ಹಿರಿಯೂರು:
ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ಮೋಟಾರ್ ಪಂಪ್ ಮೂಲಕ ನೀರು ಹರಿಸುತ್ತಿದ್ದುದನ್ನು ಮತ್ತೆ ನಿಲ್ಲಿಸಲಾಗಿದೆ. ಇದಕ್ಕೆ ಕಾರಣರಾದವರ ಹುಚ್ಚಾಟವನ್ನು ಕೇಳುವವರೇ ಇಲ್ಲದಂತಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ವಿಷಾದ ವ್ಯಕ್ತಪಡಿಸಿದರು.
ಒಂದು ಬಾರಿ 130 ಅಡಿ ಸಂಗ್ರಹವಾಗಿ ಮೋಟಾರ್ ನಿಲ್ಲಿಸಿದರೆ ನದಿಯಲ್ಲಿ ಹರಿಯುವ ಸಿಪೇಜ್ ನೀರು ಬೇಸಿಗೆವರೆಗೂ ಆವಿ, ಕುಡಿಯುವ ನೀರು ಬಳಸಲು, ಹಿಂಗುವಿಕೆ ಮುಂತಾದುವಕ್ಕೆ ಬಳಕೆಯಾಗಿ ವಾಣಿವಿಲಾಸ ಸಾಗರದಲ್ಲಿ 130 ಅಡಿ ಕಾಯ್ದುಕೊಳ್ಳಲು ಸಹಾಯವಾಗುತ್ತದೆ.
ಹೀಗಾಗಿ ಈ ಮಟ್ಟದ ಕೇವಲ ಒಂದು ಅಡಿ ನೀರು ಬೇಸಿಗೆಯಲ್ಲಿ ಬಿಡುವ ಒಂದು ಹದಕ್ಕೆ ಸಾಕಾಗುತ್ತದೆ. ಕೆರೆಯಲ್ಲಿ ನೀರು ಕಮ್ಮಿಯಾದಾಗ ಒಂದು ಹದಕ್ಕೆ 5 ರಿಂದ 6ಅಡಿ ನೀರು ಕೆರೆಯಿಂದ ಖಾಲಿಯಾಗಿ ಸುಮಾರು ಮೂರು ಹದಕ್ಕೆ ನೀರಿನ ಮಟ್ಟದ ಭಾರೀ ಕುಸಿತಕ್ಕೆ ಕಾರಣವಾಗುತ್ತದೆ.
ಕಳೆದ ವರ್ಷ ಮಳೆ ಬಾರದಿದ್ದರಿಂದ ಒಂದು ಹನಿ ನೀರು ಕೆರೆಗೆ ಬರಲಿಲ್ಲ. ಈ ಬಾರಿ ಸ್ವಲ್ಪ ಮಳೆನೀರು, ಭದ್ರಾ ನೀರು ಹರಿದು ತುಂಬುವ ಸನಿಹಕ್ಕೆ ಬಂದಿರುತ್ತದೆ. ಈ ಕಾರಣಕ್ಕೆ ಭವಿಷ್ಯದ ದೃಷ್ಟಿಯಿಂದ ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸಿ ತುಂಬಿಸುವ ಅನಿವಾರ್ಯವಿರುತ್ತದೆ.
ಇದನ್ನು ಮನಗಂಡು ಜಿಲ್ಲಾ ಮಂತ್ರಿಗಳೂ ಸೇರಿದಂತೆ ಚಳ್ಳಕೆರೆ, ಚಿತ್ರದುರ್ಗ ಮೊಳಕಾಲ್ಮೂರು ಶಾಸಕರುಗಳು, ಈ ಎಲ್ಲಾ ತಾಲ್ಲೂಕುಗಳ ರೈತ ಸಂಘಗಳು ಒಕ್ಕೊರಲಿನಿಂದ ವಾಣಿವಿಲಾಸ ಸಾಗರ ಭರ್ತಿಯಾಗುವ ತನಕ ಭದ್ರಾ ಜಲಾಶಯದ ನೀರು ಹರಿಸಲು ಒತ್ತಾಯಿಸಬೇಕಾಗಿ ಕೋರಿದೆ.
About The Author
Discover more from JANADHWANI NEWS
Subscribe to get the latest posts sent to your email.