
ವರದಿ : ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ಜಗಳೂರು:: ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ಟಿವಿ ಮೊಬೈಲ್ ನಿಂದ ದೂರವಿಡಿ ಎಂದು ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ ಹೇಳಿದರು.








ಶುಕ್ರವಾರ ತಾಲೂಕಿನ ಸೊಕ್ಕೆ ಗ್ರಾಮದ ರಾಜ ಲಿಂಗ ಸ್ವಾಮಿ ಎಸ್ಸಿ /ಎಸ್ಟಿ ವಿದ್ಯಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಎಸ್ ಕೆ ಓ ಎಸ್.ಟಿ ಮೆಮೋರಿಯಲ್ ಶಾಲೆಯಲ್ಲಿ ಅಕ್ಷರ ಅಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಗುವಿಗೆ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಉತ್ತಮ ಪ್ರಜೆಗಳನ್ನಾಗಿಸಲು ಅಕ್ಷರಾಭ್ಯಾಸ ಕಾರ್ಯಕ್ರಮ ತುಂಬಾ ಮಹತ್ವವಾದದ್ದು ಪ್ರತಿಯೊಬ್ಬ ಪೋಷಕರು ಶಿಕ್ಷಕರ ನೀಡಿದ ಶಿಕ್ಷಣಕ್ಕಿಂತ ಮನೆಯಲ್ಲಿ ತಂದೆ ತಾಯಿ ಉತ್ತಮ ಸಂಸ್ಕಾರ ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿಸುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಲು ಪ್ರೇರಣೆಯಾಗಬೇಕು ಹಾಗಾದಾಗ ಮಾತ್ರ ಮಕ್ಕಳು ಗುರಿಯನ್ನು ಸಾಧಿಸಲು ಮತ್ತು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಇನ್ನೂ ಮಕ್ಕಳ ತಾಯಂದಿರಿಗೆ ಶಾಲೆಯ ಶಿಕ್ಷಕಿಯರು ಕುಂಕುಮವಿಟ್ಟು ಆರುತಿ ಬೆಳಗಿ ಅದ್ದೂರಿಯಾಗಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ವೈ.ಎನ್.ಅನಿತಾ, ಶಿಕ್ಷಕಿರಾದ ನಾಗರತ್ನ, ಅನಿತಾ, ಕಲಾವತಿ, ನೇತ್ರಾವತಿ, ಕವನ, ವಿನುತ, ಭುವನೇಶ್ವರಿ, ಭಾಗ್ಯಲಕ್ಷ್ಮೀ, ವಿನುತಾ, ವಾಹನ ಚಾಲಕ ಹರೀಶ್, ಸಿದ್ದೇಶ್, ಆಯಾ ರೇಖಾ, ಕೆಂಚಮ್ಮ, ಪೋಷಕರು ತಾಯಂದಿರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.