July 20, 2025
IMG20250718114259_01.jpg

ಚಳ್ಳಕೆರೆ: ನಗರದ ಸಿ ಜಿ ಎಸ್ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಅಭಿನಂದನ ಗ್ರಂಥ ಸ್ಪಂದನ ಜನಾರ್ಪಣೆ ಮತ್ತು ಹೃದಯದ ಆರೋಗ್ಯ ಸಂರಕ್ಷಣೆ ಹಾಗೂ ಮಧುಮೇಹ ಸಲಹಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವೈದ್ಯ ವಿಸ್ಮಯ ಪ್ರಶಸ್ತಿಯನ್ನು ಕೆ ಎಸ್ ರವೀಂದ್ರನಾಥ್ ವೈದ್ಯಶ್ರೀ ಪ್ರಶಸ್ತಿಯನ್ನು ಡಾ. ಮುದ್ದು ರಂಗಪ್ಪ ಅಭಿವೃದ್ಧಿ ಶಿಲ್ಪಿ ಪ್ರಶಸ್ತಿಯನ್ನು ಶಾಸಕ ಟಿ ರಘುಮೂರ್ತಿ ಅವರಿಗೆ ಗೌರವಿಸಲಾಗುವುದು ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ಸಿ ಶಿವಲಿಂಗಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಸೂತಿ ತಜ್ಞೆ ಡಾ. ಪೂಜಾ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚುತ್ತಿದ್ದು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಹೃದಯದ ಆರೋಗ್ಯ ಸಂರಕ್ಷಣೆ ಹಾಗೂ ಮಧುಮೇಹ ಸಲಹಾ ಸಮಾರಂಭವನ್ನು ಹಮ್ಮಿಕೊಂಡಿದ್ದು ಬೆಂಗಳೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕ ಮತ್ತು ವಿಶ್ರಾಂತ ಕುಲಪತಿಗಳಾದ ಡಾ. ಕೆ ಎಸ್ ರವೀಂದ್ರನಾಥ್ ರವರ ಸ್ಪಂದನ ಕೃತಿಯನ್ನು ಶಾಸಕ ಟಿ ರಘು ಮೂರ್ತಿಯವರಿಂದ ಲೋಕಾರ್ಪಣೆಗೊಳ್ಳಲಿದ್ದು ರವೀಂದ್ರನಾಥ್ ರವರು ಹೃದಯದ ಆರೋಗ್ಯ ಸಂರಕ್ಷಣೆ ಮತ್ತು ಮಾರ್ಗದರ್ಶನ ನೀಡುವರು.

ಮಧುಮೇಹ ಮತ್ತು ಜೀವನಶೈಲಿ ಕುರಿತು ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಡಯಾಬಿಟಿಸ್ ಸಲಹಾ ತಜ್ಞರಾದ ಡಾ. ಆರ್ ಮುದ್ದ ರಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಶ್ರೀ ನರ್ಸಿಂಗ್ ಹೋಮ್ ನ ಮಕ್ಕಳ ತಜ್ಞ ಡಾ. ಎಚ್ ಎಮ್ ಹನುಮಂತರಾಯ ವಹಿಸಲಿದ್ದು ಕಾರ್ಯಕ್ರಮದ ಅಭಿನಂದನಾ ನುಡಿಯನ್ನು ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಶಿಲ್ಪ ಉಪಾಧ್ಯಕ್ಷೆ ಕವಿತಾ ಸ್ಥಾಯಿಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ನಗರಸಭೆ ಸದಸ್ಯರಾದ ಸುಮ ಭರಮಯ್ಯ ಎಂಆರ್ ರೇವಣ್ಣ ಗೌರವ ಉಪಸ್ಥಿತರಾಗಿ ಪ್ರೊ ಬಿ ಶರಣಪ್ಪ ಸಾಹಿತಿ ತಿಪ್ಪಣ್ಣ ಮರಿಕುಂಟೆ ವಿಶ್ರಾಂತ ಕುಲ ಸಚಿವ ಡಾ. ಪ್ರಾಣೇಶ್ ಗುಡೂರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ ರಾಜ್ಯದಲ್ಲಿ ಆಗುತ್ತಿರುವ ಸರಣಿ ಹೃದಯಾಘಾತಗಳಿಗೆ ಗ್ರಾಮೀಣ ಭಾಗಗಳಲ್ಲಿ ಜನರು ಹಾಗೂ ರೈತಾಪಿ ವರ್ಗ ಆತಂಕಗೊಂಡಿದ್ದು ಬಯಲು ಸೀಮೆ ಪ್ರದೇಶವಾದ ಚಿತ್ರದುರ್ಗ ಚಳ್ಳಕೆರೆ ತಾಲೂಕುಗಳ ಜನರಿಗೆ ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದ್ದು ಕೆ ಎಸ್ ರವೀಂದ್ರನಾಥ್ ರವರ ವೈದ್ಯಕೀಯ ಅನುಭವವನ್ನು ಹಂಚಿಕೊಳ್ಳಲಿದ್ದು ಕಾರ್ಯಕ್ರಮಕ್ಕೆ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ. ಆದಿ ವಿಶ್ವನಾಥ ಗುಪ್ತ ಪ್ರೊಫೆಸರ್ ವೀರಣ್ಣ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading