ಚಳ್ಳಕೆರೆ: ತಾಲೂಕಿನ ನಾಯಕನಹಟ್ಟಿ ಹೋಬಳಿಯ ರಾಮಸಾಗರ ಗ್ರಾಮದಲ್ಲಿರುವ ಮ್ಯಾಸನಾಯಕರ ಶ್ರೀ ಗಾದ್ರಿ ಪಾಲನಾಯಕ ಸ್ವಾಮಿಯ ಗುಡಿಯಲ್ಲಿ ಮಾ. 23 ರಿಂದ 25 ರವರೆಗೆ ಆಯೋಜಿಸಿರುವ ವೈದಿಕ ಮತ್ತು ಇತರೆ ಧಾರ್ಮಿಕ ಪುರೋಹಿತಶಾಹಿ ಆಚರಣೆಗಳನ್ನು ಕೂಡಲೇ ರದ್ದುಗೊಳಿಸಿ ವ್ಯಾಸ ನಾಯಕ ಬುಡಕಟ್ಟು ಜನಾಂಗ ಉಳಿಸಿಕೊಂಡು ಬಂದ ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿ ವ್ಯಾಸ ನಾಯಕ ಬುಡಕಟ್ಟು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮ್ಯಾಸಬೇಡ(ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ, ಸಂರಕ್ಷಣಾ ಸಮಿತಿ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ. ಗೆರೆಗಲ್ ಪಾಪಯ್ಯ ಕರ್ನಾಟಕದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಮ್ಯಾಸ ಬೇಡ ಬುಡಕಟ್ಟು ಜನರು ಹೆಚ್ಚಾಗಿ ನೆಲೆಸಿದ್ದಾರೆ ಶ್ರೀ ಗಾದ್ರಿಪಾಲನಾಯಕ ದೇವರು ವ್ಯಾಸ ನಾಯಕರ ಆರಾಧ್ಯ ದೈವ ವಾಗಿದ್ದು ವಿಶೇಷವಾಗಿ ದೇವರ ಎತ್ತುಗಳೆಂದು ಹಸು ಮತ್ತು ಹೋರಿ ಕರುಗಳನ್ನು ಪೂಜಿಸುತ್ತ ಬಂದಿದ್ದು ಇತ್ತೀಚಿನ ದಿನಗಳಲ್ಲಿ ಪುರೋಹಿತಶಾಹಿ ವರ್ಗ ನಮ್ಮ ಹಟ್ಟಿಗಳಿಗೆ ಪ್ರವೇಶಿಸಿ ಧಾರ್ಮಿಕ ಆಕ್ರಮಣ ನೀತಿಯಿಂದ ವೈದಿಕ ಮತ್ತು ಪುರೋಹಿತಶಾಹಿ ಧರ್ಮದ ಆಚರಣೆಗಳನ್ನು ಹೇರುವ ಹುನ್ನಾರ ನಡೆಸಿದ್ದಾರೆ. ಮ್ಯಾಸ ನಾಯಕ ಸಂಸ್ಕೃತಿಯು ತನ್ನದೇ ಆದ ವಿಶಿಷ್ಟವಾದ ನಂಬಿಕೆ ಆಚರಣೆ ಧಾರ್ಮಿಕ ವಿಧಿ ವಿಧಾನಗಳನ್ನು ಇಂದಿಗೂ ಜೀವಂತವಾಗಿ ಇಟ್ಟುಕೊಂಡಿದ್ದು ಯಜ್ಞ ಯಾಗಾದಿಗಳನ್ನು ಮಾಡುವ ಮೂಲಕ ನಮ್ಮ ಸಂಸ್ಕೃತಿಗೆ ದಕ್ಕೆ ಬರುವಂತೆ ಮಾಡುತ್ತಿದ್ದಾರೆ. ಈಗ ಹಮ್ಮಿಕೊಂಡಿರುವ ಕಾರ್ಯಕ್ರಮದಿಂದಾಗಿ ದೇವರ ಪಾವಿತ್ರತೆಯನ್ನು ಕೆಡಿಸಿ ಬುಡಕಟ್ಟು ಜನರ ನಂಬಿಕೆ ಶ್ರದ್ಧೆ ಆರಾಧನೆಗೆ ಚ್ಯುತಿ ತರುವಂತಿದೆ ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು ಮ್ಯಾಸ ನಾಯಕ ಬುಡಕಟ್ಟು ಜನಾಂಗದಲ್ಲಿ ಹೊರಗಿನಿಂದ ಪುರೋಹಿತರನ್ನು ಕರೆಸಿ ದೇವರ ಕಾರ್ಯ ಮಾಡುವ ಪದ್ಧತಿ ಇರುವುದಿಲ್ಲ ಆದ್ದರಿಂದ ಮೂರು ದಿನಗಳು ಆಯೋಜಿಸಿರುವ ವೈದಿಕ ಮತ್ತು ಪುರೋಹಿತಶಾಹಿ ಧರ್ಮದ ಆಚರಣೆಯಲ್ಲಿ ಜರುಗುವ ಕಾರ್ಯಕ್ರಮಗಳನ್ನು ತಡೆಹಿಡಿದು ನಮ್ಮ ಬುಡಕಟ್ಟು ಸಮುದಾಯದ ಧಾರ್ಮಿಕ ಸಂಪ್ರದಾಯಗಳನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಕೀಲ ಬಿ ಬೋರನಾಯಕ ಓಬಣ್ಣ ಪ್ರಹ್ಲಾದ್ ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.