ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ ತಾಲ್ಲೂಕಿನ ಆದ್ರಿಕಟ್ಟೆ ಗ್ರಾಮದ ತರಿಕೆರೆ ರಸ್ತೆಯ ಸೋಮವಾರ ಆಯೋಜಿಸಿದ್ದ ಫ್ಯಾಷನ್ ಡ್ರೆಸ್ ಎಕ್ಸಿಬಿಷನ್ ಮತ್ತು ಸೇಲ್ ಲಾಂಚಿಂಗ್ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಕೆ. ಪ್ರೇಮಾಬಸವರಾಜ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಶ್ರಯ ಫ್ಯಾಷನ್ ಮತ್ತು ಅಪರೇಲ್ ಇಂಡಸ್ಟ್ರಿ ಸಿಇಒ ಹಾಗೂ ಫೌಂಡರ್ ಕುಮಾರಿ ಜಿ. ಸುಶೀಲಾ ಅವರು, ಮಹಿಳೆಯರು ಇಂದು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುನ್ನಡೆ ಸಾಧಿಸುತ್ತಿದ್ದರೂ ಇನ್ನೂ ಸಾಕಷ್ಟು ಮಹಿಳೆಯರು ಹಿಂದೆ ಉಳಿದಿದ್ದಾರೆ. ಅಂತಹ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಉದ್ಯಮವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಮಹಿಳೆಯರು ಮುಂದೆ ಬರಬೇಕಾದರೆ ಗುರಿ ಹಾಗೂ ಛಲ ಎರಡೂ ಇರಬೇಕು. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುನ್ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದಲೇ ಈ ಇಂಡಸ್ಟ್ರಿಯನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಶ್ರೀಮತಿ ಬಿ.ಎಲ್. ಜ್ಯೋತಿಶ್ರೀಧರ್ ಮಾತನಾಡಿ, ದೇಶದ ಅಭಿವೃದ್ಧಿ ಎಂದರೆ ಮಹಿಳೆಯರ ಅಭಿವೃದ್ಧಿಯೇ ಆಗಿದೆ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶ ದೊರಕಬೇಕು. ಈ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಉದ್ಯಮ ಆರಂಭಿಸಿ ಉದ್ಯೋಗ ಕಲ್ಪಿಸುತ್ತಿರುವ ಈ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಾನೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಕೆ. ಪ್ರೇಮಾಬಸವರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತ ವೈದ್ಯಾಧಿಕಾರಿ ಡಾ. ಪವಿತ್ರಾಣಿ ಎಚ್.ಎಸ್., ಹೊಸದುರ್ಗ ಚೇತನ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಬಿ.ಆರ್. ಸವಿತಾರಮೇಶ್, ಶಿಕ್ಷಕಿ ಶ್ರೀಮತಿ ಸಿ. ಮಂಜುಳಾಬಸವರಾಜ್, ವಕೀಲರಾದ ಬಿ.ಎಲ್. ಗಂಗಾಧರ್, ಶ್ರೀಮತಿ ಜೆ. ಸುಧಾ ಗಂಗಾಧರ್, ಶ್ರೀಮತಿ ಕೆ.ಎ. ಸಾವಿತ್ರಿ ಜಗದೀಶ್, ಶ್ರೀಮತಿ ಬಿ.ಎಲ್. ಜ್ಯೋತಿಶ್ರೀಧರ್, ಹೊಸದುರ್ಗ ಸ್ವಪ್ನ ಸೃಷ್ಟಿ ಹೋಮ್ ಇಂಟೀರಿಯರ್ ಡಿಸೈನರ್ ಶ್ರೀಮತಿ ವಿ.ಎನ್. ಅಪಿತಾಸಿದ್ದೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮದ ಉದ್ಯೋಗಿಗಳು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.