
ಸಿಟಿ ರವಿ ಎಂದರೆ ಧರ್ಮ ಸಂಸ್ಕೃತಿ ರಾಷ್ಟ್ರೀಯತೆ ಮತ್ತು ಸ್ವಾಭಿಮಾನದ ಸಂಕೇತ ಎಂದು ನಿವೃತ್ತ ಕೆಎಸ್ ಅಧಿಕಾರಿ ಎಂದು ರಘುಮೂರ್ತಿ ಹೇಳಿದರು
ಅವರು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದಲ್ಲಿ ಸಿಟಿ ರವಿ ಅವರ ಜನ್ಮದಿನಾಚರಣೆಯ ಸಂಬಂಧ ವಿಶೇಷ ಪೂಜೆ ಮತ್ತು ಸಂಕಲ್ಪ ನೆರವೇರಿಸಿ ಮಾತನಾಡಿ ಹುಟ್ಟಿನಿಂದ ಹೋರಾಟಗಾರರು ಸಿಟಿ ರವಿ ಅವರ ಸತತ ನಾಲ್ಕು ಬಾರಿ ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿ ಎರಡು ಬಾರಿ ರಾಜ್ಯ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಾಗಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯರಾಗಿ ತಮ್ಮ ನೇರ ನುಡಿ ಮತ್ತು ನಡೆಯಿಂದ ಈ ನಾಡಿಗೆ ಕೀರ್ತಿ ತಂದಂತವರು ಬಿಜೆಪಿ ನೆಲೆ ಇಲ್ಲದ ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸಿದವರು ಬಿಎಸ್ ಯಡಿಯೂರಪ್ಪ ಅವರ ಜೊತೆಗೂಡಿ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಭಾರತದ ಸನಾತನ ಸಂಸ್ಕೃತಿ ಧರ್ಮ ಮತ್ತು ರಾಷ್ಟ್ರ ಅಭಿಮಾನವನ್ನು ಎಲ್ಲೆಡೆ ಬಿತ್ತಿದವರು ಯಾವತ್ತೂ ಸ್ವಾಭಿಮಾನವನ್ನು ಬಿಟ್ಟುಕೊಡದವರು ಇವರು ಇನ್ನೂ ಈ ನಾಡಿನಲ್ಲಿ ಹೆಚ್ಚು ಹೆಚ್ಚು ಇಂತಹ ಪಕ್ಷದ ಸಮಾಜದ ಮತ್ತು ಬಡವರ ದಮನಿತರ ಶೋಷಿತರ ಧ್ವನಿ ಇಲ್ಲದವರ ಕೆಲಸವನ್ನು ಮಾಡಲು ಶಕ್ತಿ ಕೊಡಲಿ ಮಾಡಿದಷ್ಟು ನೀಡು ಭಿಕ್ಷೆಯನ್ನು ಕರುಣಿಸುವ ಶ್ರೀ ಗುರು ತಿಪ್ಪೇರುದ್ರಸ್ವಾಮಿಯು ಇಂತಹ ನೆರವಂತಿಕೆ ಹೊಂದಿರುವಂತ ಸಿಟಿ ರವಿ ಅವರು ಮುಂದಿನ ದಿನಗಳಲ್ಲಿ ಈ ದೇಶದ ಮತ್ತು ರಾಜ್ಯದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಅಭಿಜ್ಞಾನ ಕರುಣಿಸಲಿ ಎಂದು ಆಶಿಸಿದರು ಇದೇ ಸಂದರ್ಭದಲ್ಲಿ ಮಾಜಿ ಬಿಜೆಪಿ ಮಂಡಲ ಅಧ್ಯಕ್ಷರಾದಂತ ಎಂ ಓ ಟಿ ಸ್ವಾಮಿ ನಗರ ಬಿಜೆಪಿ ಅಧ್ಯಕ್ಷರಾದ ನಾಗರಾಜ್ ಮಂಡಲದ ಯುವ ಅಧ್ಯಕ್ಷರಾದ ತ್ರಿಶುಲ್ ಜಿಲ್ಲಾ ಬಿಜೆಪಿ ಎಸ್ಟಿಮೋರ್ಚಾ ಅಧ್ಯಕ್ಷರಾದ ಶಿವಣ್ಣ ಬಿ ಜೆ ಪಿ ಮುಖಂಡರಾದ ಬೋಸೆರಂಗಪ್ಪ ಮುಂತಾದವರು ಉಪಸ್ಥಿತರಿದ್ದರು



About The Author
Discover more from JANADHWANI NEWS
Subscribe to get the latest posts sent to your email.