January 30, 2026
IMG-20250919-WA0216.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ಹಾಲು ಉತ್ಪಾದಕರುಗಳು ಸಂಘಕ್ಕೆ ಗುಣಮಟ್ಟದ ಹಾಲನ್ನು ನೀಡಬೇಕೆಂದು ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಹೇಳಿದರು.

ಅವರು ಸಾಲಿಗ್ರಾಮ ತಾಲೂಕಿನ ಹೊನ್ನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಘದ ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಹೆಚ್ಚಿನ ಲಾಭವನ್ನುಗಳಿಸಿ ಮಾದರಿ ಸಂಘ ಮಾಡಲು ಸರ್ವರೂ ಶ್ರಮಿಸಬೇಕು ಎಂದರು.

ಹಾಲು ಒಕ್ಕೂಟದಿಂದ ದೊರೆಯುವ ಸವಲತ್ತುಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಆ ಮೂಲಕ ತಾವುಗಳು ಆರ್ಥಿಕ ಅಭಿವೃದ್ಧಿ ಹೊಂದುವುದರೊಂದಿಗೆ ಸಂಘದ ಬೆಳವಣಿಗೆಗೆ ಕಾರಣರಾಗಬೇಕೆಂದು ಕರೆ ನೀಡಿದರು.

ಸಂಘಕ್ಕೆ ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದ ಅವರು ಸಂಘದ ಮೇಲ್ಚಾವಣಿಗೆ ವೈಯಕ್ತಿಕವಾಗಿ ಮುಂದಿನ 15 ದಿನದೊಳಗೆ ಶೀಟ್ ಗಳನ್ನು ಹಾಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರುಗಳಿಗೆ ಬಹುಮಾನಗಳನ್ನು ವಿತರಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ವೈದ್ಯ ಡಾ.ಸುನಿಲ್ ಕುಮಾರ್, ವಿಸ್ತರಣಾಧಿಕಾರಿ ನೇಮಿನಾಥ ಮಾಕಾಣಿ, ಸಂಘದ ಅಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷ ಜೆ.ಸುರೇಶ, ನಿರ್ದೇಶಕರುಗಳಾದ
ಹೆಚ್.ಕೆ.ಚಂದ್ರ, ಸುರೇಶ, ಕುಬೇರ, ಹೆಚ್.ಕೆ.ಯೋಗೇಶ, ಲೋಕೇಶ, ಹೆಚ್.ಕೆ.ನಟೇಶ, ಅತಾವುಲ್ಲಾ ಷರೀಫ್, ನಾಜಿರ ಬಾನು, ಯಶೋಧಮ್ಮ, ಸಣ್ಣತಮ್ಮಯ್ಯ,
ಸಿಇಓ ಪ್ರಜ್ವಲ್, ಸಿಬ್ಬಂದಿ
ಕುಮಾರ್, ಮುಖಂಡರುಗಳಾದ ಮರೀಗೌಡ, ಚಲುವರಾಜ್, ಪ್ರೀತಿ, ಮಂಜು, ನಾಗರಾಜಪ್ಪ, ಜನಪ್ರತಿನಿಧಿಗಳು, ಮುಖಂಡರುಗಳು, ಸಂಘದ ಸದಸ್ಯರುಗಳು ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading