January 29, 2026
IMG-20250218-WA0317.jpg

 

ಚಳ್ಳಕೆರೆ: ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತು ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ ಎನ್‌ಜಿಒ ಸಂಸ್ಥೆಗಳ ಸಹಾಯದ ಮೂಲಕ ವಿಜ್ಞಾನ ವಿಷಯದ ಕುರಿತ ಕಿಟ್ ಗಳನ್ನು ವಿಚರಿಸಲಾಗುತ್ತಿದೆ ಎಂದು ಚಿತ್ರದುರ್ಗ ಡಯಟ್ ನ ನೋಡಲ್ ಅಧಿಕಾರಿ ಲೀಲಾವತಿ ತಿಳಿಸಿದರು. 

ನಗರದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳ ಹಿರಿಯ ಪ್ರಾಥಮಿಕ ಶಾಲೆಗಳಿಗೆ ವಿಜ್ಞಾನ ಕಿಟ್ ವಿತರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂಬ ದೂರದಷ್ಟಿಯಿಂದ ಐ ಎಲ್ ಪಿ ಮತ್ತು ಸಿ ಎಸ್ ಆರ್ ಫಂಡ್ ವತಿಯಿಂದ ವಿಜ್ಞಾನ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಈ ಕಿಟ್ ಗಳು ಐದರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ಶಿಕ್ಷಕರು ಪರಿಣಾಮಕಾರಿ ಬೋಧನೆ ಮಾಡಿ ವಿದ್ಯಾರ್ಥಿಗೆ ವಿಜ್ಞಾನ ಪಠ್ಯದಲ್ಲಿನ ವಿಷಯಗಳನ್ನು ಸುಲಲಿತವಾಗಿ ಅರ್ಥ ಮಾಡಿಸಿ ಹೆಚ್ಚು ಅಂಕ ಗಳಿಸಲು ನೆರವಾಗಬೇಕು ಎಂದು ಕಿವಿಮಾತು ಹೇಳಿದರು. 

ಐ ಎಲ್‌ಪಿ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಮಂಜುನಾಥ್ ಬೆಸ್ತರ ಮಾತನಾಡಿ ವಿಜ್ಞಾನ ವಿಷಯವನ್ನು ಸುಲಭವಾಗಿ ಪ್ರಯೋಗಗಳನ್ನು ಮಾಡಲು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲೆಂದು ಕ್ಯೂಆರ್ ಕೋಡನ್ನು ನೀಡಲಾಗಿದ್ದು ಅದರ ಸಹಾಯದ ಮೂಲಕ ವಿಡಿಯೋಗಳನ್ನು ನೋಡಿ ಪ್ರಯೋಗಗಳನ್ನು ಕಲಿಯಬಹುದಾಗಿದ್ದು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕಿಟ್ ಗಳನ್ನು ತಯಾರಿಸಲಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಆದರ್ಶ ಶಾಲೆಯ ಪ್ರಾಂಶುಪಾಲ ಅಶೋಕ್ ರೆಡ್ಡಿ ಲಲಿತಾ ಭಾರ್ಗವ್ ಶರತ್ ಪ್ರದೀಪ್ ಗೌರಿ ಚಂದನ ಸೇರಿದಂತೆ ಹಿರಿಯ ಪ್ರಾಥಮಿಕ ಶಾಲೆಗಳ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading