February 19, 2026
IMG-20260219-WA0048.jpg

ನಾಯಕನಹಟ್ಟಿ: ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯನ್ನು ಬುಧವಾರ ಕಾಟವ್ವನಹಳ್ಳಿ ದಾಸರಗಿಡ್ಡಯ್ಯನಹಟ್ಟಿಯಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸಿದ್ದರು.ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಟವ್ವನಹಳ್ಳಿ ದಾಸರಗಿಡ್ಡಯ್ಯನಹಟ್ಟಿ ಗ್ರಾಮಗಳ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯಲ್ಲಿ ಮಾಜಿ ಗ್ರಾ.ಪಂ. ಅಜ್ಜನ ಬೋರಯ್ಯ ಮಾತನಾಡಿ ಬುಡಕಟ್ಟು ಜನರು ಅತಿ ಹೆಚ್ಚು ಇರುವುದರಿಂದ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯನ್ನು ಪ್ರತಿ ವರ್ಷ ನಮ್ಮ ಗ್ರಾಮದಲ್ಲಿ ಬುಡಕಟ್ಟು ಸಂಸ್ಕೃತಿಯಂತೆ ನಾಲ್ಕು ದಿನಗಳ ಆಚರಿಸಲಾಗುತ್ತದೆ.
ಕಾಲ
ಎಲ್ಲರಿಗೂ ಒಳಿತನ್ನು ಬಯಸುವ ಜಾತ್ರೆ ಇದಾಗಿದ್ದು, ಈ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಜನ ಜಾನುವಾರಗಳ ಆರೋಗ್ಯ ಮತ್ತು ಉತ್ತಮ ಮಳೆ ಬೆಳೆ ನೀಡಿ ಕಾಪಾಡಲಿ
ಎಂದರು.ಸಹಾಯಕ ಪ್ರಾಧ್ಯಾಪಕರಾದ
ಡಾ. ನಾಗರಾಜ್ ಮಾತನಾಡಿದರು. ಕಾಟವ್ವನಹಳ್ಳಿ ದಾಸರಗಿಡ್ಡಯ್ಯನಹಟ್ಟಿ ಎರಡು ಗ್ರಾಮಗಳ ಗ್ರಾಮಸ್ಥರು ಆಚರಿಸುವ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಇದು ಎಂದರು..
ಇದೇ ವೇಳೆ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು ಚಳ್ಳಕೆರೆ ಕಾಟಪ್ಪನಹಟ್ಟಿ ಮಂಜಣ್ಣ 70,. ಸಾವಿರ ರೂ. ಗಳಿಗೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.ಇದೇ ಸಂದರ್ಭದಲ್ಲಿ ಭೀಮನಕೆರೆ ಪಾಲಯ್ಯ,ಆರ್ ರಂಗಪ್ಪ, ಜಯಣ್ಣ ಜೆ.ಎಸ್, ಪಾಲಯ್ಯ, ಜಿ.ಎಸ್ ಪ್ರದೀಪ್, ಪೂಜಾರಿ ಈರಣ್ಣ, ಹುಡೆಂ ಚಂದ್ರಣ್ಣ,ಟಿ. ಚಂದ್ರಣ್ಣ, ಸಿ.ಎಸ್.ಸೂರಯ್ಯ, ಜಿ.ಎಂ.ಜಯಣ್ಣ, ಗೌಡಗೆರೆ ಟಿ.ರಂಗಪ್ಪ,, ಎನ್ ಮಹಾಂತೇಶ್, ಜಿ.ಟಿ. ತಿಪ್ಪೇಸ್ವಾಮಿ,
.ಸೇರಿದಂತೆ ಕಾಟವ್ವನಹಳ್ಳಿ ದಾಸರಗಿಡ್ಡಯ್ಯನಹಟ್ಟಿ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading