ಚಳ್ಳಕೆರೆ ನ.18
ವರುಣನ ಕೃಪೆಯಿಂದ ತಾಲೂಕಿನ ಹಲವು ಕೆರೆಗಳು ತುಂಬ್ಬಿದ್ದು, ರೈತಾಪಿವರ್ಗದಲ್ಲಿ ಹರ್ಷ ಮೂಡಿಸಿದೆ ಎಂದು ಶಾಸಕ.ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ನನ್ನಿವಾಳ ಗ್ರಾಮದ ತುಂಬಿದ ಕೆರೆಗೆ ಬಾಗಿನ ಅರ್ಪಿಸಿ ಮಸತನಾಡಿದರು.
ಬಹಳ ವರ್ಷಗಳಿಂದು ತುಂಬದ ಬಹುತೇಕ ಕೆರೆಗಳು ಕಳೆದ ತಿಂಗಳು ದುರಿದ ಅಕಾಲಿಕ ಮಳೆಗೆ ಕೆರೆಗಳು ತುಂಬಿ ಕೋಡಿ ಬಿದ್ದಿವೆ .ಕೆರೆಗಳು ತುಂಬಿರುವುದು ಅಂರ್ಜಲ ಹೆಚ್ಚಳದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರ ಕೃಷಿಗೂ ಸಹಕಾರಿಯಾಗಲಿದೆ ಎ.ಮದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ರಾಜಣ್ಣ, ಉಪಾಧ್ಯಕ್ಷೆ ಬೀಬಿ ಜಾನು, ಸದಸ್ಯರಾದ ಅಪ್ಪಣ್ಣ, ಬಸವರಾಜ್, ಚಿನ್ನಯ್ಯ, ಓಬಯ್ಯ,ಪಾರಿಜಾತ, ಗೀತಮ್ಮ, ಶಾರದಮ್ಮ, ಸಾವಿತ್ರಮ್ಮ, ದೊಡ್ಡ ಬಯ್ಯಣ್ಣ, ಮುಖಂಡರುಗಳಾದ ದೊರೆ ಬೈಯಣ್ಣ, ಕಿಲಾರಿ ಜೋಗಯ್ಯ, ಗಂಗಾಧರಪ್ಪ, ಓಬಯ್ಯ, ತಿಪ್ಪೇಸ್ವಾಮಿ, ಹಸನ್, ಪಾಲಯ್ಯ, ಪಾಪಯ್ಯ, ಓಬಣ್ಣ ಗುರುಮೂರ್ತಿ, ರಾಜಣ್ಣ ಇತರರಿದ್ದರು.
.



About The Author
Discover more from JANADHWANI NEWS
Subscribe to get the latest posts sent to your email.