December 15, 2025
IMG-20251118-WA0217.jpg

ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ-: ಡಿಸೆಂಬರ್ ತಿಂಗಳ ಒಳಗಾಗಿ ಪ್ರತಿಯೊಬ್ಬ ಆಟೋ ಚಾಲಕರು ದಾಖಲಾತಿ ಸರಿಪಡಿಸಿಕೊಳ್ಳಬೇಕು ಎಂದು ಪಿ ಎಸ್ ಐ ಪಾಂಡುರಂಗಪ್ಪ ಹೇಳಿದರು.

ನಾಯಕನಹಟ್ಟಿ ಪಟ್ಟಣದಲ್ಲಿ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿದ ಅವರು ಆಟೋ ಚಾಲಕರು ಕಡ್ಡಾಯವಾಗಿ ತಮ್ಮ ವಾಹನಗಳ ಆರ್.ಸಿ, ವಿಮೆ, ಎಮಿಷನ್ ಟೆಸ್ಟ್ ಮತ್ತಿತರ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಸಮವಸ್ತ್ರ ಧರಿಸಬೇಕು. ಚಾಲನಾ ಪರವಾನಗಿ ಹೊಂದಿರಬೇಕು ಎಂದು ಸೂಚಿಸಿದರು.

ಚಾಲಕರು ಅಗತ್ಯವಾದ ದಾಖಲೆಗಳನ್ನು ನೀಡಿ ವತಿಯಿಂದ ಚಾಲನಾ ಪರವಾನಗಿಯನ್ನು ಮಾಡಿಸಿಕೊಳ್ಳಬೇಕು, ಆಟೊಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಲೇಬೇಕು. ಅಕಸ್ಮಾತ್ ಅಪಘಾತವಾದರೆ ವಿಮೆ ಇಲ್ಲದಿದ್ದರೆ ತೀವ್ರ ತೊಂದರೆಯಾಗುತ್ತದೆ ಎಂದು ಚಾಲಕರಿಗೆ ಮನವರಿಕೆ ಮಾಡಿದರು.

ಪರ್ಮಿಟ್ ಎಷ್ಟು ಕಿಲೋಮೀಟರ್ ವ್ಯಾಪ್ತಿ ಇರುತ್ತದೆಯೋ ಅಲ್ಲಿವರೆಗೂ ಮಾತ್ರ ಆಟೋ ಚಲಾಯಿಸಬೇಕು, ಅಕಸ್ಮಾತ್ ಪರ್ಮಿಟ್ ಮೀರಿ ಹೋದಾಗ ಅಪಘಾತಗಳು ಸಂಭವಿಸಿದಾಗ ಇನ್ಸೂರೆನ್ಸ್ ಕ್ಲಮ್ ಆಗುವುದಿಲ್ಲ, ಇಂತಹ ಸಂದರ್ಭದಲ್ಲಿ ಆಟೋ ಚಾಲಕರು ಒಳಮನೆ ಮಾರುವಂತಹ ಸ್ಥಿತಿಗೆ ತಲುಪಬಹುದು ಆದಷ್ಟು ಎಚ್ಚರಿಕೆಯಿಂದ ಇರಬೇಕು,

ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳಬೇಕು. ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳ ಪಾರ್ಕಿಂಗ್ ಮಾಡಬೇಕು. ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದರೆ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಾಘವೇಂದ್ರ, ಭಾಷಾ, ಹರೀಶ್, ಕುಮಾರ್ , ವೀರೇಶ್ ಲೋಹಿತ್, ಸೇರಿದಂತೆ ಆಟೋ ಚಾಲಕರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading