February 19, 2026
FB_IMG_1771508480454.jpg

ಹಿರಿಯೂರು:
ತಾಲ್ಲೂಕಿನ 151 ಶಾಲೆಗಳ ಹೆಸರಿಗೆ ಲಭ್ಯವಿರುವ ಜಾಗವನ್ನು ಕಾಲ ಮಿತಿಯೊಳಗೆ ನೋಂದಣಿಗೆ ಕ್ರಮವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿ.ಇ.ಒ.ಡಾ.ಆಕಾಶ್ ತಾಲ್ಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು.
ನಗರದ ಬಿ.ಇ.ಒ.ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೆಲವೆಡೆ ಶಾಲಾ ಕಟ್ಟಡಗಳು ಇರುವ ಜಾಗ ಶಾಲೆಯ ಹೆಸರಿಗೆ ಇರದೆ ಸ್ಥಳೀಯರು, ದಾನಿಗಳ ಹೆಸರಿನಲ್ಲಿವೆ. ಅಭಿಯಾನದ ಮಾದರಿಯಲ್ಲಿ ತಾಲ್ಲೂಕು ಆಡಳಿತ ತಕ್ಷಣ ಜಾಗ ಶಾಲೆ ಹೆಸರಿಗೆ ಮಾಡಿಕೊಳ್ಳಬೇಕು.ಈ ಕಾರ್ಯ ಮಾರ್ಚ್ ಮೊದಲ ವಾರದ ವೇಳೆಗೆ ಮುಗಿಯಬೇಕು ಎಂಬುದಾಗಿ ಅವರು ಹೇಳಿದರು.

ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಅಮೃತೇಶ್ವರಸ್ವಾಮಿ ಅವರು ಮಾತನಾಡಿ ಶಾಲೆಗಳಿಗೆ ಅಗತ್ಯವಾಗಿ ಕುಡಿಯುವ ನೀರು, ಶೌಚಗೃಹ, ಕಾಂಪೌಂಡ್ ನಿರ್ಮಾಣದಂತಹಚಟುವಟಿಕೆಗಳು ಅತಿ ಅಗತ್ಯವಾಗಿದ್ದು, ಇವುಗಳನ್ನು ಪೂರೈಕೆ ಮಾಡಬೇಕು ಎಂಬದಾಗಿ ಅವರು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಅವರು ಮಾತನಾಡಿ ವಿವಿಧ ಇಲಾಖೆ ಅಧಿಕಾರಿಗಳನ್ನು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ನೇಮಕಮಾಡಿದ್ದು, ಮನೆ ಭೇಟಿ, ವಿಶೇಷ ತರಗತಿ, ದತ್ತು ಯೋಜನೆ ಮುಂತಾದ ಕಾರ್ಯಚಟುವಟಿಕೆಗಳ ಮೂಲಕ ಶ್ರಮಿಸಲಾಗುತ್ತಿದೆ. ಪರೀಕ್ಷೆಗೆ ವಿದ್ಯಾರ್ಥಿಗಳ ಗೈರು ತಡೆಗೆ ಪ್ರಯತ್ನಿಸುವುದಾಗಿ ಅವರು ಹೇಳಿದರು.
ತಹಶೀಲ್ದಾರ್ ಎಂ.ಸಿದ್ದೇಶ್ ಅವರು ಮಾತನಾಡಿ ಶಾಲೆಗಳಜಾಗ ಸ್ಕೆಚ್ ಹಾಗೂ ಸರ್ವೆ ನಡೆಸಲು ಅಗತ್ಯಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ನಯಿಮುದ್ದಿನ್, ಅಂಜನಪ್ಪ, ಗೀತಾ ನಾಗಕುಮಾರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಶಿವಮೂರ್ತಿ, ಎ.ಇ.ಇ. ಹನುಮಂತಪ್ಪ, ತಿಮ್ಮಾಶ್ರೇಷ್ಠಿ, ಹನುಮಂತಪ್ಪ, ಬಿ.ಆರ್.ಸಿ.ಶ್ರೀನಿವಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading