December 13, 2025
FB_IMG_1731938952279.jpg


ಹಿರಿಯೂರು :
ಹರಿದಾಸ ಸಂತ, ಧ್ವೈತಸಿದ್ದಾಂತದ ತತ್ವಜ್ಞಾನಿ, ಮಹಾನ್ ದಾರ್ಶನಿಕ, ಸಂಗೀತಗಾರ, ಕೀರ್ತನಕಾರ, ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಕೀರ್ತನೆಗಳು ಇಂದಿಗೂ, ಪ್ರಸ್ತುತವಾಗಿದ್ದು, ಅವರ ಕೀರ್ತನೆಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ರಾಜೇಶ್ ಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ನಗರಸಭೆ ಇವರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕನಕದಾಸ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್ ಮಾತನಾಡಿ, ಉಡುಪಿಯ ಶ್ರೀಕೃಷ್ಣನ ಪರಮ ಭಕ್ತರಾದ ಕನಕದಾಸರು ಹರಿಭಕ್ತಿಸಾರ, ಮೋಹನತರಂಗಿಣಿ, ರಾಮಧಾನ್ಯಚರಿತೆ, ನಳಚರಿತೆ ಹೀಗೆ ಹಲವಾರು ಮಹಾಕಾವ್ಯಗಳನ್ನು ರಚಿಸುವ ಮೂಲಕ ಉತ್ತಮ ಕೀರ್ತನಕಾರರಾಗಿ ಹೆಸರು ಮಾಡಿದ್ದಾರೆ ಎಂಬುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾಸುರೇಶ್ ಬಾಬು ಮಾತನಾಡಿ, ಬೀರಪ್ಪ ಹಾಗೂ ಬಚ್ಚಮ್ಮನ ಮಗನಾಗಿ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಹುಟ್ಟಿದ ಕನಕದಾಸರ ಮೊದಲ ಹೆಸರು ತಿಮ್ಮಪ್ಪನಾಯಕ, ತಮಗೆ ಭೂಮಿಯಲ್ಲಿ ಸಿಕ್ಕಿದ ಕೊಪ್ಪರಿಗೆ ಬಂಗಾರವನ್ನು ಊರಿನ ಜನತೆಗೆ ದಾನಮಾಡಿದ್ದಕ್ಕಾಗಿ ಕನಕದಾಸರು ಎಂಬುದಾಗಿ ಹೆಸರಾದರು, ಇವರ ಸರಳ ಜೀವನ ಯುವಜನಾಂಗಕ್ಕೆ ಮಾದರಿಯಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಆರಾಧ್ಯ, ಉಪನ್ಯಾಸಕರಾದ ಲೇಪಾಕ್ಷರವರು ವಿಶೇಷ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ವಾಸೀಂ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಬಿ.ಸಿ.ಎಂ. ಇಲಾಖೆಯ ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜನಿ, ನಗರಸಭೆ ಸದಸ್ಯರುಗಳಾದ ಶ್ರೀಮತಿ ಮೊದಲಮೇರಿ, ಶ್ರೀಮತಿ ರತ್ನಮ್ಮ, ಶ್ರೀಮತಿ ವಿಶಾಲಾಕ್ಷಿ, ನಾಮ ನಿರ್ದೇಶನ ಸದಸ್ಯರಾದ ಶಿವಕುಮಾರ್, ಕುರುಬ ಸಮುದಾಯದ ಅಧ್ಯಕ್ಷರಾದ ಹರ್ತಿಕೋಟೆ ಮಹಂತೇಶ್, ಕೆ.ಪಿ.ಸಿ.ಸಿ. ಸದಸ್ಯರಾದ ಕಂದಿಕೆರೆ ಸುರೇಶ್ ಬಾಬು, ಮುಖಂಡರುಗಳಾದ ಗಿರಿಜಪ್ಪ, ವೆಂಕಟೇಶ್, ಜಯರಾಮ್, ಹೂವಿನಹೊಳೆ ರಂಗಸ್ವಾಮಿ, ಸಿದ್ದೇಶ್, ಕೆಂಪಣ್ಣ, ಮಂಜುನಾಥ್, ತಿಪ್ಪೇಸ್ವಾಮಿ, ಶಿಕ್ಷಕರಾದ ಮಹಾಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading