
ನಾಯಕನಹಟ್ಟಿ : ಬೆಸ್ಕಾಂ ತಳಕು ಉಪ ವಿಭಾಗೀಯ ವ್ಯಾಪ್ತಿಯ ನಾಯಕನಹಟ್ಟಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಮಾರ್ಗಗಳ ನಿರ್ವಹಣೆ ಕಾಮಗಾರಿಯು ಗುರುವಾರ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.
ನಾಯಕನಹಟ್ಟಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ವಾರ್ಡ್ ಗಳು, ಮತ್ತು ಗ್ರಾಮಗಳು, ಎನ್.ಮಹದೇವಪುರ, ಮಲ್ಲೂರಹಳ್ಳಿ, ಗೌಡಗೆರೆ, ನೆಲಗೇತನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳು,
ಡಿಆರ್ ಡಿಒ, ಐಐಎಸ್ಸಿ ಕ್ಯಾಂಪಸ್ ಸೇರಿದಂತೆ ಎಲ್ಲಾ ಹಳ್ಳಿಗಳಲ್ಲೂ ನಿರಂತರ ಜ್ಯೋತಿ ಕೃಷಿ ಪಂಸೆಟ್ ಗಳಿಗೆ ಸರಬರಾಜು ಆಗುವ ವಿದ್ಯುತ್ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಸ್ಥಗಿತವಾಗಲಿದೆ.
ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಎಇಇ ಮಮತ, ಶಾಖಾಧಿಕಾರಿ ಎನ್.ಬಿ.ಬೋರಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.