ನಾಯಕನಹಟ್ಟಿ: ಕಾಯಕಯೋಗಿ ಗುರು ತಿಪ್ಪೇರುದ್ರ ಸ್ವಾಮಿ ವಾರ್ಷಿಕ ಮಹಾಜಾತ್ರೆಯ ನಿಮಿತ್ತ ಮಂಗಳವಾರ ಪಟ್ಟಣದ ಹೊರಮಠದಿಂದ ಒಳಮಠದವರೆಗೂ ವಸಂತೋತ್ಸವ ಕಾರ್ಯಕ್ರಮದ ನಿಮಿತ್ತ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಿತು. 1 ಕಿ.ಮೀ ದೂರದವರೆಗೂ ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು.









ಸೋಮವಾರ ರಾತ್ರಿ ಅಲಂಕೃತ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಸಾಂಪ್ರದಾಯಿಕ ವಾದ್ಯಗಳು ಹಾಗೂ ದೇವರ ಪಟ್ಟದ ಗೂಳಿಯೊಂದಿಗೆ ರಾತ್ರಿ 12.30ಕ್ಕೆ ಪಾದಗಟ್ಟೆಯವರೆಗೂ ಹೊತ್ತು
ತರಲಾಯಿತು. ನಂತರ ಬೆಳಗಿನಜಾವ ವಿವಿಧ ಪೂಜೆಗಳನ್ನು ನೆರವೇರಿಸಿ ನಂತರ ಹೊರಮಠಕ್ಕೆ ಕರೆತರಲಾಯಿತು. ಮಂಗಳವಾರ ಬೆಳಿಗ್ಗೆ 8.30ಕ್ಕೆ ಊಳಿಗ ಸೇವೆಯನ್ನು ಮುಗಿಸಿಕೊಂಡು ಹೊರಟಾಗ ದಾರಿಯುದ್ದಕ್ಕೂ ಹರಕೆ
ಹೊತ್ತ ಮಹಿಳೆಯರು, ಮಕ್ಕಳು, ಪುರುಷರು ಸಾಲಾಗಿ ಅಡ್ಡಮಲಗಿದರು. ಪಲ್ಲಕ್ಕಿ ಹೊತ್ತ ಊಳಿಗದ ಯುವಕರು ಭಕ್ತರನ್ನು ದಾಟಿಕೊಂಡು ಬರುತ್ತಿದ್ದರು.
ಹಿಂದಿನಿಂದ ಈ ಪದ್ಧತಿ ಬೆಳೆದು ಬಂದಿದೆ. ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪಲ್ಲಕ್ಕಿ ಸೇವೆ ಮಾಡುತ್ತಾರೆ. ಪಲ್ಲಕ್ಕಿಸೇವೆ ಮಾಡುವುದರಿಂದ ಸಕಲ ರೋಗ- ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆಯಿದೆ.
ನಾಯಕನಹಟ್ಟಿ ಪಟ್ಟಣದಲ್ಲಿ ಗುರುವಾರ ವಂಸತೋತ್ಸವದ ನಿಮಿತ್ತ ಗುರುತಿಪ್ಪೇರುದ್ರಸ್ವಾಮಿ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವಾಗ ಭಕ್ತರು ಅಡ್ಡಮಲಗಿ ಹರಕೆ ಸಲ್ಲಿಸುತ್ತಿರುವುದು
ದೇವಾಲಯದ ಅರ್ಚಕ ಮನೆತನದ ಮಹಿಳೆಯರು ದೇವರಿಗೆ ವಿಶೇಷ ಆರತಿ ದೀಪಗಳನ್ನು ಬೆಳಗಿ ಗುರುತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಗುಡಿದುಂಬಿಸಿದರು. ಇದೇ ವೇಳೆ ಪಟ್ಟದ ಬಸವಣ್ಣನ (ಗೂಳಿ) ಪೂಜೆ ನೆರವೇರಿಸಿ ಎಳೆಯಲಾಯಿತು. ಮಾಡಿ ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿದ ನೂರಾರು ಊಳಿಗದ ಯುವಕರಿಗೆ ಬಾಳೆಹಣ್ಣು ಪ್ರಸಾದ ವಿನಿಯೋಗಿಸಲಾಯಿತು. ಮೂಲಕ ವಾರ್ಷಿಕ ಜಾತ್ರಾ
ಮಂಗಳಾರತಿ
ಈ
ತೆರೆ
ಮಹೋತ್ಸವಕ್ಕೆ .
ಸೋಮವಾರ ಮರಿಪರಿಷೆ: ಮಾರ್ಚ್ 24 ಸೋಮವಾರ ಮರಿಪರಿಷೆ
ಮಾಡಲಾಗುತ್ತದೆ. ವಾರ್ಷಿಕ ಜಾತ್ರೆಗೆ ಬಾರದೇ ಇರುವ ಭಕ್ತರು ಮರಿಪರೆಸಿಗೆ ಬಂದು ದೇವರಿಗೆ ಹರಕೆ ಸಲ್ಲಿಸುತ್ತಾರೆ ಮಹಿಳೆಯರು ಮಕ್ಕಳು ವೃದ್ಧರು ಜನಸಂದಣಿಯ ಹಿನ್ನೆಲೆಯಲ್ಲಿ ಮಹಾರಥೋತ್ಸವಕ್ಕೆ ಬಾರದೆ ಇರುವವರು, ಮರಿಪರಿಷೆಗೆ ಬರುತ್ತಾರೆ. ಮುಂದಿನ ವರ್ಷದ ವಾರ್ಷಿಕ ಜಾತ್ರೆ ಮುನ್ನುಡಿಯಾಗಿ ಇದನ್ನ ಆಚರಿಸುತ್ತಾರೆ ಎಂಬ ಪ್ರತೀತಿ ಇದೆ ಎಂದು ಪಟ್ಟಣದ ದಳವಾಯಿ ರುದ್ರಮುನಿ ಮಾಹಿತಿಯನ್ನು ನೀಡಿದರು.
About The Author
Discover more from JANADHWANI NEWS
Subscribe to get the latest posts sent to your email.