ಚಳ್ಳಕೆರೆ ಜ.19
ಸರಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳ ಡೆಪ್ಯುಟೇಶನ್‌ಗೆ ಸರಕಾರ ಬ್ರೇಕ್ ಹಾಕಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒ .ಕಾರ್ಯದರ್ಶಿ. ಲೆಕ್ಕೆ ಸಹಾಯಕನ್ನು ತಾಲೂಕು ಪಂಚಾಯಿತಿ ಕಚೇರಿ ಸೇರಿದಂತೆ ವಿವಿಧ ಗ್ರಾಮಪಂಚಾಯಿಗಳಿಗೆ ಸರಕಾರದ ಅನುಮತಿಯಿಲ್ಲದೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳಿಂದ ನಿಯೋಜನೆ ಮಾಡಿರುವಯದು ರದ್ದಾಗಿದ್ದು ಕೂಡಲೆ ಪಿಡಿಒ.ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕರು ಮೂಲ ಸ್ಥಾನಗಳಿಗೆ ಕರ್ತವ್ಯ ನಿರ್ವಹಿಸುವಂತೆ ಜ.18 ದ ಶನಿವಾರ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ರಾಪಂ ಪಿಡಿಒ. ಕಾರ್ಯದರ್ಶಿ ಸ್ಥಳೀಯ ಮಟ್ಟದ ವರ್ಗಾವಣೆ, ನಿಯೋಜನೆ ರದ್ದು ಮಾಡಿ ಮೂಲ ನಿಯುಕ್ತಿ ಸ್ಥಳಕ್ಕೆ ಹಾಜರಾಗಲು ಆದೇಶಿಸಿದೆ. ಇದರಿಂದ ಕೆಲವೆಡೆ ಅನಗತ್ಯವಾಗಿ ಆಗಬಹುದಾಗಿದ್ದ ಡೆಪ್ಯುಟೇಶನ್ ಕಾಟ ತಪ್ಪಿದಂತಾಗಿದೆ.
ವೀಕೇಂದ್ರಿಕರಣ ವ್ಯವಸ್ಥೆಯ ಮುಖ್ಯ ಹಾಗೂ ತಳಮಟ್ಟದ ಭಾಗವಾದ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಪಿಡಿಒಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗ್ರಾಪಂವೊಂದಕ್ಕೆ ಮೂಲವಾಗಿ ನಿಯುಕ್ತರಾಗುತ್ತಾರೆ. ಆದರೆ ಈವರೆಗೆ ಯಾವದ್ಯಾವುದೋ ಕಾರಣಕ್ಕೆ ಆಡಳಿತಾತ್ಮಕ ಹಿತದೃಷ್ಟಿಯ ಹಿನ್ನೆಲೆ ನೀಡಿ ಬೇರೆ ಗ್ರಾಮ ಪಂಚಾಯಿತಿಗಳಿಗೆ ಸ್ಥಳೀಯ ಮಟ್ಟದ ನಿಯೋಜನೆ ಪ್ರಕ್ರಿಯೆಗಳು ನಡೆಯುತ್ತಿದ್ದವು. ಹೀಗೆ ಸಾಕಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಮೂಲ ಸಿಬ್ಬಂದಿಗಳಿಗಿಂತ ಡೆಪ್ಯುಟೇಶನ್ ಆಧಾರದಲ್ಲಿ ನಿಯೋಜಿಸಿದ ಸಿಬ್ಬಂದಿಗಳೇ ಹೆಚ್ಚಿರುವಂತಾಗಿತ್ತು. ಈ ಬೇಕಾಬಿಟ್ಟಿಯಾಗಿ ಆಗುವ ಸ್ಥಳೀಯ ಮಟ್ಟದ ನಿಯೋಜನೆ ಪ್ರಕ್ರಿಯೆ ಸರಕಾರದ ಮಾರ್ಗಸೂಚಿಗೆ ವಿರುದ್ಧವಾಗಿರುವುದರಿಂದ ಅದಕ್ಕೆ ಕಡಿವಾಣ ಬಿದ್ದಿದೆ.

