September 15, 2025
IMG-20250418-WA0055.jpg

 

    ವರದಿ ಹರೀಶ್ ನಾಯಕನಹಟ್ಟಿ

ನಾಯಕನಹಟ್ಟಿ ಏ.18.ಮಹಿಳಾ ಅಧ್ಯಕ್ಷರು ಇರುವಂತಹ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಪತಿರಾಯರ ಹಾಗೂ ಅವರ ಕುಟುಂಬದ ಸದಸ್ಯರು
ಮೂಗು ತೂರಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯರ ಪತಿರಾಯರು ಹಾಗೂ ಸಂಬಂಧಿಕರು ಪಂಚಾಯಿತಿಯ ಯಾವುದೇ ಆಡಳಿತ ವಿಚಾರಗಳಲ್ಲಿ ಭಾಗಿಯಾಗುವಂತಿಲ್ಲಎಂಬ ಸರಕಾರದ ನಿಯಮವಿದೆ. ಈ ನಡುವೆಯೂ ಪತಿರಾಯರು ಹಾಗೂ ಕುಟುಂಬದ ಸದಸ್ಯರು ತಾವೇ ಅಧ್ಯಕ್ಷರ ರೀತಿಯಲ್ಲಿಅತಿರೇಕದ ವರ್ತನೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ
ಹೌದು ಇಂತಹದ್ದೊಂದು ಘಟನೆ ಈಗ ಚಳ್ಳಕೆರೆ ತಾಲೂಕಿನ  ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆಯ  ಅಣ್ಣನ ಕಾರ್ಯವೈಖರಿಗೆ ರೋಸಿ ಗ್ರಾಪಂ ಅಧ್ಯಕ್ಷೆಯ ಕೊಠಡಿಗೆ ಸದಸ್ಯರು ಬೀಗ ಜಡಿದು ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.

ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸರಿತಾಬಾಯಿ, ರಾಜನಾಯ್ಕ ಅಥವಾ ಸಂತೋಷ್ ನಾಯ್ಕನ ಈ ಮೂವರಲ್ಲಿ ಅಧ್ಯಕ್ಷರುಗಳು ಯಾರು? ಸಾರ್ವಜನಿಕರಿಗೆ ಸದಸ್ಯರುಗಳಿಗೆ ಗೊಂದಲ ಉಂಟಾಗಿದೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಿ ಸದಸ್ಯ ಕಾಟಯ್ಯ ಆಕ್ರೋಷ ವ್ಯಕ್ತಪಡಿಸಿದರು.

ಸಮೀಪದ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಿ ಸದಸ್ಯ ಕಾಟಯ್ಯ ಸರ್ವ ಸದಸ್ಯರುಗಳು ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೊಠಡಿಗೆ ಬೀಗ ಜಡಿಯಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕೆಲಸ ಕಾರ್ಯ ಕೈಗೊಂಡರು ಸದಸ್ಯರ ಗಮನಕ್ಕೆ ತಾರದೆ ಒಬ್ಬರೇ ಸರ್ವಾಧಿಕಾರಿ ನಡೆಸುತ್ತಾರೆ.

ಸಾಮಾನ್ಯ ಸಭೆಯಲ್ಲಿ ಕೈಗೊಂಡತ ಕಾರ್ಯಗಳನ್ನು ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷತೆ ಸರಿತಾಬಾಯಿ ಕಾರ್ಯರೂಪಕ್ಕೆ ತರದೆ ಬೇಜವಬ್ದಾರಿ ನಿರ್ವಹಿಸುತ್ತಿದ್ದಾರೆ.

ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಸರಿತಾಬಾಯಿ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಅವರನ್ನು ವಜಾ ಮಾಡಬೇಕೆಂದು ಸರ್ವ ಸದಸ್ಯರುಗಳು ಒಪ್ಪಿಗೆ ಸೂಚಿಸಿದ್ದಾರೆ.

ಅವರ ಅಣ್ಣನಾದ ಸಂತೋಷ್‌ನಾಯ್ಕ ನಮ್ಮ ಗ್ರಾಮ ಪಂಚಾಯಿತಿ ಹಿನ್ನಡೆಗೆ ಕಾರಣಬೂತರಾಗಿರುತ್ತಾರೆ.

ಪದೇ ಪದೇ ಗ್ರಾಮ ಪಂಚಾಯಿತಿಗೆ ಬಂದು ನಾನು ಅಧ್ಯಕ್ಷ ಅಂತ ಹೇಳಿಕೊಳ್ಳುತ್ತಾನೆ.

ಆದ್ದರಿಂದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.

ಕಳೆದವಾರ ದೊಡ್ಲಮಾರಮ್ಮ ಜಾತ್ರೆಗೆ ಸದಸ್ಯರಿಗೆ ಮಾಹಿತಿ ತಿಳಿಸದೆ ನಮ್ಮ ಕೈಯಿಂದ ಹಣ ಖರ್ಚು ಮಾಡಿದ್ದೇನೆ ಎಂದು ದಾಖಲೆಗಳನ್ನು ತೊರಿಸದೆ

ಸಾಕಷ್ಟು ಹಣ ಖರ್ಚು ಮಾಡಿದ್ದೇನೆ ಎಂದು ಸದಸ್ಯರುಗಳಿಗೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಅವರು ಮಾತನಾಡಿದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಿ ಸದಸ್ಯ ಡಾ.ಕಾಟಲಿಂಗಯ್ಯ ಮಾತನಾಡಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾಬಾಯಿ ಗಾಳಿಗೆ ತೂರಿ ತನ್ನ ಇಚ್ಚೆಯಂತೆ ತನ್ನ ಅಣ್ಣನಾದ ಸಂತೋಷ್‌ನಾಯ್ಕ ಹೇಳಿದ ಹಾಗೆ ಕೇಳುತ್ತಿದ್ದಾರೆ.

ಪದೇ ಪದೇ ಗ್ರಾಮ ಪಂಚಾಯಿತಿ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ.

ಹಲವಾರು ಸದಸ್ಯರುಗಳು ವಾರ್ಡ್ನ ಸಮಸ್ಯೆಗಳು ಸಾಕಷ್ಟು ಇವೆ. ಸಾಮಾನ್ಯ ಸಭೆಯಲ್ಲಿ ಪ್ರಸ್ಥಾಪಿಸಿದ್ದಾಗ ಅವಸರದಲ್ಲಿ ಬೇರೆಕಡೆ ಸಭೆ ಇದೆ ಎಂದು ಹೇಳಿ ಅರ್ಧಕ್ಕೆ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾಬಾಯಿಯವರನ್ನು ಅತೀ ಶೀಘ್ರದಲ್ಲೆ ಅವರನ್ನು ವಜಾ ಮಾಡಿ ಹೊಸ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಮಾಜಿ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ರಾಜಣ್ಣ, ಟಿ.ಕಾಟಯ್ಯ, ಡಾ.ಕಾಟಲಿಂಗಯ್ಯ, ಗುರುಮೂರ್ತಿ, ಸೂರಮ್ಮ, ಅಕ್ಕಮ್ಮ, ಶಿವರುದ್ರಮ್ಮ, ರಾಯಮ್ಮ, ಸುಮ, ಹಾಗೂ ಸರ್ವ ಸದಸ್ಯರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading