September 17, 2025
31-1433064509-accident6000.jpg

ನಾಯಕನಹಟ್ಟಿ : ಹೋಬಳಿಯ ನೇರಲಗುಂಟೆ ಗ್ರಾಮದ ಹತ್ತಿರ ಬೈಕ್ ಹಾಗೂ ಟಾಟಾ ಏಸ್ ಅಪಘಾತದಲ್ಲಿ ಇಬ್ಬರು ಯುವಕರು ಸಾವನಪ್ಪಿದ್ದಾರೆ.

ನ 19 ರಂದು ಸಂಜೆ 6 ರಿಂದ 6:30 ಚಳ್ಳಕೆರೆ ಕಡೆಯಿಂದ ಬೈಕಿನಲ್ಲಿ ಹೊನ್ನೂರ ಹಾಗೂ ಪ್ರಜ್ವಲ್ ಎಂಬ ಯುವಕರು ಬರುತ್ತಿರುವ ಸಂದರ್ಭದಲ್ಲಿ ನೇರಲಗುಂಟೆ ಕಡೆಯಿಂದ ಬಂದ ಟಾಟಾ ಏಸ್ ಅಪಘಾತವಾಗಿ ಇಬ್ಬರಿಗೂ ಸ್ಥಳದಲ್ಲೇ ಸಾವನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತಪಟ್ಟವರನ್ನು ಜಗಳೂರು ತಾಲ್ಲೂಕಿನ ದಿಬ್ಬದಹಳ್ಳಿ ಗ್ರಾಮದವರೆಂದು ಗುರುತಿಸಲಾಗಿದೆ. ಮೃತರು ಎಲೆಕ್ಟ್ರಿಕಲ್ ವೈರಿಂಗ್ ವೃತ್ತಿ ಮಾಡುತ್ತಿದ್ದರೆಂದು ತಿಳಿದು ಬಂದಿದೆ.

ಘಟನೆ ಕುರಿತಂತೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading