December 14, 2025
IMG-20241119-WA0172.jpg

ಚಳ್ಳಕೆರೆ ನ.19 ನಗರದ ವಿವಿಧ ಯೋಜನೆಗಡಿಯಲ್ಲಿ ಕಾಮಗಾರಿಗಳಿಗೆ ಮಂಜುರಾತಿ ನೀಡುವ ಮೂಲಕ ನಗರದ ಅಭಿವೃದ್ಧಿಗೆ ಸದಸ್ಯರು ಸಹಕರಿಸುವಂತೆ ಪೌರಾಯುಕ್ಕತ ಜಗರೆಡ್ಡಿ ಮನವಿ ಮಾಡಿಕೊಂಡರು ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜೈತುನ್ ಬಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಕೌನ್ಸ್ ಲ್ ಸಭೆಯಲ್ಲಿ ಸದಸ್ಯರ ಗಮನ ಸೆಳೆದರು.

ನಗರಸಭೆ ಸದಸ್ಯೆ ತಿಪ್ಪಮ್ಮ ಮಾತನಾಡಿ ನಗರಸಭೆ ಅಧಿಕಾರವಧಿ ಮುಗಿಯಲು ಬಂದರೂ ಚರಂಡಿಗಳಿಗೆ ಬ್ಲೀಚಿಂಗ್ ಪೌಡರೆ ಸಿಪಂರಣೆಡಿಲ್ಲ ಎಂದು ಅಧಿಕಾರಿಗಳ ವಿರುದ್ದ ಅಕ್ರೋಶ ಹೊರಹಾಕಿದರೆ. ಸದಸ್ಯರಾದ ಪ್ರಮೋದ್, ಜಯಲಕ್ಷ್ಮಿ ಜನವಸತಿ ಪ್ರದೇಶದಲ್ಲಿ ಚಿಕನ್ ಮಟನ್ ಅಂಗಡಿಗಳನ್ನು ತೆರವುಗೊಳುವಂತೆ ಸಭೆಯಲ್ಲಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ತೆರವುಗೊಳಿಸದೆ ಇರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ವೃದ್ದ ಹಾಗೂಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಂಡಿರುವ ಚಿತ್ರಗಳನ್ನು ಮೊಬೈಲ್ ನಲ್ಲಿ ಪ್ರದರ್ಶನ ಮಾಡಿದರು. ಪರಿಸರ ಇಂಜಿನಿಯರ್ ನರೇಂದ್ರಬಾಬು ಮಾತನಾಡಿ ಬೀದಿನಾಯಿಗಳನ್ನು ಇಡಿದರೆ ಕಾನೂನು ರೀತಿ ಜೈಲು ಶಿಕ್ಷೆಯಾಗುತ್ತದೆ ಅದಕ್ಕೆ ಒಂದು ಕಮಿಟಿ ಇದೆ ಸಭೆ ಮಾಡಿ ಅವುಗಳಿಗೆ ಸಂತಾನಹರಣ ಮಾಡ ಬೇಕು ಎಂದರು. ಇದನ್ನು ಸದಸ್ಯರು ಮೊಳಕಾಲ್ಮೂರಿನಲ್ಲಿ ಒಬ್ಬ ಯುವಕರ ನಾಯಿ ದಾಳಿಯಿಂದ ಮೃತ ಪಟ್ಟ ಮೇಲೆ ನಾಯಿಗಳ ಹತೋಟಿಗೆ ತರಲು ಮುಂದಾಗಿದ್ದಾರೆ ಇಲ್ಲಿ ಯಾರಾದರೂ ಮೃತಪಟ್ಟ ಮೇಲೆ ಎಚ್ಚರಿಕೆ ವಹಸುತ್ತೀರ ಅದಲ್ಲ ಬೇಕಿಲ್ಲ ಕುಂಠು ನೆಪ ಬಿಟ್ಟು ಜನ ವಸತಿ ಪ್ರದೇಶದಲ್ಲಿ ಚಿಕನ್ ಮಟನ್ ಅಂಗಡಿಗಳನ್ನು ತೆರವುಗೊಳಿಸಿ ಕೂಡಲೆ ಬೀದಿನಾಯಿಗಳಿಗೆ ಕಡಿವಾಣ ಹಾಕಿ ಎಂದು ಸದಸ್ಯರು ಕಿಡಿಕಾರಿದರು. ಸದಸ್ಯ ಶ್ರೀನಿವಾಸ್ ಮಾತನಾಡಿ ಬೆಂಗಳರು ಮುಖ್ಯ ರಸ್ತೆ ಅಗಲೀಕರಣ ಮಾಡಿರುವುದು ಓವಾಹನ ಸಂಚಾರಕ್ಕೆ ಆದರೆ ವರ್ತಕರು ಹಾಗೂ ವ್ಯಾರಿಗಳು ಪುಟ್ ಬಾತ್ ಹಾಗೂ ಮುಖ್ಯ ರಸ್ತೆ ಒತ್ತುವರಿ ಮಾಡಿಕೊಂಡರು ಅಧಿಕಾರಿಗಳು ಮೌನವಹಿಸಿದ್ದೀ ಇದರಿಂದ ಸಾರ್ವಜನಕರಿಗೆ ತೊಂದರೆಯಾಗುತ್ತಿದೆ ಎಂದು ಸಭೆ ಗಮನಸೆಳೆದರು. ಸದಸ್ಯ ರಾಘವೇಂದ್ರ ಮಾತನಾಡಿ ವಾರ್ಡ್ ಗಳಲ್ಲಿ ಬೀದಿ ದೀಪ ಅಳವಡಿಸಲು 20 ಲಕ್ಷ ರೂ ಹಣ ಮೀಸಿಲಿಟ್ಟಿದ್ದೀರಿ ಒಂದು ವಾರ್ಡ್ ಗೆ 10 ಬಲ್ಪ್ ಹಂಚಿಕೆ ಮಾಡುತ್ತೀರಿ ಒಂದು ಬಲ್ಪ್ ಧರವೆಷ್ಟು ಗುತ್ತಿಗೆ ದಾರನಿಗೆ ನೀಡುವ ಬದಲು ನಮಗೆ ಕೊಡಿ ನಾವೇ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಕಿಸುತ್ತೇವೆ ಎಂದರು. ಸದಸ್ಯ ವಿಶ್ ಕುಮಾರ್ ಮಾತನಾಡಿ ನಗರೋತ್ತಾನ ಅನುದಾನಲ್ಲಿ ಜನ ವಸತಿ ಪ್ರದೇಶ ಬಿಟ್ಟು ಯಾರೂ ಓಡಾಡದ ಕಡೆ ರಸ್ತೆಗಳನ್ನು ನಿರ್ಮಿಸುತ್ತೀರಿ ನಗರಸಭೆ ಕಚೇರಿ ಕಟ್ಟಡ ಹಾಗೂಬಸ್ ನಿಲ್ದಾಣ ಕಾಮಗಾರಿ ಎಲ್ಲಿಗೆ ಬಂತು ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಮುಂದಾಗುತ್ತಿಲ್ಲ ಎಂದು ಕಿಡಿ ಕಾರಿದರು. ಸದಸ್ಯ ಜಯಣ್ಣ ಮಾತನಾಡಿ ನಗರದ ಉದ್ಯಾನವನಗಳ ಅಭಿವೃದ್ಧಿಗೆಂದು ಹಣ ಮೀಸಲಿಡುತ್ತೀ ಇತ್ತ ಅಭಿವೃದ್ಧಿಯೂ ಇಲ್ಲಿ ಇರುವ ಉದ್ಯಾನವನಗಳನ್ನು ಒತ್ತುವರಿ ಮಾಡಿದರು ಅಧಿಕಾರಿಗಳು ಗಮನಹರಿಸುತ್ತಿಲ್ಲ ಸದಸ್ಯರು ಪ್ರತಿ ಸಭೆಯಲ್ಲಿ ಚರ್ಚೆ ಹಾಗೂಮನವಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ ಎಂದು ಸರ್ವ ಸದಸ್ಯರು ಅಧಿಕಾರಿಗಳ ವಿರುದ್ದ ಅಕ್ರೋಶ ಹೊರಹಾಕಿದರು. ಪೌರಾಯುಕ್ತ ಜಗರೆಡ್ಡಿ ಮಾತನಾಡಿ ಪುಟ್ ಬಾತ್ ಮೇಲಿನ ಪೆಟ್ಟಿಗೆ ಅಂಗಡಿ, ರಸ್ತೆ ಒತ್ತುವರಿ ಹಾಗೂ ಚಿಕನ್ ಮಟನ್ ಅಂಗಡಿಗಳನ್ನು ಜನವಸತಿ ಪ್ರದೇಶದಿಂದ ತೆರವುಗೊಳಿಸಲು ಸಮಯ ನಿಗಧಿ ಮಾಡಲಾಗುವುದು ಸದಸ್ಯರು ಸಹಕರಿಸುವಂತೆ ಸದಸ್ಯರ ಗಮನ ಸೆಳೆದರು.ಸಭೆಯಲ್ಲಿ ಅಧ್ಯಕ್ಷೆ ಜೈತುನ್ ಬಿ, ಉಪಾಧ್ಯಕ್ಷೆ ಸುಜಾತ, ವ್ಯವಸ್ಥಾಪಕ ಲಿಂಗರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading