ತಳಕು: ಹೋಬಳಿಯ ಗೌರಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿದ್ಯಾರ್ಥಿಗಳ ಸದುಪ ‘ಯೋಗಕ್ಕಾಗಿ ಇಂಗ್ಲಿಷ್ ಭಾಷೆಗೆ ಸಂಬಂಧಪಟ್ಟಂತೆ ವಿಶೇಷ ತರಗತಿಗಳನ್ನು ನಡೆಸಲಾಗಿದ್ದು, ಅದರ ಸಮಾರೋಪ ಸಮಾರಂಭವನ್ನು ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಅನುಸೂಯಮ್ಮ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಶಾಲೆಗಳ ಬಗ್ಗೆ ಎಲ್ಲರೂ ಜಾಗೃತೆ ವಹಿಸುತ್ತಿರುವುದು ಸಂತಸ ವಿಷಯ. ವಿಶೇಷವಾಗಿ
ತಾಲ್ಲೂಕಿನ ಗಡಿಭಾಗದಲ್ಲಿ ರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಕಠಿಣವಾಗಿದ್ದು, ಮೂರು ತಿಂಗಳ ಕಾಲ ಅವರಿಗೆ ವಿಶೇಷ ತರಬೇತಿ ನೀಡಿ ಸಹಕಾರ
ನೀಡಲಾಗಿದೆ. ಶ್ರೀ ಕ್ಷೇತ್ರಧರ್ಮಸ್ಥಳ ಯೋಜನೆವತಿಯಿಂದ ಅತಿಥಿ ಶಿಕ್ಷಕರನ್ನು ನಿಯೋಜಿಸಿ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ನೀಡಲಾಗಿದ್ದು, ಶಾಲೆಯ ಪರವಾಗಿ ಅಭಿನಂದಿ ಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಯಶೋಧ, ಶಿಕ್ಷಕ ಹುಲುಗಪ್ಪ, ಗಣಿತ ಶಿಕ್ಷಕಿ ವಿದ್ಯಾವತಿ, ಚಿತ್ರಕಲಾಶಿಕ್ಷಕ ಶಿವಾನಂದ ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.