December 14, 2025
IMG-20241118-WA0246.jpg

ಚಳ್ಳಕೆರೆ
ಯೋಗದಿಂದ ದೇಹ ಶುದ್ದಿ ಮಂತ್ರದಿಂದ ವ್ಯಾಖ್ಯ ಸುದ್ದಿ ಎಂಬುವಂತೆ ಮನುಷ್ಯ ಇಂದಿನ ಒತ್ತಡದ ಜೀವನದಲ್ಲಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದಿನ ನಿತ್ಯದ ಯೋಗ ಅಭ್ಯಾಸದಿಂದ ದೇಹ ಸದೃಢ ಗೊಳ್ಳುತ್ತದೆ ಅಲ್ಲದೆ ಆತ್ಮವಿಶ್ವಾಸ ದಂತಹ ಮನೋಭಾವನೆ ಮೂಡಿ ಮನಸ್ಸಿನಲ್ಲಿ ಉಲ್ಲಾಸ ತರುತ್ತದೆ ಎಂದು ಯೋಗ ಶಿಕ್ಷಕ ಮನೋಹರ್ ತಿಳಿಸಿದರು ,

ಇವರು ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಾಖೆಯಿಂದ ವೇದಾವತಿ ವಲಯದ ಸಹಯೋಗದೊಂದಿಗೆ ಆಯೋಜಿಸಿರುವ ಶ್ರೀ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ9ನೇ ಶಾಖೆ ಅನ್ನು ಉದ್ಘಾಟಿಸಿ ಮಾತನಾಡಿದ ಇವರು ,

ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ವೇಗದ ದುಡಿಮೆಗೆ ನಿಂತು ತಮ್ಮ ಆರೋಗ್ಯವನ್ನು ಅನಾರೋಗ್ಯದ ಕಡೆ ಕೊಂಡೊಯ್ಯುತ್ತಿದ್ದಾರೆ, ಈ ಹಿನ್ನಲೆಯಲ್ಲಿ ದೈಹಿಕ ಶ್ರಮವಿಲ್ಲದೆ ನಾನಾ ರೀತಿಯ ಕಾಯಿಲೆಗಳು ಉಲ್ಬಣಗೊಂಡು ಮನುಷ್ಯನ ಜೀವವನ್ನು ಹಿಂಡುತ್ತಿವೆ, ಅಲ್ಲದೆ ನಾವು ತಿನ್ನುವ ಆಹಾರವು ಪ್ರತಿಯೊಂದು ಕೆಮಿಕಲ್ ಮಿಶ್ರಿತವಾಗಿದ್ದು ಆಹಾರ ಗುಣಮಟ್ಟವಿಲ್ಲದೆ ಮನುಷ್ಯನ ಜೀವನ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿವೆ ಈ ಕಾರಣದಿಂದಾಗಿ ಪ್ರತಿಯೊಬ್ಬ ನಾಗರಿಕರು ನಮ್ಮ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಚಳ್ಳಕೆರೆ ನಗರದಲ್ಲಿ 9 ಶಾಖೆ ಹೊಂದಿದ್ದು ಉಚಿತವಾಗಿ ಯೋಗ ಶಿಕ್ಷಣ ತರಬೇತಿಯನ್ನು ಕೊಡುತ್ತೇವೆ ಈ ಕಾರಣದಿಂದಾಗಿ ಪ್ರತಿಯೊಬ್ಬ ನಾಗರಿಕರು ಯೋಗ ಶಿಕ್ಷಣದ ತರಬೇತಿಯನ್ನು ಪಡೆದು ದೇಹ ಶುದ್ದಿ ಕರೆಸಿಕೊಳ್ಳಿ ಯೋಗದ ಪ್ರಯೋಜನಗಳನ್ನು ಇನ್ನೊಬ್ಬರಿಗೆ ತಿಳಿಸಿ ಎಂದರು

ಇನ್ನು ಈ ವೇಳೆ ಅಗ್ನಿಹೋತ್ರ ಜೊತೆಗೆ ಯೋಗಾಭ್ಯಾಸಕ್ಕೆ ಚಾಲನೆ ನೀಡಲಾಯಿತು

ಇನ್ನು ಈ ಸಂದರ್ಭದಲ್ಲಿ ಎನ್ ಎಸ್ ಮಹೇಶ್ ತಾಲೂಕು ಸಂಚಾಲಕರು, ಯೋಗ ಪ್ರಶಸ್ತಿ ವಿಜೇತರು ಪಿ ಜಯರಾಮ್, ನಾಗವೇಣಿ, ಎನ್.ಚಂದ್ರಶೇಖರ ಆಚಾರ್ ತಾಲುಕ ವಿಶ್ವಕರ್ಮ ಅಧ್ಯಕ್ಷರು, ಯೋಗ ಶಿಕ್ಷಕ ಕೇಶವಚಾರ್ ಭೀಮಣ್ಣ, ವಾಣಿ, ಮಂಜುನಾಥ್ ಶ್ರೀಧರ ಚಾರ್ ಸೇರಿದಂತೆ ಇತರರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading