January 30, 2026
IMG-20250219-WA0062.jpg

ಹಿರಿಯೂರು:

ಕಾಡುಗೊಲ್ಲರ ಆರಾದೈವ ಶ್ರೀ ಪಾರ್ಥಲಿಂಗೇಸ್ವಾಮಿ ಕಾಳ ಹಬ್ಬ ಮಹೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿದೆ.

ತಾಲೂಕಿನ ಜವಗೊಂಡನಹಳ್ಳಿ ಹೋಬಳಿಯ ಕಾಟನಾಯಕನಹಳ್ಳಿ ಗ್ರಾಮದ ಗುಡಿಕಟ್ಟಿನ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ಶ್ರೀ ಪಾರ್ಥಲಿಂಗೇಶ್ವರ ಕಾಳಹಬ್ಬ ವಿಶೇಷವಾಗಿ ನಡೆಯುತ್ತದೆ.
ಶ್ರೀ ರಾಮದೇವರಿಗೆ 101 ಎಡೆಗಳ ಪೂಜೆ ಹಾಗೂ ವಿವಿಧ ಪೂಜೆ ಕೈಂಕಾರ್ಯಗಳು ನಡೆದಿದ್ದು, ಫೆಬ್ರವರಿ ಎರಡರಿಂದ 8 ರಿಂದ ಪ್ರಾರಂಭವಾದ ಈ ಕಾಳ ಹಬ್ಬ ಮಹೋತ್ಸವ ಫೆಬ್ರವರಿ 19 ವರೆಗೂ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ .ಶ್ರೀ ದೇವರುಗಳಿಗೆ ಅಣ್ಣ ತಮ್ಮಂದಿರು ಹಾಗೂ ಭಕ್ತರಿಂದ ಕಾಳಿನ ನೈವೇದ್ಯ ಪೂಜೆ ನಡೆದವು.
ಆನಂತರ ಸ್ವಾಮಿಗೆ ಪಟ್ಟಾಭಿಷೇಕ ಮತ್ತು ದೇವಸ್ಥಾನದಲ್ಲಿ ಬೇಯಿಸಿದ ಕಾಳು ಭಕ್ತರಿಗೆ ವಿತರಿಸಲಾಗಿದೆ. ಇನ್ನು ಅಣ್ಣ-ತಮ್ಮಂದಿರುಗಳು ಮತ್ತು ಭಕ್ತರಿಂದ ಅಕ್ಕಿ ಮೀಸಲು ಮತ್ತು ವೆಚ್ಚವನ್ನು ತೆಗೆದುಕೊಂಡಿದ್ದು, ಶ್ರೀ ರಾಮದೇವರು, ಶ್ರೀಪಾರ್ಥಲಿಂಗಸ್ವಾಮಿ ಮತ್ತು ಹಳ್ಳಿ ಕರಿಯಮ್ಮ ದೇವರುಗಳಿಗೆ ವಿಶೇಷ ಪೂಜೆ ದೇವಸ್ಥಾನ ದೀಪಾಲಾಂಕಾರದಿಂದ ಶೃಂಗರಿಸಲಾಗಿತ್ತು.
17ನೇ ತಾರೀಕು ಸೋಮವಾರ ಅರಸೇವೆ ಅನ್ನಸಾರ್ಪಣೆ ಹಾಗೂ ಅಲಂಕೃತ ಗೊಂಡ ದೇವರ ಮೆರವಣಿಗೆ ನಡೆಯಿತು.

ವಿಶೇಷವಾಗಿ ಬೆಳಗ್ಗೆ ದೇವರುಗಳ ಹೂವಿನ ಹರಾಜು ಮಾಡಲಾಯಿತು. ಭಕ್ತರು ತಂಬಿಟ್ಟುಗಳನ್ನು ತಯಾರು ಮಾಡಿಕೊಂಡು ಬಂದಿದ್ದರು. ಹಬ್ಬದ ವಿಶೇಷ ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ತಂಬಿಟ್ಟು ತಯಾರು ಮಾಡಿ ಆರತಿ ಬೆಳಗುವುದು ಇಲ್ಲಿ ವಿಶೇಷವಾಗಿರುತ್ತದೆ. ಅಕ್ಕಿ ಹಿಟ್ಟು ಯಂತ್ರಗಳ ಸಹಾಯ ಇಲ್ಲದೇ ಬೀಸುವ ಕಲ್ಲುಗಳಿಂದ ಹಿಟ್ಟು ತಯಾರು ಮಾಡಿಕೊಳ್ಳುತ್ತಾರೆ. ಸಾಕಷ್ಟು ಯಂತ್ರಗಳು ಬಂದರು ಈ ಗ್ರಾಮದಲ್ಲಿ ಮಾತ್ರ ಅಕ್ಕಿ ಹಿಟ್ಟುನ್ನು ಬೀಸುವಕಲ್ಲುಗಳಿಂದ ಬೀಸುತ್ತಾರೆ.
ಅನಾದಿ ಕಾಲದಿಂದಲೂ ನಡೆದು ಬಂದ ಪದ್ದತಿಯಂತೆ ಭಕ್ತರು ಬೆಳಗ್ಗೆ ಮಡಿ ಸ್ನಾನ ಮುಗಿಸಿ, ಊಟ ಸೇವಿಸದೆ ಬೀಸುವ ಕಲ್ಲುಗಳನ್ನು ತೊಳೆದು ಪೂಜೆ ಮಾಡಿ ದೇವಸ್ಥಾನದ ಉಗ್ರಾಣದಲ್ಲಿ ಬೀಸುವ ಕಲ್ಲಿನಿಂದ ಅಕ್ಕಿ ಬೀಸುತ್ತಾರೆ. ಅಕ್ಕಿ ಬೀಸುವಾಗ ಮಾತನಾಡಬಾರದು ಎನ್ನುವ ಉದ್ದೇಶ ಮತ್ತು ಪದ್ಧತಿಯಂತೆ ಬಾಯಿಗೆ ಬಟ್ಟೆ ಕಟ್ಟಿಕೊಂಡು ಅಕ್ಕಿ ಬೀಸುವುದು ಇಲ್ಲಿನ ವಿಶೇಷ
19ನೇ ತಾರೀಖನ ಬುಧವಾರ
ಬೀಸಲಾದ ಅಕ್ಕಿಯ ಗಂಟನ್ನು ಹೊತ್ತುಕೊಂಡು, ದೇವರ ಪಲ್ಲಕ್ಕಿ ಜೊತೆಯಲ್ಲಿ ಬರಿಗಾಲಿನಲ್ಲಿ ಎಂಟು ಕಿಲೋಮೀಟರ್ ತಾಲೂಕಿನ ದಂಡಿಕೆರೆ ಗ್ರಾಮದ ವೀರದಂಡಣ್ಣ ದೇವರ ಸನ್ನಿಧಿಗೆ ತೆರಳುತ್ತಾರೆ. ಅಲ್ಲಿಗೆ ಬರುವ ಭಕ್ತರು ಎತ್ತಿನ ಬಂಡಿಗಳಲ್ಲಿ, ಟ್ಯಾಕ್ಕರ್ ಮೂಲಕ ಟಾಟಾ ಏಸುಗಳಲ್ಲಿ ಭಕ್ತರು ಬಂದು ಸೇರುತ್ತಾರೆ. ನಂತರ ದೇವಸ್ಥಾನದ ಸಮೀಪ ಇರುವ ಸುವರ್ಣ ಮುಖಿಯಲ್ಲಿ ಸ್ನಾನ ಮಾಡಿ ದೇವಸ್ಥಾನದಲ್ಲಿ ಅಕ್ಕಿ ಹಿಟ್ಟಿನಲ್ಲಿ ಪಡಿಯಾರತಿ ತಯಾರು ಮಾಡುತ್ತಾರೆ. ನಂತರ ವೀರದಂಡಣ್ಣ ದೇವರಿಗೆ ವಿಶೇಷ ಪೂಜೆ ಮುಗಿಸಿ ನಿಂಗಣ್ಣ ದೇವಸ್ಥಾನದ ಹತ್ತಿರ ಭಕ್ತರೆಲ್ಲರು ತೆರಳುತ್ತಾರೆ. ದೇವಸ್ಥಾನದಲ್ಲಿ ಹುಂಡೆ ಮಂಡೆ ಮುಗಿಸಿ ದೇವರಿಗೆ ಆರತಿ ಬೆಳಗಿ ಕಟ್ಟಿಕೊಂಡ ಬಂದ ಬುತ್ತಿಯನ್ನು ಸ್ವೀಕರಿಸಿ, ನಂತ ಭಕ್ತರು ಕಾಟನಾಯಕನಹಳ್ಳಿ ಗ್ರಾಮಕ್ಕೆ ಹಿಂದಿರುಗುತ್ತಾ ಆನಂತರ ಪಲ್ಲಕ್ಕಿ ಉತ್ಸವ ಮತ್ತು ಕುದುರೆ ಅರಿಸೇವೆ ನಂತರ ಬಾಳೆ ಹಣ್ಣು ಸಕ್ಕರೆ ತುಪ್ಪದಿಂದ ತಯಾರು ಮಾ ಪ್ರಸಾದ ಹಂಚಲಾಯಿತು.
ಭಕ್ತರಿಗೆ ಅಣ್ಣತಮ್ಮಂದಿರರಿಗೆ ಹಣ್ಣು ಕಾಯಿಪ್ರಸಾದ ವಿತರಿಸಲಾಗುತ್ತದೆ. ಬೇರೆ ಬೇರೆ ಊರುಗಳಿ ಬಂದ ಅಣ್ಣ-ತಮ್ಮಂದಿರರು ತಮ್ಮ ಗ್ರಾಮಗಳಿಗೆ ತೆರಳುತ್ತಾರೆ.

ಈ ವರ್ಷದ ಹೂವಿನ ಅಲಂಕಾರವನ್ನು ಕಾಡು ಗೊಲ್ಲರ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ ಅವರು ನಡೆಸಿಕೊಟ್ಟಿದ್ದರು….


ಈ ಗ್ರಾಮದಲ್ಲಿ ನಡೆಯುವ ಕಾಳು ಹಬ್ಬದಲ್ಲಿ ಬುಡಕಟ್ಟು ಸಂಪ್ರದಾಯವನ್ನು ನಾವು ಕಾಣಬಹುದು. ಗ್ರಾಮದಲ್ಲಿ ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನದಂದು ಅಣ್ಣ ತಮ್ಮಂದಿರರು ಎಲ್ಲೆ ಇದ್ದರೂ ಇಲ್ಲಿಗೆ ಬಂದು ಸೇರಿ ಎಲ್ಲರೂ ಒಟ್ಟುಗೂಡಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಂತಹ ಪದ್ಧತಿಯಾಗಿದೆ .

ಸುರೇಶಬೆಳಗೆರೆ ಭಕ್ತ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading