ಚಿತ್ರದುರ್ಗ:
ಚಳ್ಳಕೆರೆ ತಾಲ್ಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಶ್ರೀ ಗೌರಿ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಭಾನುವಾರ ರಾತ್ರಿ ಗ್ರಾಮದ ಬಸವೇಶ್ವರ ದೇವಾಲಯದಿಂದ ಗೌರಿದೇವಿಯನ್ನ ವಾದ್ಯ ವೈಭವಗಳಿಂದ ಕರೆತಂದು ಅಲಂಕೃತ ಭವ್ಯ ಮಂಟಪದಲ್ಲಿ ಕೂರಿಸಲಾಯಿತು. ಸೋಮವಾರ ಮುಂಜಾನೆಯಿಂದಲೇ ಭಕ್ತರು ಶ್ರದ್ಧಾ ಭಕ್ತಿಯಿಂದ ತಾಯಿಯ ಹಣ್ಣು ಕಾಯಿ ನೈವೇದ್ಯಗಳನ್ನ ಅರ್ಪಿಸಿ, ತಮ್ಮ ಹರಕೆಯ ಭಕ್ತಿಯನ್ನು ಸಮರ್ಪಿಸಿದರು. ಸಂಜೆ ಆರು ಗಂಟೆಗೆ ಎತ್ತಿನ ಹಬ್ಬದ ನಿಮಿತ್ತ ವಿವಿಧ ಬಗೆಯ ಹೂವುಗಳಿಂದ ಅಲಂಕಾರಿಸಲಾದ ಎತ್ತುಗಳನ್ನ ಊರ ಹೊರಗೆ ಕೆಂಡ ಹಾಕಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಎತ್ತುಗಳನ್ನ ಮೆರವಣಿಗೆ ಮೂಲಕ ಕರೆತಂದರು. ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಗ್ರಾಮದ ಎಲ್ಲಾ ದೇವಸ್ಥಾನಗಳಲ್ಲಿ ಕಾರ್ತಿಕ ದೀಪೋತ್ಸವ ನಡೆಯಿತು. ಮಂಗಳವಾರ ಬೆಳಗಿನ ಜಾವ 4-00 ಗಂಟೆಯಿಂದ ಶ್ರೀ ಗೌರಿ ದೇವಿ ವಿಸರ್ಜನಾ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯಲ್ಲಿ ಗ್ರಾಮದ ಪ್ರತಿ ಮನೆಗಳಿಂದ ಮಹಿಳೆಯರು ಆರತಿ ಕಳಸಗಳನ್ನ ಹಿಡಿದು ಭಕ್ತಿ ಸಮರ್ಪಿಸಿದರು. ವೀರಗಾಸೆ ಕುಣಿತ ನೋಡುಗರ ಕಣ್ಮನ ಸೆಳೆಯಿತು. ಕರಡಿ ಸಮಾಳದ ನಾದಕ್ಕೆ ಯುವಕರು ನಂದಿಕೋಲು ಕುಣಿಸಿ ಸಂಭ್ರಮಿಸಿದರು. ಬೆಳಿಗ್ಗೆ 8-00 ಗಂಟೆಗೆ ವೇದಾವತಿ ನದಿಯಲ್ಲಿ ಜಗನ್ಮಾತೆ ಗೌರಿ ದೇವಿಯನ್ನು ವಿಸರ್ಜನೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರ








About The Author
Discover more from JANADHWANI NEWS
Subscribe to get the latest posts sent to your email.