ನಾಯಕನಹಟ್ಟಿ : ಪಟ್ಟಣದಲ್ಲಿ ಹಾದು ಹೋಗಿರುವ ಆರಬಾವಿ- ಚಳ್ಳಕೆರೆ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಓಡಾಟದಿಂದ ಉಂಟಾಗುವ ಧೂಳಿನಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಹೈರಾಣರಾಗಿದ್ದಾರೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಎಸ್ ಟಿ ಎಸ್ ಆರ್ ಪದವಿಪೂರ್ವ ಕಾಲೇಜ್ ಹಾಗೂ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಇದೆ. ವಾಹನ ಸುದ್ದಿನ ಕಿರಿಕಿರಿ ಒಂದೆಡೆಯಾದರೆ, ಧೂಳಿನಿಂದ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಕಾಲೇಜಿಗೆ ದಾರಿಯುವುದಕ್ಕೂ ಬರುವ ಧೂಳಿಗೆ ವಿದ್ಯಾರ್ಥಿಗಳು ಮುಖ ಮುಚ್ಚಿಕೊಂಡು ಬರುವಂತಹಾಗಿದೆ. ವೇಗವಾಗಿ ಹೋಗುವ ವಾಹನ ಹಿಂದೆ ಬರುವ ವಿದ್ಯಾರ್ಥಿಗಳನ್ನು ದಟ್ಟವಾಗಿ ಆವರಿಸಿಕೊಳ್ಳುತ್ತದೆ. ಕ್ಷಣ ಕಾಲ ಕಣ್ಣು ಮುಚ್ಚಿಕೊಂಡು ನಿಲ್ಲಬೇಕು, ಇಲ್ಲದಿದ್ದರೆ ಕಲ್ಲಿನ ಸಣ್ಣ ಕಣಗಳು ಕಣ್ಣಿಗೆ ಹಾನಿ ಉಂಟು ಮಾಡುತ್ತವೆ. ಧೂಳಿನಲ್ಲಿಯೇ ಏಕಾಯಕಿ ಬರುವ ವಾಹನಗಳು ಪ್ರಾಣಕ್ಕೆ ಸಂಚಕಾರ ತಂದು ದೊಡ್ಡವಂತಿದೆ.
ಚಳ್ಳಕೆರೆ ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ನಾಯಕನಹಟ್ಟಿಗೆ ಆಸ್ಪತ್ರೆ, ನಾಡಕಚೇರಿ, ಪೊಲೀಸ್ ಠಾಣೆ, ಬ್ಯಾಂಕ್ ಸೇರಿದಂತೆ ಅನೇಕ ಕಾರಣಕ್ಕಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಾರೆ. ಆದರೆ ಹದಗೆಟ್ಟ ರಸ್ತೆಗಳಿಂದಾಗಿ ಉಂಟಾಗುವ ಧೂಳಿನಿಂದ ಜನರು ನಿತ್ಯ ಪರಿತಪಿಸುವಂತಾಗಿದೆ.
ಕೂಡಲೇ ದೂಳು ನಿಯಂತ್ರಿಸಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಆಗ್ರಹಿಸಿದರು.
About The Author
Discover more from JANADHWANI NEWS
Subscribe to get the latest posts sent to your email.