January 29, 2026
IMG-20251118-WA0106.jpg

ತೇರು ಮತ್ತು ಜಾತ್ರೆಗಳು ಬರೀ ಸಂಭ್ರಮ ಕಷ್ಟ ಸೀಮಿತವಾಗದೆ ಈ ನಾಡಿನ ಭಕ್ತಿ ಜಾನಪದ ಕೃಷಿ ಮತ್ತು ಅವಿಭಕ್ತ ಕುಟುಂಬದ ಗ್ರಾಮೀಣ ಪರಂಪರೆಯನ್ನು ನಮ್ಮಗಳಿಗೆ ನೆನಪಿಸುವ ಮತ್ತು ಮೈಗೂಡಿಸಿ ಕೊಳ್ಳುವಂತಹ ಮನೋ ಭೂಮಿಕೆ ಯಾಗಿದೆ ಎಂದು ಚಳ್ಳಕೆರೆಯ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು

ಅವರು ರಾಯಾಪುರ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ನೂತನ ರಥೋತ್ಸವ ಊರು ಮಾರಮ್ಮ ದೇವಿಯ ದೇವಸ್ಥಾನ ಪ್ರಾರಂಭೋತ್ಸವ ಮತ್ತು ವಾಲ್ಮೀಕಿ ಪ್ರತಿಮೆಯ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಜಾತ್ರೆಗಳು ಗ್ರಾಮ ಸಂಸ್ಕೃತಿಯ ಅಭಿವ್ಯಕ್ತಿಯಾಗಿದೆ ಇಂತಹ ಜಾತ್ರೆ ಮತ್ತು ತೇರುಗಳಲ್ಲಿ ಜಾತಿಯನ್ನ ಧರ್ಮವನ್ನ ಮೀರಿದ ಜನರ ಪಾಲುದಾರಿಕೆ ಇದಾಗಿದೆ ಜಾಗತೀಕರಣ ನಗರೀ ಕರಣ ಮತ್ತು ಉದ್ಯೋಗಿಕರಣದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಇಂತಹ ಜಾತ್ರೆ ಮತ್ತು ತೇರುಗಳ ಸಂಭ್ರಮ ಕಡಿಮೆಯಾಗುತ್ತಿರುವುದು ವಿಷಾಧನ ನೀ ಯ ಇಂತಹ ತೇರು ಮತ್ತು ಜಾತ್ರೆಗಳು ನಮ್ಮ ಹಿಂದೂ ಧರ್ಮದ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಶತಮಾನಗಳವರೆಗೆ ಉಳಿಸುವಂತವು ಇಂದು ಅವಿಭಕ್ತ ಕುಟುಂಬಗಳಲ್ಲಿ ಇಂತಹ ಜಾತ್ರೆ ಮತ್ತು ತೇರುಗಳು ಭಾವನಾತ್ಮಕವಾದ ಸಂಬಂಧಗಳನ್ನು ಬೆಸೆಯುತ್ತವೆ ಇಂತಹ ತೇರುಗಳಲ್ಲಿ ನಾವೆಲ್ಲ ಪ್ರತಿಯೊಬ್ಬರೂ ಕೂಡ ಅರವಟಿಕೆ ಇಟ್ಟು ಕೋಸುಂಬರಿ ಪಾನಕ ಪ್ರಸಾದ ಇವುಗಳನ್ನು ಹಂಚಿದ್ದೇವೆ ತಿಂದಿದ್ದೇವೆ ದೇವರ ಕೃಪೆಗೆ ಪಾತ್ರರಾಗಿದ್ದೇವೆ ಆಸೆ ಹೊತ್ತಂತಹ ಭಕ್ತ ದಾನಿಗಣ ಹಲಗೆ ಆರತಿ ದೀವಟಿಗೆ ಕಾರ್ಯಕರ್ತರು ಆಟಿಕೆ ಚೆಂಡು ಬೂಂದಿ ಕಾರ ಬತ್ತಾಸು ಮಂಡಕ್ಕಿಯ ಕವರ್ ಹಿಡಿದು ಜನರನ್ನು ಕರೆಯುವಂತ ವ್ಯಾಪಾರಿಗಳು ಇನ್ನು ಹಲವು ಪ್ರಕಾರಗಳ ಸಂಭ್ರಮಗಳು ವ್ಯಾಪಾರ ವಹಿವಾಟನ್ನು ನೋಡುತ್ತೇವೆ ಇವತ್ತು ಈ ಗ್ರಾಮದ ಜನತೆ ಅಂದಾಜು 20 ಲಕ್ಷದ ಈ ಒಂದು ರಥದ ನಿರ್ಮಾಣ ಮಾಡಿರುವುದು ಗ್ರಾಮದ ಭಕ್ತಿಯ ಸಂಕೇತವಾಗಿದೆ ಇಂತಹ ರಥದ ನಿರ್ಮಾಣಕ್ಕೆ ಸಹಕರಿಸಿದ ಗ್ರಾಮದ ಪ್ರತಿಯೊಬ್ಬರಿಗೂ ಕೂಡ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು ಪರಮಪೂಜ್ಯ ರಾಜನಹಳ್ಳಿ ವಾಲ್ಮೀಕಿ ಮಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಮತ್ತು ಸಿದ್ದಯ್ಯನ ಕೋಟೆಯ ಶ್ರೀಗಳು ಊರು ಮಾರಮ್ಮ ದೇವಿಯ ದೇವಸ್ಥಾನದ ಪೂಜಾ ಪ್ರಾರಂಭೋತ್ಸವವನ್ನು ನೆರವೇರಿಸಿ ಮಾತನಾಡಿ ಇಂತಹ ಧಾರ್ಮಿಕ ಆಚರಣೆಗಳ ಮುಖಾಂತರ ಸಮುದಾಯವನ್ನು ಒಗ್ಗೂಡಿಸುವ ಕೆಲಸವಾಗಬೇಕು ಆಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಹೇಳಿ ಫೆಬ್ರವರಿ 8 ಮತ್ತು 9ರಂದು ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆಯ ನಡೆಯುತ್ತಿದ್ದು ಜನಾಂಗದ ಪ್ರತಿಯೊಬ್ಬರು ಕೂಡ ಈ ಜಾತ್ರೆಗೆ ಪಾಲ್ಗೊಂಡು ಜನಾಂಗದ ಒಗ್ಗಟ್ಟಿಗೆ ಶಕ್ತಿ ನೀಡಬೇಕೆಂದು ಸಲಹೆ ನೀಡಿದರು
ಇದೇ ಸಂದರ್ಭದಲ್ಲಿ ತಾಲೂಕ್ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದಂತ ಚೇತನ್ ಪಟೇಲ್ ಪಾಪ ನಾಯ್ಕ ಯತ್ನಟ್ಟಿ ಗೌಡ್ರು ಈಶ್ವರಪ್ಪ ಜಗಳೂರಯ್ಯ ಮಾರ ನಾಯ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸಮ್ಮ ಮುಂತಾದವರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading