December 14, 2025

ನಾಯಕನಹಟ್ಟಿ:: ಬರದ ನಾಡು ಎಂಬ ಅಣೆಪಟ್ಟಿ ಕಟ್ಟಿಕೊಂಡಿರುವ ನಾಯಕನಹಟ್ಟಿ ಹೋಬಳಿಯ ರೈತರು ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ನಂಬಿ ಇದ್ದಂತ ಜನತೆಗೆ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದ ರಾಮಸಾಗರ ಕೆರೆ 1979ರಲ್ಲಿ ಕೋಡಿ ಬಿದ್ದಿದ್ದು ಅಲ್ಲಿಂದ ಇಲ್ಲಿಯವರೆಗೆ ಕೂಡಿ ಬಿದ್ದಿರಲಿಲ್ಲ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಂದು ರಾಮಸಾಗರ ಕೆರೆ ಕೋಡಿ ಬಿದ್ದಿದೆ.
ಹೌದು ಇದು ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಸಾಗರ ಮತ್ತು ಗಜ್ಜುಗಾನಹಳ್ಳಿ ಗ್ರಾಮಗಳ ಪಕ್ಕದಲ್ಲಿರುವ ರಾಮಸಾಗರ ಕೆರೆ ಶನಿವಾರ ಸಂಜೆ 4:00 ಗಂಟೆಗೆ ಕೋಡಿ ಬಿದ್ದಿದೆ. ಸಾಗರೋಪಾದಿಯಲ್ಲಿ ವಿವಿಧ ಹಳ್ಳಿಗಳ ಗ್ರಾಮಸ್ಥರು ರಾಮಸಾಗರ ಕೆರೆ ನೋಡಲು ಬಂದರು ಕೆರೆ ವಿಸ್ತೀರ್ಣ ಸುಮಾರು 650 ಎಕರೆ ಕೆರೆಯಾಗಿದೆ ಈ ಒಂದು ಕೆರೆಗೆ ರಾಮಸಾಗರ,ಓಬಯ್ಯನಹಟ್ಟಿ, ಗಜ್ಜುಗಾನಹಳ್ಳಿ,
ತಿಮ್ಮಪ್ಪಯ್ಯನಹಳ್ಳಿ, ಜಂಬಯ್ಯನಹಟ್ಟಿ ಗೊಲ್ಲರಹಟ್ಟಿ, ಕೆರೆಗಳಹಳ್ಳಿ, ಈ ಭಾಗದ ರೈತರಿಗೆ ಜಮೀನುಗಳಿಗೆ ನೀರುಣಿಸುವ ಕೆರೆಯಾಗಿದೆ.

ಇದೆ ವೇಳೆ ಗಜ್ಜುಗಾನಹಳ್ಳಿ ಮುಖಂಡ ವೈ.ಪಿ. ಕನ್ನಯ್ಯ ಮಾತನಾಡಿದರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದಂತ ಕೆರೆ ರಾಮಸಾಗರಕೆರೆ ಈ ಕೆರೆ ಸುಮಾರು 45 ವರ್ಷ ಬಳಿಕ ಕೆರೆ ಕೋಡಿ ಬಿದ್ದಿರುವುದು ರೈತರಿಗೆ ಸಂತಸವಾಗಿದೆ ಆದ್ದರಿಂದ ಸಂತಸದಿಂದ ಕುಣಿದು ಕುಪ್ಪಳಿಸುವ ರೈತರ ಮುಖದಲ್ಲಿ ಮಂದಹಾಸವನ್ನು ಮೂಡಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮಲತಾ ಶಂಕರ್ ಮೂರ್ತಿ, ಪಾಲಮ್ಮ ಜಿ. ಬೋರಯ್ಯ, ಬಸಕ್ಕತಿಪ್ಪೇಸ್ವಾಮಿ, ಕೆ ಎಸ್ ಮಂಜಣ್ಣ, ಹಾಗೂ ವಿ.ಎಸ್ .ಎಸ್ ಬಿ.ಎನ್ .
ಡಿ ಬೋರಯ್ಯ, ಕೆ .ನಾಗರಾಜ್, ಎಸ್ ತಿಪ್ಪೇಸ್ವಾಮಿ, ಜಿ.ಎಸ್. ತಿಪ್ಪೇಸ್ವಾಮಿ, ಸೇರಿದಂತೆ ಸಮಸ್ತ ರಾಮಸಾಗರ- ಗಜ್ಜುಗಾನಹಳ್ಳಿ ಗ್ರಾಮಸ್ಥರು ಹಾಗೂ ವಿವಿಧ ಹಳ್ಳಿಗಳ ಗ್ರಾಮಸ್ಥರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading