December 14, 2025


ಹಿರಿಯೂರು:

ಜಲಾಶಯ ನಿರ್ಮಾಣ ಮಾಡಿದ ಎಚ್.ಡಿ.ರೈಸ್ ಅವರ ದೂರದೃಷ್ಟಿ ಹಾಗೂ ವರದಿಯನ್ನು ಸರಿಯಾಗಿ ಓದದ, ಗ್ರಹಿಸದ, ಆಧುನಿಕ ಇಂಜಿನಿಯರ್ ಗಳು, ವೋಟ್ ಬ್ಯಾಂಕ್ ರಾಜಕಾರಣಿಗಳು ಸೇರಿ ವೈಜ್ಞಾನಿಕವಾಗಿ ಕೋಡಿಯನ್ನು ಇಳಿಸುವ ಪ್ರಸ್ತಾವ ಯಾವುದೇ ಕಾರಣಕ್ಕೂ ಕಾರ್ಯ ಸಾಧ್ಯವಾಗಲು ಬಿಡುವುದಿಲ್ಲ ಎಂಬುದಾಗಿ ವಾಣಿವಿಲಾಸಸಾಗರ ಹಾಗೂ ಭದ್ರಾಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸಂಘಟನೆಗಳ ಮುಖಂಡರುಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದು ಭವಿಷ್ಯದ ಪ್ರಶ್ನೆ. ಇಂದಿನ ಮಕ್ಕಳು ಮುಂದೆ ನೆಲ, ಜಲ, ನಾಡು-ನುಡಿ, ಕೆರೆ, ಜಲಾಶಯಗಳ ಬಗ್ಗೆ ಅನಾದರಣೆ ಮಾಡಲಿದ್ದಾರೆ. ಈ ಪೀಳಿಗೆಯ ನಾವುಗಳೇ ಕೊನೆಯ ಕೊಂಡಿ ಆದ್ದರಿಂದ ತಾಲ್ಲೂಕಿನ ಎಲ್ಲ ಸಂಘ-ಸಂಸ್ಥೆಗಳವರು, ರಾಜಕೀಯ ಪಕ್ಷದವರು, ನಾಗರೀಕ ಸಂಘಟನೆಗಳು ಸಮಾಜಮುಖಿ ಚಿಂತಕರು ಸೇರಿ ವಾಣಿವಿಲಾಸ ಸಾಗರವನ್ನು ಉಳಿಸಬೇಕು ಎಂಬುದಾಗಿ ಅವರು ಹೇಳಿದರು.
ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನ ಜಲಮೂಲಗಳ ಅಭಿವೃದ್ಧಿ ಮಾಡಬೇಕು. ಇಲ್ಲವಾದಲ್ಲಿ, ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರಲ್ಲದೆ, ಈ ಹೋರಾಟಕ್ಕೆ ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂಬುದಾಗಿ ಅವರು ಹೇಳಿದರು.
ರೈತ ಮುಖಂಡ ಆಲೂರು ಸಿದ್ದರಾಮಣ್ಣ ಮಾತನಾಡಿ ವಾಣಿವಿಲಾಸ ಸಾಗರದ ಕೋಡಿಯನ್ನು ಕಡಿಮೆ ಮಾಡುವ ಜಿಲ್ಲೆಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ಷಡ್ಯಂತರಕ್ಕೆ ವಾಣಿವಿಲಾಸ ಸಾಗರ ಜಲಾಶಯನ್ನು ಬಲಿಕೊಡುವುದಿಲ್ಲ ಎಂಬುದಾಗಿ ಕಠೋರವಾಗಿ ಹೇಳಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ ಬೇರೆ ಬೇರೆ ಸಂಘಟನೆಗಳಿದ್ದರೂ ನೀರಿನ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಜಿಲ್ಲೆಯ ರಾಜಕಾರಣಿಗಳ ಈ ಷಡ್ಯಂತ್ರವನ್ನು ಮುರಿಯುತ್ತೇವೆ ಎಂಬುದಾಗಿ ಹೇಳಿದರು.
ರೈತ ಸಂಘದ ಸಂಚಾಲಕರಾದ ಆರನಕಟ್ಟೆ ಶಿವಕುಮಾರ್ ಮಾತನಾಡಿ ವಾಣಿವಿಲಾಸ ಸಾಗರ ಜಲಾಶಯದ ಕೋಡಿ ತಗ್ಗಿಸುವ ನಿರ್ಧಾರದ ಹಿಂದಿರುವ ಸಾಧಕ ಹಾಗೂ ಬಾಧಕಗಳ ಬಗ್ಗೆ ದಾಖಲೆಗಳನ್ನು ನೋಡಿ ಮುಂದಿನ ಹೋರಾಟದ ರೂಪುರೇಷೆಯ ಬಗ್ಗೆ ನಿರ್ಧರಿಸೋಣ ಎಂಬುದಾಗಿ ಹೇಳಿದರು.
ಈ ಸಭೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ನಿರ್ದೇಶಕರಾದ ಆರ್.ಕೆ ಗೌಡ್ರು, ಪಿಟ್ಲಾಲಿ ಶ್ರೀನಿವಾಸ್, ಬಬ್ಬೂರ್ ಸುರೇಶ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಡಾರಿ ಕೃಷ್ಣಪ್ಪ, ವಾಲ್ಮೀಕಿ ಮಹಾಸಭಾ ಜೆ.ಬಿ.ರಾಜು, ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್, ನಾಗೇನಹಳ್ಳಿ ಮೂಡಲಗಿರಿಯಪ್ಪ, ಕುಂಚಿಟಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕುಬೇರಪ್ಪ, ರಾಮಚಂದ್ರಕಸವನಹಳ್ಳಿ, ನಂದಿಹಳ್ಳಿರಂಗಸ್ವಾಮಿ, ಬೀರನಹಳ್ಳಿ ಶಿವಣ್ಣ, ರಾಜಶೇಖರ, ಕರಿಬಸಣ್ಣ, ಬಂಗಾರಪ್ಪ, ಪರಮೇನಹಳ್ಳಿ ಮಹಾಲಿಂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading