ಚಳ್ಳಕೆರೆ: ಮಹಾಯೋಗಿ ವೇಮನ ಪ್ರಜಾಕವಿ ಎಂಬ ಹೆಸರಿನಿಂದ ಪ್ರಖ್ಯಾತ ಹೊಂದಿದ್ದರು ಬಸವಣ್ಣ ಅಂಬೇಡ್ಕರ್ ರವರ ಸಮಾನತೆಯ ತತ್ವವನ್ನು ತಮ್ಮ ಕವಿತೆಗಳ ಮೂಲಕ ಸಾರಿದಂತಹ ಮಹಾನ್ ಮಾನವತಾವಾದಿ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.

ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಮ್ಮಿಕೊಂಡಿದ್ದ ವೇಮನ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ವೇಮನರು ಜನರ ನಡೆನುಡಿಯನ್ನು ಕಂಡು ಕವಿತೆಗಳನ್ನು ರಚಿಸಿದಂತವರು ಜನರ ಜೀವನದ ಕಷ್ಟ ಸುಖಗಳನ್ನು ತಮ್ಮ ಕವಿತೆಗಳಲ್ಲಿ ಬರೆದು ಜನಾನುರಾಗಿಯಾಗಿ ತಮ್ಮ ಬದುಕನ್ನು ಕಳೆದಂತಹ ಮಹಾನ್ ಮೇಧಾವಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸ್ಮರಿಸಿದರು.
ತಹಶೀಲ್ದಾರ್ ರೆಹಾನ್ ಪಾಷ ಮಾತನಾಡಿ ಮಹಾಯೋಗಿ ಹೇಮನರು ಬರೆದಿರುವ ಸಾಹಿತ್ಯ ರಚನೆ ಜೀವನದ ಅನುಭವದಿಂದ ಬಂದಂತಹದಾಗಿದೆ ಬೇರೆಯವರ ಮೇಲೆ ತಮ್ಮ ಬೊಟ್ಟು ತೋರಿಸುವ ಬದಲು ಮನಸ್ಸನ್ನು ಶುದ್ಧೀಕರಣ ಗೊಳಿಸಿಕೊಳ್ಳಬೇಕು ಆತ್ಮ ಶುದ್ಧಿ ಇರದೆ ಯಾವ ಕೆಲಸ ಮಾಡಿದರು ವ್ಯರ್ಥ ಪ್ರತಿಯೊಬ್ಬ ವ್ಯಕ್ತಿಯು ಜನ ಸಮಾಜದ ಜೊತೆ ಬದುಕಬೇಕೆ ಹೊರತು ಒಬ್ಬಂಟಿಯಾಗಿ ಬದುಕಿದರೆ ಅದಕ್ಕೆ ಅರ್ಥವಿರುವುದಿಲ್ಲ ಮನುಷ್ಯನ ಮಾತಿನ ವಕ್ರತೆ ಮತ್ತು ಕಲ್ಲಿನ ವಕ್ರತೆಯನ್ನು ತಿದ್ದಬಹುದು ಆದರೆ ಮನಸ್ಸಿನ ವಕ್ರತೆಯನ್ನು ಎಂದಿಗೂ ಸಹ ತಿದ್ದಲಾಗದು ಎಂಬ ಆಶಯ ನುಡಿಗಳನ್ನು ವೇಮನರು ತಮ್ಮ ಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ಉಣ ಬಡಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನರ ಕುರಿತು ತಿಮ್ಮಾರೆಡ್ಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುನ್ ಬೀ, ಉಪಾಧ್ಯಕ್ಷೆ ಸುಮಾ ಭರಮಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ರಮೇಶ್ ಗೌಡ, ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ಸಮುದಾಯದ ಮುಖಂಡರುಗಳಾದ ರಘು, ತಿಮ್ಮಾರೆಡ್ಡಿ, ದಿನೇಶ್ ರೆಡ್ಡಿ, ವೆಂಕಟೇಶ್ ರೆಡ್ಡಿ, ಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಮುಖಂಡರುಗಳಾದ ನರಸಿಂಹಪ್ಪ, ಚಲುಮೇಶ್, ರಂಗಪ್ಪ, ಚೆಲುಮೇಶ್, ರಂಗಪ್ಪ, ಸುರೇಶ್, ವೀರಣ್ಣ, ಮುಖಂಡರು, ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.