
ಹಿರಿಯೂರು :
ಧಾರವಾಡ ಜಿಲ್ಲೆಯಲ್ಲಿ ನಾವುಗಳು “ನಮ್ಮಕಸ-ನಮ್ಮಜವಾಬ್ದಾರಿ” ಎಂಬ ಘೋಷವಾಕ್ಯದೊಂದಿಗೆ ಕಸವನ್ನು ಪರಿಸರಕ್ಕೆ ಹಾಕದೆ ಮನೆಯಿಂದಲೇ ಪರಿಸರ ಕಾಯಕವನ್ನು ಮಾಡುತ್ತೇವೆ ಎಂಬುದಾಗಿ ಪನಾಸಂ ರಾಜ್ಯ ಕಾರ್ಯದರ್ಶಿಗಳಾದ ನಿರ್ಮಲ ಈರೇಗೌಡರ್ ಹೇಳಿದರು.
ತಾಲ್ಲೂಕಿನ ಆಲೂರು ಗ್ರಾಮದ ಮಾಹಿಫಾರಂ ಹೌಸ್ ನಲ್ಲಿ “ಪರಿಸರಕ್ಕಾಗಿ ನಾವು” ಜಿಲ್ಲಾ ಸಂಘಟನಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಕೀಲರು ಮತ್ತು ಪನಾಸಂ ಕಿತ್ತೂರ ಕರ್ನಾಟಕ ಸಂಘಟನೆ ಕಾರ್ಯದರ್ಶಿಗಳಾದ ಸರಸ್ವತಿ ಪೂಜಾರ್ ಮಾತನಾಡಿ, ಈ ಭೂಮಿ, ಜಲ, ಗಾಳಿ, ಪರಿಸರ, ಹಿರಿಯರು ನಮಗೆ ಕೊಟ್ಟಿರುವ ಬಳುವಳಿ ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದೆ ಎಂಬುದಾಗಿ ಹೇಳಿದರು.
ಗ್ರೀನ್ ಫೋರ್ಸ್ ಫೌಂಡೇಶನ್ ಕೆ.ಜಿ.ಆರ್. ಉಷಾ ಮಾತನಾಡಿ “ನಮ್ಮ ಫೌಂಡೇಶನ್ ವತಿಯಿಂದ ಹಳೆಯ ಹಾಗೂ ಒಡೆದ ದೇವರ ಫೋಟೋಗಳನ್ನು ಬೀದಿಬದಿಯಲ್ಲಿ ನೀರಿಗೆ ಇನ್ನಿತರ ಸ್ಥಳಗಳಲ್ಲಿ ಬಿಸಾಕುವುದನ್ನು ತಪ್ಪಿಸಲು ಅದನ್ನು ಮರುಬಳಕೆ ಮಾಡುವ ಮುಖಾಂತರ ದೇವರಭಕ್ತಿಗೆ ಶಕ್ತಿ ತುಂಬುತ್ತೇವೆ, ಅದರಿಂದ ನೀವುಗಳು ಸಹ ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ ಎಂದು ಮನವಿ ಮಾಡಿದರು.
ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿ, ಪ್ಲಾಸ್ಟಿಕ್ ಇವತ್ತು ಅಡುಗೆಮನೆಯಲ್ಲಿ ಮಾರಣಾಂತಿಕ ಹಾವಳಿ ಮಾಡುತ್ತಿದೆ, ಕ್ಯಾನ್ಸರ್ ನಂತಹ ವಾಸಿಯಾಗದ ಕಾಯಿಲೆಗಳಿಗೆ ಮೂಲವಾಗುತ್ತಿದೆ, ಆದ್ದರಿಂದ ಆಹಾರ ಸರಪಳಿಯಲ್ಲಿ ಪ್ಲಾಸ್ಟಿಕ್ ಬರಬಾರದು ಎಂಬ ಉದ್ದೇಶಕ್ಕೆ ನಮ್ಮ ಸಂಸ್ಥೆಯಿಂದ ನೂರಾರು ಜಾಗೃತಿ ಅಭಿಯಾನಗಳನ್ನು ಮಾಡಲಾಗಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಷಾ, ಡಾ.ಮಹೇಶ್ ಕಡ್ಲೇಗುದ್ದು ಪರಿಸರ ಗೀತೆ ಹಾಡಿದರು. ಬಾಲಕಿ ಲಕ್ಷ್ಮಿ ಪರಿಸರ ಗೀತೆ ಹಾಡಿದರು. ಚಿನ್ಮಲಾದ್ರಿ ಸಾಹಿತ್ಯ ವೇದಿಕೆ ಕಾರ್ಯಕರ್ತರಾದ ರಾಮಚಂದ್ರಕಸವನಹಳ್ಳಿ, ಆಲೂರುಅಜ್ಜಯ್ಯ, ಅಶೋಕ್, ಎಸ್.ಜಿ.ಎಂ. ಡೆಂಟಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಗೌರಮ್ಮ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಆರಂಭದಲ್ಲಿ ಪನಾಸಂ ಚಿತ್ರದುರ್ಗ ಜಿಲ್ಲಾ ಗೌರವ ಅಧ್ಯಕ್ಷರಾದ ದಯಾಪುತ್ತೂರುಕರ್, ಸಾಹಿತಿ ಮಂಜುನಾಥ್ ಕಳ್ಳಿಹಟ್ಟಿ, ಪ.ನಾ.ಸಂ. ರಾಜ್ಯ ಸಮಿತಿ ಎಂ.ಬಿ. ಜಯದೇವ್ ಮೂರ್ತಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಪಂಡ್ರಹಳ್ಳಿ ಶಿವರುದ್ರಪ್ಪ ವಂದನಾರ್ಪಣೆ ಮಾಡಿದರು.
About The Author
Discover more from JANADHWANI NEWS
Subscribe to get the latest posts sent to your email.