
ಚಳ್ಳಕೆರೆ ಅ19 ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆಗಳು ಕೋಡಿ ಬಿದ್ದು ರೈತರ ಬೆಳೆಗಳು ಹಾನಿಹಾಗಿವೆ.
ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ.ವರವು.ಭೀಮನಕೆರೆ. ತಿಪ್ಪಯ್ಯನಕೆರೆ. ಚಿಕ್ಕಕೆರೆ.ಗೊರ್ಲಕಟ್ಟೆ.ನಾಯಕನಹಟ್ಟಿ.ಹೊಸಳ್ಳಿ.ತಳಕು. ಮನಮೈನಹಟ್ಟಿ. ತಿಪ್ಪಯ್ಯನಕೋಟೆ ಕೆರೆ.ಸೋಮಲಕೆರೆ.ನಗರಂಗೆರೆ ಕರೆಗಳು ಕೋಡಿಬಿದ್ದರೆ ಇನ್ನು ಬಹುತೇಕ ಕೆರೆಗಳು ಕೋಡಿ ಬೀಳುವ ಹಂತ ತಲುಪಿವೆ.
ತಳಕು ಹಾಗೂ ಹೊಸಕೆರೆ ಕೋಡಿ ಬಿದ್ದು ತಿಮ್ಮಣ್ಣಹಳ್ಳಿ .ಗ್ರಾಮದ ಮಾಗಣೀಯಲ್ಲಿ ಬೆಳೆದ ಈರುಳ್ಳಿ.ಮೆಣಸಿನಕಾಯಿ.ಮೆಕ್ಕೆಜೋಳ . ತುಂತುರು ಹನಿ ನೀರಾವರಿ ಪೈಪ್ ಗಳು ಸಹ ಕೊಚ್ಚಿಹೋಗಿವೆ. ಭೀಮನಕೆರೆ ಕೋಡಿ ಬಿದ್ದು 7 ಕುರಿಗಳು ಕೊಚ್ಚಿಹೋಗಿವೆ.ಮಲ್ಲೂರಹಳ್ಳಿ ಗ್ರಾಮದ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಯುವಕ ಗಿಡದ ಸಹಾಯ ಪಡೆದರೆ ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ಮನ್ನೆಕೋಟೆ.ಕೋಡಿಹಳ್ಳಿ ಮಹದೇವುರ .ನೇರ್ಲಗುಂಟೆ ಗ್ರಾಮದಲ್ಲಿ ಸುಮಾರು ಹತ್ತು ಮನೆಗಳು ಕುಸಿದು ಬಿದ್ದಿವೆ.
ವರವು ಗ್ರಾಮದ ಕೆರೆ ಕೋಡಿ ಬಿದ್ದು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ರೈತರ ಜಮೀನುಗಳಿಗೆ ನೀರು ನುಗ್ಗಿವೆ.
ನಾಯಕನಹಟ್ಟಿ ಹೋಬಳಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಹಣೆ ಪಟ್ಟಿಕಟ್ಟಿಕೊಂಡರೆ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಸುಮಾರು ವರ್ಷಗಳಿಂದ ತುಂಬದ ಕೆರೆಗಳು ನಾಯಕನಹಟ್ಟಿ ಭಾಗದ ಎಲ್ಲಾ ಕೆರೆಗಳು ಕೋಡಿ ಬಿದ್ದು ದಾಖಲೆ ಮುರಿದಿದೆ.








































About The Author
Discover more from JANADHWANI NEWS
Subscribe to get the latest posts sent to your email.