ಚಳ್ಳಕೆರೆ:ಶ್ರೀ ನರಹರಿ ಸೇವಾ ಪ್ರತಿಷ್ಠಾನ ಹಾಗೂ ನಾಗಸಿಂಹಾದ್ರಿ ಚಾರಿಟೀಸ್ ನರಹರಿ ನಗರ ಚಳ್ಳಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಶಂಕರ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಬೆಂಗಳೂರು ಸಹಯೋಗದೊಂದಿಗೆ ಕ್ಯಾನ್ಸರ್ ಅರಿವು ತಿಳುವಳಿಕೆ ಕಾರ್ಯಕ್ರಮ ಹಾಗೂ ಉಚಿತ ತಪಾಸಣೆ ಶಿಬಿರವನ್ನು ಇದೇ ಮಾರ್ಚ್ 22 ,23 ರ ರಂದು ಎರಡು ದಿನಗಳ ಕಾಲ ಶ್ರೀ ನರಹರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಉಚಿತ ತಪಾಸಣೆ ನಡೆಸಲಾಗುತ್ತದೆ ಎಂದು ಶ್ರೀನರಹರಿ ನಗರದ ಪ್ರತಿಷ್ಠಾನದ ಶ್ರೀ ರಾಜರಾಮ ಸ್ವಾಮಿಜೀಗಳು ಹೇಳಿದರು.
ನಗರದ ನರಹರಿ ನಗರದಲ್ಲಿ ಶ್ರೀ ನರಹರೇಶ್ವರ ಸ್ವಾಮಿ ದೇವಾಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾರ್ಚ್ 22 ಶನಿವಾರ ಬೆಳಗ್ಗೆ 8.30 ರಿಂದ ಸಂಜೆ 5:00 ಗಂಟೆಯವರೆಗೆ 23 ರ ಭಾನುವಾರ ಎರಡು ದಿನಗಳ ಕಾಲ ಶಿಬಿರ ತಪಾಸಣೆಯಲ್ಲಿ ಮೌಖಿಕ ಕ್ಯಾನ್ಸರ್ ಮಹಿಳೆಯರಿಗೆ ಸ್ಥನ ಕ್ಯಾನ್ಸರ್ , ಗರ್ಭಕೋಶ ಕ್ಯಾನ್ಸರ್ ಹೀಗೆ ಮುಂಜಾಗ್ರತೆಯಾಗಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕ್ಯಾನ್ಸರ್ ತಪಾಸಣೆಯನ್ನು ಪ್ರಾಥಮಮಿಕ ಹಂತದಲ್ಲಿ ಗುಣಮುಖರಾಗಲು ವೈದ್ಯರ ಸಲಹೆ ಉತ್ತಮ, ಆದ್ದರಿಂದ ಈ ತಪಾಸಣೆಗೆ ತಾಲೂಕಿನ ಎಲ್ಲಾ ಸಾರ್ವಜನಿಕರು ಮಹಿಳೆಯರು ಹಾಗೂ ಪುರುಷರು ತಪ್ಪದೆ ಭಾಗವಹಿಸಿ ಕ್ಯಾನ್ಸರ್ ಅರಿವು, ತಿಳುವಳಿಕೆ ಕಾರ್ಯಕ್ರಮ ಹಾಗೂ ಉಚಿತ ತಪಾಸಣೆ ಶಿಬಿರಕ್ಕೆ ಆಗಮಿಸಬೇಕು ಎಂದು ಕರೆ ನೀಡಿದರು.
ಶ್ರೀ ನರಹರಿ ಪ್ರತಿಷ್ಠಾನದ ಸಹ ಕಾರ್ಯದರ್ಶಿ ಹಾಗೂ ಶಿಮುಲ್ ಉತ್ಪಾದಕ ಒಕ್ಕೂಟದ ನಿರ್ದೇಶಕರಾದ ಬಿಸಿ.ಸಂಜೀವಮೂರ್ತಿ ಮಾತನಾಡಿ,ಆರೋಗ್ಯದಲ್ಲಿ ಕಂಡು ಬರುವ ಕೆಲವು ಖಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೆ ಗುಣಪಡಿಸಲು ಇಂತಹ ಉಚಿತ ತಪಾಸಣೆ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಆದ್ದರಿಂದ ಮಾರ್ಚ್ 22 ಮಾರ್ಚ್ 23 ರಂದು ಎರಡು ದಿನಗಳ ಕಾಲ ನಡೆಯುವ ಕ್ಯಾನ್ಸರ್ ಅರಿವು ತಿಳುವಳಿಕೆ ಕಾರ್ಯಕ್ರಮ ಹಾಗೂ ಉಚಿತ ತಪಾಸಣೆ ಶಿಬಿರಕ್ಕೆ ತಪ್ಪದೆ ಎಲ್ಲರೂ ಭಾಗವಹಿಸಿ ನರಹರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯುವಂತಹ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಿ ಬಿರದ ಉಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು, ಇನ್ನೂ ಶಿಬಿರಕ್ಕೆ ಬರುವಂತಹ ವ್ಯಕ್ತಿಗಳು ಉಚಿತ ಪರೀಕ್ಷೆಗೆ ಅವಶ್ಯಕವಾಗಿ ನೋಂದಾಯಿಸಿಕೊಳ್ಳಬೇಕು, ಜೊತೆಯಲ್ಲಿ ಆಧಾರ್ ಕಾರ್ಡ್ , ಡಿಪಿಎಲ್ ಕಾರ್ಡ್ ಇದ್ದರೆ ಅದರ ಪ್ರತಿಯನ್ನು ತರಬೇಕು, ನುರಿತ ತಜ್ಞ ವೈದ್ಯರ ಸಲಹೆ ಪಡೆದು ಸೂಕ್ತ ಸಲಹೆಗಳನ್ನು ಪಡೆದುಕೊಂಡು ಗುಣಮಟ್ಟದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು,ಎಂದರು.
ಇನ್ನೂ ಉಚಿತ ತಪಾಸಣೆಗೆ ಬರುವಂತಹ ವ್ಯಕ್ತಿಗಳು ಚಂದ್ರಪ್ಪ ಮೊಬೈಲ್ ನಂಬರ್ 9901 40 909, ಯತೀಶ್ ಎಂ ಸಿದ್ದಾಪುರ 720 435 1903, ಇನ್ನು ವಾಸವಿ ಲ್ಯಾಬ್ 810 5609982, ರೇವಣಸಿದ್ದಯ್ಯ ಎಚ್ ಇವರನ್ನು ಸಂಪರ್ಕಿಸಬೇಕು,
ಇನ್ನು ಭಾನುವಾರ ಬೆಳಗ್ಗೆ 10 ಗಂಟೆಗೆ ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಹಾಗೂ ಆಸಕ್ತರಿಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಹಾಗೂ ಉಪನ್ಯಾಸ ಮೂಲಕ ಮಾಹಿತಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.