December 14, 2025
IMG20250307112136_01.jpg

ಚಳ್ಳಕೆರೆ: ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮದ ಶ್ರೀ ಕೂಡಲ ಸಂಗಮೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರವಾಸೋದ್ಯಮ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳ ವತಿಯಿಂದ ಅನುದಾನ ಮಂಜೂರಾತಿಗೆ ಒತ್ತಾಯಿಸಿ ಮಾರ್ಚ್ 20ರಂದು ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಶ್ರೀ ಕೂಡಲ ಸಂಗಮೇಶ್ವರ ಜೀರ್ಣೋದ್ಧಾರ ಸಮಿತಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಪಿ ಭೂತಯ್ಯ ತಿಳಿಸಿದ್ದಾರೆ. 

ಪತ್ರಿಕೆಯೊಂದಿಗೆ ಮಾತನಾಡಿದ ಅವರು ನಾಗಗೊಂಡನಹಳ್ಳಿ ಗ್ರಾಮದ ವೇದಾವತಿ ನದಿ ಮತ್ತು ರಾಣಿಕೆರೆ ಗರಣಿ ಹಳ್ಳ ಇವೆರಡರ ಮಧ್ಯೆ ಶ್ರೀ ಕೂಡಲ ಸಂಗಮೇಶ್ವರ ಸ್ವಾಮಿಯ ಎರಡು ಶಿವಲಿಂಗಗಳು ಪುರಾತನ ಕಾಲದ ಶಿಲೆಗಳಾಗಿದ್ದು ಗ್ರಾಮದಲ್ಲಿ ಕಾಣಿಸಿಕೊಂಡ ಅನೇಕ ಮಾರಕ ರೋಗಗಳು ಈ ಶಿವಲಿಂಗಗಳಿಗೆ ಪೂಜೆ ಸಲ್ಲಿಸಿದ ನಂತರ ಗುಣಮುಖರಾಗಿರುವ ಪ್ರತೀತಿ ಇದೆ ಈ ದೇವಸ್ಥಾನಗಳಿಗೆ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನಿಂದ ಸುಮಾರು 50 ಗ್ರಾಮಗಳಿಂದ ಬುಡಕಟ್ಟು ಜನಾಂಗದ ದೇವರುಗಳು ಗಂಗಾ ಪೂಜೆಗೆ ಪುಣ್ಯ ಸ್ನಾನಕ್ಕೆ ಬಂದು ಹೋಗುತ್ತವೆ ಕಳೆದ ವರ್ಷ ಸೆಪ್ಟೆಂಬರ್ 21ರಂದು ದೇವಾಲಯಕ್ಕೆ ಶಾಸಕ  ರಘುಮೂರ್ತಿ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್  ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ನಂತರ ದೇವಸ್ಥಾನ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆ ಮಾಡಿ ಸುಮಾರು 2 ಕೋಟಿ 70 ಲಕ್ಷಕ್ಕೆ ರಸ್ತೆ, ಸಮುದಾಯ ಭವನ ಉದ್ಯಾನವನ ಮುಖ್ಯದ್ವಾರ ದೇವಸ್ಥಾನದ ಸುತ್ತ ಕಟ್ಟಡ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯಿಂದ ಎರಡು ಕೋಟಿ ರೂಪಾಯ ವೆಚ್ಚದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ಅಭಿವೃದ್ಧಿಗೆ 40,ಲಕ್ಷ ಮಂಜೂರಾಗಿದ್ದು ಇಲ್ಲಿಯವರೆಗೂ ಸರ್ಕಾರದಿಂದ ಅನುದಾನ ವಿಳಂಬ ಆಗುತ್ತಿದೆ ಕೂಡಲೇ ಅನುದಾನವನ್ನು ಬಿಡುಗಡೆಗೊಳಿಸಿ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading