
ಹೊಸಪೇಟೆಯಲ್ಲಿ ಸಿದ್ದರಾಮಯ್ಯ ಮಾಡುತ್ತಿರುವುದು ಸಾಧನಾ ಸಮಾವೇಶ ಅಲ್ಲ.ಲೂಟಿಕೋರರ ಸಮಾವೇಶ. ಈ ಸಮಾವೇಶ ಲೂಟಿಕೋರರ ಸಂತೆ. ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಸಲುವಾಗಿ ಈ ಸಮಾವೇಶ ಮಾಡುತ್ತಿದ್ದಾರೆ ಎಂದು ಸೂರನಹಳ್ಳಿ ಜಿಕೆ ಹರೀಶ್ ಕುಮಾರ್ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಚಿತ್ರದುರ್ಗ ಆರೋಪಿಸಿದ್ದಾರೆ.
ಅವರುನಮ್ಮ ಸರ್ಕಾರವನ್ನು 40% ಸರ್ಕಾರ ಎಂದು ಗೂಬೆ ಕೂರಿಸಿದರು.ಇದರ ಬಗ್ಗೆ ತನಿಖೆ ನಡೆಸಲು ಸಮಿತಿ ನೇಮಿಸಿದರು ಆ ಸಮಿತಿ ತನಿಖೆ ನಡೆಸಿ ಆ ಆರೋಪದಲ್ಲಿ ಉರುಳಿಲ್ಲ ಎಂದು ವರದಿ ನೀಡಿದೆ.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ.ಶಾಸಕರುಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.. ಶಾಸಕರು ಲೂಟಿ ಹೊಡೆಯುತ್ತಿದ್ದಾರೆ. ಶಾಸಕರು ಯಾವುದೇ ಕೆಲಸವನ್ನು ಸಾರ್ವಜನಿಕರಿಗೆ ತೋರಿಸುತ್ತಿಲ್ಲ ಅಧಿಕಾರಿಗಳನ್ನು ಹೆದರಿಸಿಕೊಂಡು ಲೂಟಿ ಹೊಡೆಯುತ್ತಿದ್ದಾರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಒಂದು ರೂ ತಂದು ಭೂಮಿ ಪೂಜೆ ಮಾಡಿದ್ದಾರೆ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎರಡು ವರ್ಷದಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಸಾರ್ವಜನಿಕರಿಗೆ ಸ್ಪಂದಿಸದೇ ಗ್ಯಾರಂಟಿ ಲೆಕ್ಕದಲ್ಲಿ ಅಧಿಕಾರ ನಡೆಸುತ್ತಿದ್ದಾರೆ.ರಾಜ್ಯ ಸರ್ಕಾರ ಸ್ಟಾಂಪ್ ಡ್ಯೂಟಿಯನ್ನು ಹೆಚ್ಚಳ ಮಾಡಿದೆ ಅಷ್ಟೇ ಅಲ್ಲದೇ ಅಬಕಾರಿ ಶುಲ್ಕವನ್ನು 15 ಬಾರಿ ಹೆಚ್ಚಳ ಮಾಡಿದ್ದಾರೆ.ತೆರಿಗೆ ಸಂಗ್ರಹ ಹೇಗಿರಬೇಕೆಂದರೆ ಜೇನು ನೋಣ ಮಕರಂಧ ಹಿರುವ ಹಾಗೆ ಇರಬೇಕೆಂದು ಚಾಣುಕ್ಯ ಹೇಳಿದ್ದಾರೆ.ಆದರೆ ರಾಜ್ಯ ಸರ್ಕಾರದ ತೆರಿಗೆ ವ್ಯವಸ್ಥೆ ಸಾರ್ವಜನಿಕರು ಬದುಕಿಸದೇ ಇರುವಂತಹ ಪರಿಸ್ಥಿತಿ ಇದೆ.ಇಂತಹ ಅಸಹ್ಯಕರ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ.ಸಿದ್ದರಾಮಯ್ಯರವರಿಗೆ ತಾವು ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ನಾಟಕ ಆಡಬೇಕು ಎನ್ನುವುದು ಗೊತ್ತಿದೆ ಸಿದ್ದರಾಮಯ್ಯರವರು ಏನು ಕೆಲಸ ಮಾಡುತ್ತೇವೆ ಅನ್ನುವುದು ಗೊತ್ತಾಗುವುದಿಲ್ಲ ಎಂದರು.
ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ ಮಾನ್ಯ ಯಡಿಯೂರಪ್ಪರವರ ಸರ್ಕಾರದ ಅವಧಿಯಲ್ಲಿ 8000 ಕೋಟಿ ರೂ ನೀಡಿದ್ದೇವೆ.. ಈಗ ಅದರ ವೆಚ್ಚ 24,000 ಕೋಟಿ ರೂ ಆಗಿದೆ ಆದರೂ ಶೇ 25 % ರಷ್ಟು ಕಾಮಗಾರಿ ಸಹ ನಡೆದಿಲ್ಲ.. ಅಲ್ಲಿಯೂ ಸಹ ಲೂಟಿ ಮಾಡಿದ್ದಾರೆ.ರಾಜ್ಯ ಸರ್ಕಾರ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ಪೈಸನು ಸಹ ಕೊಟ್ಟಿಲ್ಲ..
About The Author
Discover more from JANADHWANI NEWS
Subscribe to get the latest posts sent to your email.