತ ನಿರೀಕ್ಷಕರು.
ತಳಕು ವಲಯ
ತಪ್ಪಿಸಸ್ಥರನ್ನು ಬಂಧಿಸಿ ರಾಜ ನಾಯ್ಕನ ಹುಡುಕಿ ಕೊಡಬೇಕು. ರಾಜ ನಾಯ್ಕನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ
ಬೇಡರೆಡ್ಡಿಹಳ್ಳಿ ಬಸವರೆಡ್ಡಿ.
About The Author
Discover more from JANADHWANI NEWS
Subscribe to get the latest posts sent to your email.