
ನಾಯಕನಹಟ್ಟಿ : ಹೋಬಳಿಯ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪಯ್ಯನಕೋಟೆ ಕೆರೆ ಕೋಡಿಬಿದ್ದು 15 ವರ್ಷಗಳಾಗಿತ್ತು. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದಕ್ಕೆ ಗ್ರಾಮಸ್ಥರಲ್ಲಿ ಸೇರಿ ಸಿಹಿ ಹಂಚಿ ಸಂತಸ ಪಟ್ಟರು.
ಊರಿನ ಸಮೀಪ ಕೆರೆ ಇರುವುದರಿಂದ ಇನ್ನೂ ಕೇವಲ 1 1/2 ಅಡಿಗಳಷ್ಟು ನೀರು ಸಂಗ್ರಗೊಂಡರೆ ಕೆರೆ ನೀರು ಗ್ರಾಮದಲ್ಲಿ ನುಗುವ ಭೀತಿ ಇದೆ. ಕೆರೆ ಕೋಡಿ ಬಿದ್ದಿರುವ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಎಚ್ ರಾಜು ಆಗ್ರಹಿಸಿದರು.
ಕೆರೆ ಕೋಡಿಯಲ್ಲಿ ಬರೀ ರೋಲರ್ ಹೊಡ್ದಿದ್ದಾರೆ, ಗ್ರಾವಲ್ ಯಾಕೆ ಹೊಡೆದಿಲ್ಲ? ಗುತ್ತಿಗೆದಾರರು ಬರಿ ಜಾಲಿ ಗಿಡಗಳನ್ನು ಕಿತ್ತು ಹೋಗಿದ್ದಾರೆ.
ಕೆರೆ ಒಡೆದು ಹೋದ ಮೇಲೆ ಗ್ರಾವಲ್ ಹಾಕುತ್ತೀರಾ ಎಂದು ಸಣ್ಣ ನೀರಾವರಿ ಇಲಾಖೆಯ ನಾಯಕನಹಟ್ಟಿ ಮತ್ತು ತಳಕು ವಿಭಾಗದ ಇಂಜಿನಿಯರ್ ಜಿ ರಮೇಶ್ ರವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಎ ನಾರಾಯಣಸ್ವಾಮಿ, ಪಿ ಸಂತೋಷ್, ಪಿ ತಿಪ್ಪೇಶ್,ವೆಂಕಟೇಶ್,ಸಂತಷ್,ವಿಜಯ್,ತಿಪ್ಪೇಸ್ವಾಮಿ, ಬಸವರಾಜ್, ಲಕ್ಷ್ಮಣ, ವೆಂಕಟಸ್ವಾಮಿ,ಕೃಷ್ಣಪ್ಪ,ರಮಶ್, ಬಸವರಾಜ್ ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.