
ಚಳ್ಳಕೆರೆ ಮೇ 19
ನಗರ ಸ್ವಚ್ಛತೆ ಕುರಿತು ಅಧ್ಯಯನ ನಡೆಸುವ ಸಲುವಾಗಿ ನಗರಸಭಾ ಸದಸ್ಯರು ನಾಲ್ಕು ದಿನಗಳ ಕಾಲ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.
ಹೌದು ಇದು ಚಳ್ಳಕೆರೆ ನಗರಸಭೆ ಅಧ್ಯಕ್ಷೆ.ಉಪಾಧ್ಯಕ್ಷೆ. ಸದಸ್ಯರು ಹಾಗೂ ನಾಮ ನಿರ್ದೇಶನ ಸದಸ್ಯರು ಸೇರಿದಂತೆ ಮಧ್ಯಪ್ರದೇಶದ ಇಂದೂರ್ ನಗರ ಸುಮಾರು 7 ನೇ ಬಾರಿಗೆ ಸ್ವಚ್ಚತೆಯಲ್ಲಿ ಕ್ಲೀನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅಲ್ಲಿನ
ಒಳಚರಂಡಿ ಸ್ವಚ್ಛತೆ, ಸಂಸ್ಕರಣೆ ಹಾಗೂ ತ್ಯಾಜ್ಯದಿಂದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಕುರಿತಂತೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದ್ದು, ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಸದಸ್ಯರನ್ನು ಅಧ್ಯಯನಕ್ಕೆ ಕಳುಹಿಸಲಾಗುತ್ತಿದೆ ಜತೆಗೆ ಇಬ್ಬರು ಅಧಿಕಾರಿಗಳು ಸಹ ತೆರಳಿದ್ದಾರೆ.







ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಸ ಉತ್ಪತ್ತಿ ಹೆಚ್ಚುತ್ತಿದ್ದು ಒಳಚರಂಡಿ ನೀರಿನ ಸಂಸ್ಕರಣೆ, ನಿರ್ವಹಣೆ ಹಾಗೂ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಸಮರ್ಪಕವಾಗಿ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ. ಸಣ್ಣ ಮಳೆಗೂ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತಿವೆ. ಒಳಚರಂಡಿ ನೀರನ್ನು ಸಂಸ್ಕರಣೆ ಮಾಡದೆ ನೇರವಾಗಿ ನಾಲೆಗಳಿಗೆ ಮತ್ತು ಕೆರೆಗಳನ್ನು ಸಂಪರ್ಕಿಸುವ ನೀರಿಗೆ ಸಂಪರ್ಕಿಸಲಾಗುತ್ತಿದೆ.
ಇದನ್ನು ತಡೆಗಟ್ಟುವ ಉದ್ದೇಶದಿಂದ ದೇಶದ ಸ್ವಚ್ಛ ನಗರಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದ ಇಂದೂರು ನಗರಕ್ಕೆ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಆ ರಾಜ್ಯಕ್ಕೆ ತೆರಳುವ ಅವಕಾಶ ದೊರಕಿದ್ದು, ಒಳಚರಂಡಿ ವ್ಯವಸ್ಥೆಯಲ್ಲಿ ಆ ರಾಜ್ಯದವರು ಅಳವಡಿಸಿಕೊಂಡಿರುವ ವಿಧಾನಗಳು, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮತ್ತು ಬಳಕೆಗೆ ಕಂಡುಕೊಂಡಿರುವ ಮಾರ್ಗದ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ ಆ ವ್ಯವಸ್ಥೆಯನ್ನು ರಾಜ್ಯ ಸರ್ಕಾರದ ಗಮನಸೆಳೆದು ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿಯೂ ಅಳವಡಿಸಿಕೊಳ್ಳುವ ಸದುದ್ದೇಶದಿಂದ ಪ್ರವಾಸ ಹಮ್ಮಿಕೊಂಡಿದ್ದಾರೆ.
