ಮೊಳಕಾಲ್ಮೂರು
ಅಕ್ರಮ ಕಬ್ಬಿಣ ಮಾರಾಟ ದಂಧೆಯನ್ನು ಮೊಳಕಾಲ್ಮೂರು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಭೈರಾಪುರ ಸಮೀಪದ ಸಾಯಿ ಡಾಬಾ ಬಳಿ ಪರವಾನಗಿ ಇಲ್ಲದೇ ಕಬ್ಬಿಣದ ರಾಡ್, ಸಲಾಕೆಗಳನ್ನು ಸಾಗಣೆ ಮಾಡುವ ಲಾರಿ ಚಾಲಕರೊಂದಿಗೆ ಶಾಮೀಲಾಗಿ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ.ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಟಿ.ಎಂ. ಮೋಹನ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ, ಲಾರಿಯಿಂದ ಕಬ್ಬಿಣವನ್ನು ಇಳಿಸುತ್ತಿರುವಾಗ ವಶಕ್ಕೆ ಪಡೆದಿದೆ.
ಘಟನೆಗೆ ಸಂಬಂಧಪಟ್ಟಂತೆ ಭೈರಾಪುರದ ಜಿ.ಸಿ. ತಮ್ಮಣ್ಣ, ಅದೇ ಗ್ರಾಮದ ಹರೀಶ್, ತಿಪ್ಪೇಸ್ವಾಮಿ, ಲಾರಿ ಚಾಲಕರಾದ ಕೊಪ್ಪಳ ಜಿಲ್ಲೆ ಗೊಂಡಬಾದ ಗ್ರಾಮದ ಗವಿಸಿದ್ದಪ್ಪ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹುಲವತ್ತಿ ಗ್ರಾಮದ ಪರಶುರಾಮ, ಸಂಡೂರಿನ ಯರ್‍ರಿಸ್ವಾಮಿ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.ಬಂಧಿತದಿಂದ 20 ಟನ್ ತೂಕದ ₹12 ಲಕ್ಷ ಮೌಲ್ಯದ ಕಬ್ಬಿಣದ ಸಲಾಕೆ, ರಾಡ್, ಕೃತ್ಯದ ಸ್ಥಳದಲ್ಲಿದ್ದ ಮೂರು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೊಳಕಾಲ್ಮುರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಜಿಪಿ ಬಿ.ಆರ್. ರವಿಕಾಂತೇಗೌಡ, ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಎಸ್‌ಪಿ ಕುಮಾರಸ್ವಾಮಿ, ಡಿವೈಎಸ್‌ಪಿ ರಾಜಣ್ಣ ತಂಡವನ್ನು ಶ್ಲಾಘಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.