ಹಿರಿಯೂರು
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಳೆದ 15 ದಿನಗಳಿಂದ ಕಾವೇರಿ ತಂತ್ರಾಂಶದಲ್ಲಿ ನಿರಂತರ ವ್ಯತ್ಯಯ ಉಂಟಾಗಿದ್ದು, ಜಮೀನುಗಳ ಶೇರಿಂಗ್, ಸರ್ವೇ ಸ್ಕೆಚ್, ಆಧಾರ್ ದೃಢೀಕರಣ ಹಾಗೂ ಬಡವರ ಬಗರ್ ಹುಕುಂ ಜಮೀನುಗಳ ಪೂಡಿ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಇದರಿಂದ ರೈತರು ಹಾಗೂ ನಾಗರಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಕುರಿತು ಮಾತನಾಡಿದ ಪಿಟ್ಲಾಲಿ ಶ್ರೀನಿವಾಸ್,
ಕಾವೇರಿ ತಂತ್ರಾಂಶದ ದೋಷಗಳಿಂದಾಗಿ ನೋಂದಣಿ, ಭೂಮಾಪನ ಹಾಗೂ ಕಂದಾಯ ಇಲಾಖೆಯ ಕೆಲಸಗಳು ನಡೆಯದೆ ಜನರು ದಿನನಿತ್ಯ ಕಚೇರಿಗಳಿಗೆ ಬಂದು ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಮಾತನಾಡಿ,
ನೋಂದಣಿ ಆಗದೆ ಇರುವ ಕಾರಣ ಕೆಲವೊಂದು ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಇನ್ನೂ ಕೆಲವು ಕುಟುಂಬಗಳಲ್ಲಿ ಒಳಜಗಳ ಹೆಚ್ಚಾಗುತ್ತಿದೆ. ಪರಸ್ಪರ ಒಪ್ಪಂದ ಮಾಡಿಕೊಂಡು ನೋಂದಣಿಗೆ ಬಂದರೂ ಕೆಲಸ ಆಗದೆ ಜನರು ಮಾನಸಿಕ ಒತ್ತಡ ಅನುಭವಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕವು ವಿಶ್ವಮಟ್ಟದ ಸಾಫ್ಟ್‌ವೇರ್ ಅಭಿವೃದ್ಧಿಗೆ ಹೆಸರುವಾಸಿಯಾದರೂ,
“ದೀಪದ ಕೆಳಗೆ ಕತ್ತಲು” ಎಂಬಂತೆ ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಸರ್ವರ್ ಸಮಸ್ಯೆಗಳು ಜನಸಾಮಾನ್ಯರು ಹಾಗೂ ರೈತರಿಗೆ ನಾನಾ ತೊಂದರೆಗಳನ್ನುಂಟು ಮಾಡುತ್ತಿವೆ ಎಂದು ಅವರು ಟೀಕಿಸಿದರು.
ಇನ್ನೂ ಇಲಾಖೆ ಆಧುನೀಕರಣ ಹಾಗೂ ಪರಿಶೀಲನೆಗೆ ಹಲವು ಪ್ರಯತ್ನಗಳಿದ್ದರೂ ಅವು ಫಲ ನೀಡುತ್ತಿಲ್ಲ.
ಭ್ರಷ್ಟಾಚಾರ ನಿಲ್ಲುತ್ತಿಲ್ಲ, ಸುಲಿಗೆ ಕಡಿಮೆಯಾಗುತ್ತಿಲ್ಲ, ಜನಸಾಮಾನ್ಯರಿಗೆ ಇಲಾಖೆಯ ಕೆಲಸಗಳು ದುಬಾರಿಯಾಗುತ್ತಿವೆ ಎಂದು ಆರೋಪಿಸಿದರು.
ಅಧಿಕಾರ ಶಾಶ್ವತವಲ್ಲ.
ಕಂದಾಯ ಸಚಿವರಾದ ಕೃಷ್ಣಭೈರೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರರಹಿತ, ಜನಪರ ಮತ್ತು ಸುಲಭ ಸೇವೆ ನೀಡುವ ಕಂದಾಯ ಇಲಾಖೆ ರೂಪಿಸಬೇಕೆಂದು ಅವರು ಆಗ್ರಹಿಸಿದರು.
About The Author
Discover more from JANADHWANI NEWS
Subscribe to get the latest posts sent to your email.