ನಗರದ ಸ್ವಚ್ಚತೆ ವ್ಯವಸ್ಥೆ ಹದಗೆಟ್ಟಿದೆ. ಘನ ತ್ಯಾಜ್ಯ ಸಂಸ್ಕರಣಾ ಘಟಕ ನಗರವ್ಯಾಪ್ತಿಯ ಕಸವನ್ನು ತೆಗೆದುಕೊಂಡು ಹೋಗಿ ರಾಶಿ ಹಾಕಲಾಗುತ್ತಿದೆ. ಹಳೆ ನಗರಸಭೆ ಕಚೇರಿ ಆವರಣದಲ್ಲಿ ಬೃಹತ್ ಸ್ವಚ್ಚತಾ ವಾಹನಗಳು ಧೂಳುವಮುಕ್ಕುತ್ತಾ ತುಕ್ಕು ಹಿಡಿಯುತ್ತಿವೆ. ಚರಂಡಿಗಳಲ್ಲಿ ಹೂಳು. ರಸ್ತೆ ಬದಿಯಲ್ಲಿ ಪುಟ್ ಬಾತ್ ಗೂಡಂಗಡಿಗಳು.ಮುಖ್ಯ ರಸ್ತೆಗಳಲ್ಲಿ ನಿಷೇಧಿತ ಪ್ಲೆಕ್ಸ್ .ಬ್ಯಾನರ್ ಗಳ ಹಾವಳಿ.ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ. ತಗ್ಗು ಬಿದ್ದ ರಸ್ತೆಗಳು ಕಿತ್ತುಹೋದ ಪುಟ್ ಬಾತ್ ಗಳು ಹೀಗೆ ಹತ್ತು ಹಲವು ನಗರದಲ್ಲಿ ಸಮಸ್ಯೆಗಳ ಸರ ಮಾಲೆಗಳಿವೆ.
ಈಗಿನ ಸದಸ್ಯರ ಅವಧಿ ಸುಮಾರು ಐದು ತಿಂಗಳು ಬಾಕಿ ಇದ್ದು ಸ್ವಚ್ಚತೆ ಬಗ್ಗೆ ಇಂದೂರ್ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಪ್ರವಾಸ ಕೈಗೊಂಡಿರುವುದು ನಗರವಾಸಿಗಳಿಗೆ ಆಶ್ಯಸ್ಪದವಾಗಿದೆ.
ಚಿತ್ರದುರ್ಗ ಜಿಲ್ಲೆಯ ನಮ್ಮ ಪಕ್ಕದ ತಾಲೂಕು ಹೊಸದುರ್ಗ ಪಟ್ಟಣ ಪಂಚಾಯತ್ ಎರಡು ಬಾರಿ ಸ್ವಚ್ಚತೆಯ ಗರಿ ಮುಡಿಗೇರಿಸಿಕೊಂಡು ಪ್ರಶಸ್ತಿಗಳನ್ನು ಪಡೆದಿದ್ದರೂ ಚಳ್ಳಕೆರೆ ನಗರ ಎಷ್ಟೇ ಅಭಿವೃದ್ಧಿ ಹೊಂದಿದರೂ ಸಹ ಸ್ವಚ್ಚತೆಯಲ್ಲಿ ಹಿಂದುಳಿದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇನ್ನು ಐದು ತಿಂಗಳ ಅವದಿಯಲ್ಲಿ ಇಂದೂರ್
ಅಧ್ಯಯನ ಪ್ರವಾಸ ಮುಗಿಸಿಬಂದ ನಂತರದಲ್ಲಿ ಅದನ್ನು ಯಾವ ರೀತಿಯಲ್ಲಿ ನಗರಸಭೆ ಸದಸ್ಯರು ಹಾಗೂ ಯಾವ ರೀತಿ ಅನುಷ್ಠಾನಕ್ಕೆ ತರಬಹುದರ ಬಗ್ಗೆ ಕಾದು ನೋಡ ಬೇಕಿದೆ.







About The Author
Discover more from JANADHWANI NEWS
Subscribe to get the latest posts sent to your email.