March 17, 2026
IMG-20250318-WA0169.jpg

ನಾಯಕನಹಟ್ಟಿ: ಮಾ‌.18.ನೇರಲಗುಂಟೆ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷೆರಾಗಿ ರುದ್ರಮುನಿ ಆಯ್ಕೆಯಾಗಿದ್ದಾರೆ.

ಒಟ್ಟು 16 ಸದಸ್ಯರ ಬಲವುಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿತ್ತು,
ಹಿಂದಿನ ಅಧ್ಯಕ್ಷೆ ಸುಷ್ಮ ಸುರೇಶ್ ನಾಯಕ
ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಅಧ್ಯಕ್ಷ ಸ್ಥಾನಕ್ಕೆ ಆರ್ .ಚಂದ್ರಶೇಖರ ಮತ್ತು ರುದ್ರಮುನಿ ಇಬ್ಬರು ನಾಮ ಪತ್ರ ಸಲ್ಲಿಸಿದ್ದರು. ಅಂತಿಮವಾಗಿ ನಡೆದ ಚುನಾವಣೆಯಲ್ಲಿ 9ಮತಗಳನ್ನು ಪಡೆಯುವ ಮೂಲಕ ರುದ್ರಮುನಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಸ್ಪರ್ದಿ ಚಂದ್ರಶೇಖರ್ 07ಮತ ಪಡೆಯುವ ಮೂಲಕ ಪರಭಾವಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ತಾಲೂಕು ಪಂಚಾಯಿತಿ ಇಒ ಶಶಿಧರ್ ತಿಳಿಸಿದರು.ಇನ್ನೂ ಚುನಾವಣಾ ಪ್ರಕ್ರಿಯೆಯಲ್ಲಿ 16 ಜನ ಸದಸ್ಯರು ಮತದಾನದ ಹಕ್ಕು ಚಲಾಯಿಸಿದ್ದರು.

ಇದೇ ಸಂದರ್ಭದಲ್ಲಿ ಮುಖಂಡರಾದ ನೇರಲಗುಂಟೆ ಸೂರನಾಯಕ, ಭೀಮನಕೆರೆ ಪಾಲಯ್ಯ, ಜಿ. ತಿಪ್ಪೇಸ್ವಾಮಿ, ವರವು ಕಾಟಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಎ.ಒ. ಗೋಪಾಲನಾಯಕ, ನಾಗಮಣಿ ,ದುರುಗಮ್ಮ, ತಿಪ್ಪೇಸ್ವಾಮಿ, ಚನ್ನಕೇಶವ, ಸುಷ್ಮಾ ಸುರೇಶ್ ನಾಯಕ, ಗೌರಣ್ಣ,
ಗ್ರಾಮಸ್ಥರಾದ ಕನಕ ಬ್ಯಾಂಕ್ ಚಂದ್ರಶೇಖರ್, ಮಂಜಣ್ಣ, ಕೆ.ಬಿ.ಚಂದ್ರಣ್ಣ, ಎಸ್ಆರ್ ರೇವಣ್ಣ, ಕೆ ರಾಮಣ್ಣ, ಎಸ್ ನಾಗರಾಜ್, ಎ.ಮಂಜಣ್ಣ, ಪಿಡಿಒ ಕೆ. ಎಸ್ ಜಯಣ್ಣ, ಬಿಲ್ ಕಲೆಕ್ಟರ್ ತಿಪ್ಪೇಸ್ವಾಮಿ, ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ದೇವರಾಜ್, ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading