ಹಿರಿಯೂರು :
ಆರೋಗ್ಯಕರ ತಿಂಡಿ-ತಿನಿಸುಗಳನ್ನು ಸೇವಿಸಿದಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ಈ ನಿಟ್ಟಿನಲ್ಲಿ ಕೆ.ಎಂ.ಎಫ್. ಸಂಸ್ಥೆಯಿಂದ ಮಾರಾಟವಾಗುವ ನಂದಿನಿ ಸಿಹಿ ತಿನಿಸುಗಳು ಶುಚಿ ಹಾಗೂ ರುಚಿಗೆ ಹೆಸರಾಗಿದ್ದು, ನಾಲಿಗೆಗೆ ರುಚಿ ನೀಡುವ ಜೊತೆಗೆ ಆರೋಗ್ಯಕ್ಕೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ ಎಂಬುದಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ ಹೇಳಿದರು.
ನಗರದ ಅಜಾದ್ ಬಡಾವಣೆಯಲ್ಲಿ ನೂತನವಾಗಿ ಆರಂಭಗೊಂಡ ಪ್ರಾಂಚೈಸಿ ನಂದಿನಿ ಮಳಿಗೆಯನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ ಮಾತನಾಡಿ, ರಾಜ್ಯದಲ್ಲಿ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಕೆ.ಎಂ.ಎಫ್. ಸಂಸ್ಥೆಯ ನಂದಿನಿ ಉತ್ಪನ್ನಗಳು ಶುಚಿ-ರುಚಿಯ ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ಮಾರುಕಟ್ಟೆಯಲ್ಲಿ ತನ್ನದೇ ಆದ ಹೆಸರು ಮಾಡಿವೆ, ಇಂತಹ ಉತ್ತಮ ಪದಾರ್ಥಗಳ ಸೇವನೆಯಿಂದ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರಾಂಚೈಸಿ ಮಾಲೀಕರಾದ ಇದಾಯತ್ ವುಲ್ಲಾ, ಶಿಮುಲ್ ಮಾರುಕಟ್ಟೆ ಅಧಿಕಾರಿಯಾದ ಇರ್ಫಾನ್, ಸೇಲ್ಸ್ ಎಕ್ಸಿಕ್ಯೂಟಿವ್ ಗಳಾದ ಶ್ರೀಧರ್, ಹಾಗೂ ಎ.ರಂಗಸ್ವಾಮಿ, ಹಾಗೂ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಮಿರ್ಜಾ ಲಾರ್ಜೆಸ್ಟಿಕ್ ಕಂಪನಿ ಮಾಲೀಕರಾದ ಮಿರ್ಜಾ ನಿಜಾಮುದ್ದೀನ್, ಸುಂದರಿ ಸೋಪ್ ಮುನ್ನಾ, ಕಾಂಗ್ರೆಸ್ ಮುಖಂಡರಾದ ಅಮೃತೇಶ್ವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ನಗರಸಭೆ ಮಾಜಿ ಅಧ್ಯಕ್ಷ ಜಬೀವುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಠ್ಠಲ್ ಪಾಂಡುರಂಗ, ಸದಸ್ಯರಾದ ಅನಿಲ್ ಕುಮಾರ್, ಹಿರಿಯ ಪತ್ರಕರ್ತರು ಹಾಗೂ ಸಂಜೆವಾಣಿ ವರದಿಗಾರರಾದ ಎಂ.ರವೀಂದ್ರನಾಥ್, ಕಿರಣ್ ಮಿರಜ್ಕರ್, ಸುರೇಶ್ ಬಾಬು, ವಾಟರ್ ಕಲೀಲ್, ಸೇರಿದಂತೆ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.