September 15, 2025
1745074359527.jpg


ಚಿತ್ರದುರ್ಗಏ.19:
ಮಹಿಳಾ ದೌರ್ಜನ್ಯ, ಬಾಲ್ಯವಿವಾಹ, ಲಿಂಗ ತಾರತಮ್ಯ, ಅಪೌಷ್ಠಿಕತೆ ಮಕ್ಕಳ ಹಕ್ಕುಗಳ ಉಲ್ಲಂಘನೆ, ಬಾಲ ಕಾರ್ಮಿಕ ಪದ್ಧತಿ ಅಂತಹ ಸಾಮಾಜಿಕ ಪಿಡುಗುಗಳು ಕಡಿಮೆಯಾಗಿ ಗುಣಾತ್ಮಕ ಜೀವನ ಶೈಲಿ ನಿಮ್ಮದಾಗುವ ನಿಟ್ಟಿನಲ್ಲಿ ಒಕ್ಕೂಟವು ಕೆಲಸ ಮಾಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಶ್ರೀ ಗುಲಾಭಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಸಹಯೋಗದೊಂದಿಗೆ ರಾಜ್ಯ ಜೀವನೋಪಾಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಪರಿವರ್ತನೆ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲಾ ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ರಚನೆಯಾಗಿದೆ. ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಶ್ರೀ ಗುಲಾಭಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳ ಕಾರ್ಯನಿರ್ವಹಿಸುತ್ತಿವೆ. ಆದರೂ ಸಹ ಸಾಮಾಜಿಕ ಪರಿವರ್ತನೆ ಹೊಂದಿರುವ ಪ್ರಮಾಣ ಅತಿ ಕಡಿಮೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಗರ್ಭಿಣಿ ಆರೈಕೆ, ಬಾಣಂತಿ ಆರೈಕೆ, ಮಕ್ಕಳ ಆರೈಕೆ, ಅನೇಮಿಯ ಮುಕ್ತ ಭಾರತ ಸುರಕ್ಷಿತ ಮಾತೃತ್ವ ಅಭಿಯಾನ ಲಸಿಕಾ ಕಾರ್ಯಕ್ರಮ ಈ ಎಲ್ಲಾ ಕಾರ್ಯಗಳ ಸೇವೆಗಳ ಬಗ್ಗೆ ನಿಮ್ಮ ಒಕ್ಕೂಟದ ಸಭೆಗಳಲ್ಲಿ ಮಾತನಾಡಿ ಜಾಗೃತಿ ಮೂಡಿಸಬೇಕು. ಸರ್ಕಾರದ ಎಲ್ಲಾ ಸೇವೆಗಳ ಬಗ್ಗೆ ಚರ್ಚಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕುಟುಂಬ ಕಲ್ಯಾಣ ಯೋಜನೆಗಳ ಅನುμÁ್ಠನದಲ್ಲಿ ಪುರುಷರ ಸಹಭಾಗಿತ್ವ ಬರಬೇಕಾದರೆ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ ಕುಟುಂಬ ಕಲ್ಯಾಣಕ್ಕೆ ಪರಿವರ್ತನೆ ಮಾಡಿ ಎಂದರು.
ಪರಿವರ್ತನಾ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ನಿರ್ಮಲ, ಕಾರ್ಯದರ್ಶಿ ಗಿರಿಜಮ್ಮ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶ್ರೀನಿವಾಸ್, ಸದಸ್ಯರಾದ ಸುಜಾತ ಆರೋಗ್ಯ ಇಲಾಖೆಯ ಆಂಜನೇಯ, ಪ್ರವೀಣಕುಮಾರ್, ರಜಿಯಾಬೇಗಂ, ವಿನಯ್, ಸಿಂಧ್ಯಾ, ಆಶಾ ಕಾರ್ಯಕರ್ತೆ ಶಾರದಮ್ಮ, ಅಂಗನವಾಡಿ ಶಿಕ್ಷಕರಾದ ಸಾಕಮ್ಮ, ಹನುಮಕ್ಕ, ಎಲ್ಲಾ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading