ಚಳ್ಳಕೆರೆ: ಕರ್ನಾಟಕದ ಸಾಹಸಸಿಂಹ ಕನ್ನಡ ಚಲನಚಿತ್ರರಂಗದ ಮೇರು ಪ್ರತಿಭೆ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ರವರ ಚಲನಚಿತ್ರರಂಗದ ಹಾಗೂ ಸಾಮಾಜಿಕ ಸೇವೆಗಳನ್ನು ಸದಾ ಸ್ಮರಿಸಿಕೊಳ್ಳಬೇಕು ಹಾಗೂ ಅವರ ಆದರ್ಶ ಗುಣಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ ಕರೆ ನೀಡಿದರು.







ನಗರದ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 75 ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿಷ್ಣುವರ್ಧನ್ ರವರು ಮರಣ ಹೊಂದಿದ್ದರು ಸಹ ಇಂದಿಗೂ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ ಕನ್ನಡದ ಕೀರ್ತಿ ಪತಾಕೆಯನ್ನು ಇತರೆ ರಾಜ್ಯಗಳಲ್ಲಿ ಹಾರಿಸಿದ್ದರು ಚಿತ್ರದುರ್ಗ ಜಿಲ್ಲೆ ಹಾಗೂ ವಿಷ್ಣುವರ್ಧನ್ ಅವರಿಗೆ ಅವಿನಾಭಾವ ಸಂಬಂಧವಿತ್ತು ವಿಷ್ಣುರವರ ಚಿತ್ರರಂಗದ ಪ್ರವೇಶಕ್ಕೆ ಚಿತ್ರದುರ್ಗ ನೆಲೆಯಾಗಿತ್ತು ಚಳ್ಳಕೆರೆ ತಾಲೂಕಿನ ತರಾಸು ಕವಿಗಳು ರಚಿಸಿದ ಕಾದಂಬರಿ ಆಧಾರಿತ ನಾಗರಹಾವು ಚಲನಚಿತ್ರ ವಿಷ್ಣು ರವರ ಚಿತ್ರರಂಗ ಪ್ರವೇಶಕ್ಕೆ ಕಾರಣವಾಗಿತ್ತು ವಿಷ್ಣುವರ್ಧನ್ ರವರ ಹೆಸರನ್ನು ರಸ್ತೆಗೆ ಇಂದು ನಾಮಕರಣ ಮಾಡಿ ಅವರ ಹೆಸರನ್ನು ಅಜರಾಮರವಾಗಿ ಉಳಿಯುವಂತೆ ಅಭಿಮಾನಿಗಳು ಮಾಡಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು.
ಸಾಹಿತಿ ಹಾಗೂ ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ ಚಿತ್ರರಂಗದಲ್ಲಿ ಅನೇಕ ಕಲಾವಿದರನ್ನು ಕಾಣುತ್ತೇವೆ ಆದರೆ ಆದರ್ಶ ಪ್ರಾಯವಾದ ಜೀವನವನ್ನು ನಡೆಸಿದ್ದು ವಿಷ್ಣುವರ್ಧನ್ ರವರು ಅವರ ಜೀವನಶೈಲಿ ಯುವಕರಿಗೆ ಮಾದರಿಯಾಗುವಂಥದ್ದು ವಿಷ್ಣುವರ್ಧನ್ ಅಭಿಮಾನಿಗಳು ತಾವು ಮಾಡುವ ಕಾಯಕದಲ್ಲಿಯೂ ಸಹ ಅವರ ನೆನಪುಗಳನ್ನು ನೆನಪಿಸುತ್ತಾರೆ ವಿಷ್ಣು ಸಮಾಧಿಯನ್ನು ದ್ವಂಸಗೊಳಿಸಿದ ವಿಚಾರವಾಗಿ ತಾಲೂಕಿನಲ್ಲಿಯೂ ಹೋರಾಟಗಳನ್ನು ನಡೆಸಿ ಘಟನೆಯನ್ನು ಖಂಡಿಸಿದ್ದರು ಇಂದು ರಾಜ್ಯ ಸರ್ಕಾರ ವಿಷ್ಣುವರ್ಧನ್ ರವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ ವಿಷ್ಣುವರ್ಧನ್ ಇಂದು ನಮ್ಮೊಂದಿಗೆ ಜೀವಂತವಾಗಿ ಇಲ್ಲದಿದ್ದರೂ ಅವರ ಸಿನಿಮಾಗಳು ಹಾಗೂ ಮಾಡಿದ ಸಾಮಾಜಿಕ ಸೇವೆಗಳು ಸದಾ ನೆನಪಿರುತ್ತದೆ ವಿಷ್ಣುವರ್ಧನ್ ಅಭಿಮಾನಿಗಳು ನಗರದ ಪಾರ್ಕಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಮೂಲಕ ಅವರ ಹೆಸರನ್ನು ಅಮರವಾಗಿಸಬೇಕು ಎಂದು ಕರೆ ನೀಡಿದರು.
ನಗರದ ರಸ್ತೆಗೆ ವಿಷ್ಣುವರ್ಧನ್ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಶಿಲ್ಪ ವಿಷ್ಣುವರ್ಧನ್ ರವರ ಸಾಧನೆಗಳು ಅಪಾರವಾದದ್ದು ಅವರ ಚಲನಚಿತ್ರಗಳಲ್ಲಿ ಮೌಲ್ಯಯುತ ಸಂದೇಶಗಳ ಸಾರುವ ಮೂಲಕ ಯುವ ಪೀಳಿಗೆಗೆ ದಾರಿದೀಪವಾಗಿದ್ದರು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಕವಿತಾ ಎಲ್ಐಸಿ ತಿಪ್ಪೇಸ್ವಾಮಿ ಆಮ್ ಆದ್ಮಿ ಪಕ್ಷದ ಪಾಪಣ್ಣ ನಗರಸಭೆ ಸದಸ್ಯ ವಿಶುಕುಮಾರ್ ರಾಜಣ್ಣ ತಿಪ್ಪೇಸ್ವಾಮಿ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ರಘುವಿಷ್ಣು ವರ್ಧನ ಉಪಾಧ್ಯಕ್ಷ ರವಿ ಕರ್ಣ ಗೌರವಾಧ್ಯಕ್ಷರು ಬೆಟ್ಟಪ್ಪ ಕಾರ್ಯದರ್ಶಿ ಮಂಜುನಾಥ್ ರಮೇಶ್ ರಾಮಾಚಾರಿ ಕಾಶಿನಾಥ್ ಕೃಷ್ಣ ಪೂಜಾರಿ ತಿಮ್ಮಪ್ಪ ಅಭಿಲಾಶ್
ಸತೀಶ್ ಶ್ರೀಕಾಂತ್ ತಿಮ್ಮರಾಜ್ ತಿಲಕ್ ರಾಜ್ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.