ನಾಯಕನಹಟ್ಟಿ : ಪಟ್ಟಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ನಾಯಕನಹಟ್ಟಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಹೆಚ್.ಓ.ಶ್ವೇತಾ ರವಿಕುಮಾರ್ ಹೇಳಿದರು.
ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಾಯಕನಹಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘವು ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದು, ಈ ವರ್ಷಕ್ಕೆ 25ವರ್ಷಗಳನ್ನು ಪೂರೈಸಿದೆ. ನಂದಿನಿ ಉತ್ಪನ್ನವು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗಾಗಿ ನಮ್ಮ ವ್ಯಾಪ್ತಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಎಲ್ಲಾ ರೈತರು ಹಸುಗಳ ಆರೋಗ್ಯವನ್ನು ಕಾಪಾಡಿಕೊಂಡು ಪೌಷ್ಠಿಕ ಆಹಾರವನ್ನು ನೀಡುವ ಮೂಲಕ ಗುಣಮಟ್ಟದ ಹಾಲು ಉತ್ಪಾದನೆಗೆ ಆಧ್ಯತೆ ನೀಡಬೇಕು. ಇದರಿಂದ ಸಹಕಾರ ಸಂಘವು ಅಭಿವೃದ್ಧಿಯತ್ತ ಸಾಗುತ್ತದೆ. ಸದರಿ ವರ್ಷ ರೂ.21ಸಾವಿರದಷ್ಟು ಲಾಭಾಂಶವನ್ನು ಗಳಿಸಿದೆ. ಹಾಗೇ ಪ್ಲಾಸ್ಟೀಕ್ ಕ್ಯಾನ್‌ಗಳಲ್ಲಿ ಹಾಲು ತರುವುದು ಬೇಡ ಎಂದು ನಮ್ಮ ಕಾರ್ಯಕಾರಿ ಮಂಡಳಿಯ ಒಪ್ಪಿಗೆಯ ಮೇರೆಗೆ 66ಜನ ಹಾಲು ಉತ್ಪಾದಕರಿಗೆ ಸ್ಟೀಲ್ ಹಾಲಿನ ಕ್ಯಾನ್‌ಗಳನ್ನು ಉಚಿತವಾಗಿ ಸರಬರಾಜು ಮಾಡಲಾಗಿದೆ ಎಂದರು.
ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ, ಕರ್ನಾಟಕ ಹಾಲು ಒಕ್ಕೂಟವು ಗುಣಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ನಂದಿನಿಯು ಉತ್ತಮವಾದ ಲಾಭವನ್ನು ಗಳಿಸಿದ್ದು, ರೈತರಿಗೂ ಸಾಕಷ್ಟು ಯೋಜನೆಗಳನ್ನು ನೀಡಿದೆ. ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು ರೈತರಿಗೆ ಮತ್ತು ಹಸುಗಳಿಗೆ ಸಂಪೂರ್ಣ ವಿಮೆ ಸೌಲಭ್ಯಗಳನ್ನು ಜಾರಿಗೆ ತರಲಾಗಿದೆ. ಹಾಗೇ ಇನ್ನು ಕೆಲವೇ ದಿನಗಳಲ್ಲಿ ದಾವಣಗೆರೆಯಲ್ಲಿ ೫ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿಲಾಗುವುದು. ಇದರಿಂದ ಹಾಲು ಉತ್ಪಾದಕರಿಗೆ ಸಹಕಾರಿಯಾಗಲಿದೆ ಎಂದರು.
ಶಿವಮೊಗ್ಗ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಎಂ.ಪುಟ್ಟರಾಜು, ಪ.ಪಂ.ಅಧ್ಯಕ್ಷೆ ಟಿ.ಮಂಜುಳಾ, ಪಶು ವೈದ್ಯಾಧಿಕಾರಿ ಡಾ.ಎನ್.ವಿಜಯಕುಮಾರ್ ಮಾತನಾಡಿದರು.
ಇದೇವೇಳೆ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಬಿ.ವಿಶ್ವನಾಥ್, ನಿರ್ದೇಶಕರಾದ ಮುರುಗಯ್ಯ, ಡಿ.ತಿಪ್ಪೇಸ್ವಾಮಿ, ಡಿ.ಬಿ.ಯೋಗೇಶ್, ಗಂಗಮ್ಮ, ಅಭಿಷೇಕ್, ಇ.ರುದ್ರಮುನಿ, ಕೆ.ಟಿ.ತಿಪ್ಪೇಸ್ವಾಮಿ, ವೀರಭದ್ರಪ್ಪ, ಸಿ.ರಾಜಣ್ಣ, ಮುಖ್ಯಕಾರ್ಯನಿರ್ವಾಹಕಿ ಬಿ.ಎಂ.ಪ್ರೇಮರಾಜ್ ಅವರೂ ಇದ್ದರು.



About The Author
Discover more from JANADHWANI NEWS
Subscribe to get the latest posts sent to your email.